ಮೂಲ್ಕಿ ಪ.ಪಂ. ಚುನಾವಣೆ 60 ನಾಮಪತ್ರ ಸಲ್ಲಿಕೆ

ಮೂಲ್ಕಿ; ಮೂಲ್ಕಿ ಪಟ್ಟಣ ಪಂಚಾಯತಿಯ ನೂತನ ಆಡಳಿತಕ್ಕೆ ಜ.27ರಂದು ನಡೆಯಲಿರುವ ಚುನಾವಣೆಗಾಗಿ ಅಂತಿಮ ದಿನವಾದ ಸೋಮವಾರ ವಿವಿಧ ಪಕ್ಷಗಳಿಂದ 60 ನಾಮಪತ್ರ ಸಲ್ಲಿಕೆ ಆಗಿದೆ.

OLYMPUS DIGITAL CAMERA

ಕಾಂಗ್ರೆಸ್ಸಿನಿಂದ ಅಬ್ದುಲ್ ರಜಾಕ್ (ವಾರ್ಡ್.1), ಮೆಲಿಟಾ(ವಾ.2), ಗಾಯತ್ರಿ ಗುಜರನ್ (ವಾ3), ಸುಂದರ ಅಂಚನ್ (ವಾ.4), ಜಬೀನಾ (ವಾ.5), ಶಶಿಕಾಂತ ಶೆಟ್ಟಿ (ವಾ.6), ಯೋಗೀಶ್ ಕೋಟ್ಯಾನ್(ವಾ.7), ಸುಧಾ ಶೆಟ್ಟಿ (ವಾ.8), ಪುತ್ತುಬಾವ (ವಾ.9), ವಿನಯಾ (ವಾ.10), ಜೀವನ್ ಪೂಜಾರಿ (ವಾ.11), ವಿಮಲಾ ಪೂಜಾರಿ (ವಾ.12), ಚಂದ್ರವ್ವ (ವಾ.13), ಕಲಾವತಿ (ವಾ.14), ಬಿ.ಎಂ.ಆಸೀಫ್(ವಾ.15), ಹಸನ್ (ವಾ.16), ಕುಸುಮಾ (ವಾ.17) ನಾಮಪತ್ರ ಸಲ್ಲಿಸಿದರು. ಸಚಿವ ಅಭಯಚಂದ್ರ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಸಾಲ್ಯಾನ್ ಇನ್ನಿತರರು ಹಾಜರಿದ್ದರು.
ಬಿಜೆಪಿಯಿಂದ ಪುರುಷೋತ್ತಮ (ವಾ.1), ವೀಣಾ (ವಾ.2), ವಸಂತಿ ಭಂಡಾರಿ(ವಾ.3), ಉಮೇಶ್ ಮಾನಂಪಾಡಿ (ವಾ.4), ಸಾರಿಕಾ (ವಾ.5), ಹರ್ಷರಾಜ್ ಶೆಟ್ಟಿ (ವಾ.6, ಸುನಿಲ್ ಆಳ್ವಾ (ವಾ.7), ರಾಧಿಕಾ (ವಾ.8), ರಾಜೇಶ(ವಾ.9), ಮೀನಾಕ್ಷಿ(ವಾ.10), ಶಂಕ್ರವ್ವ(ವಾ.13), ಪ್ರವೀಣ(ವಾ.14), ಕುಸುಮಾ(ವಾ.17) ನಾಮಪತ್ರ ಸಲ್ಲಿಸಿದರು. ಸಂಸದ ನಳಿನ್‌ಕುಮಾರ್ ಕಟೀಲು, ಉಮಾನಾಥ ಕೋಟ್ಯಾನ್, ಗಣೇಶ್ ಕಾರ್ಣಿಕ್, ಕೆ.ಪಿ.ಸುಚರಿತ ಶೆಟ್ಟಿ, ಕಸ್ತೂರಿ ಪಂಜ, ಈಶ್ವರ ಕಟೀಲು, ಸತೀಶ್ ಅಂಚನ್, ದೇವಪ್ರಸಾದ ಪುನರೂರು ಹಾಜರಿದ್ದರು.
ಜೆಡಿಎಸ್‌ನಿಂದ ಜಮೀರಾ (ವಾ.5), ಎಂ.ಎಸ್.ಮೊಯ್ದಿನಬ್ಬ(ವಾ.6), ಅನಿತಾ ಮತ್ತು ಶಿವಮಂಗಳ(ವಾ.10), ನವೀನ್ ಪುತ್ರನ್ ಮತ್ತು ರವಿ (ವಾ.11), ಹೇಮಲತಾ(ವಾ.02), ಅನ್ನಪೂರ್ಣ(ವಾ.03), ಸುಜಾತ(ವಾ.04, ಮನ್ಸೂರ್ ಮತ್ತು ಬಶೀರ್ ಅಹಮದ್ (ವಾ.05), ಇಸ್ಮಾಯಿಲ್ (ವಾ.06) ನಾಮಪತ್ರ ಸಲ್ಲಿಸಿದರು. ಹಿರಿಯ ನಾಯಕ ಕರುಣಾಕರ ಶೆಟ್ಟಿ ಹಾಜರಿದ್ದರು. ನಾಮಪತ್ರ ಸಲ್ಲಿಸುವ ಮೊದಲು ಜೆಡಿಎಸ್ ಪಕ್ಷದ ಕಾರ್ಯರ್ತರು ಮೂಲ್ಕಿ ಬಸ್ ನಿಲ್ದಾಣದಿಂದ ಪಟ್ಟಣ ಪಂಚಾಯಿತಿ ಕಚೇರಿಯವರೆಗೆ ಬೈಕ್ ರ‍್ಯಾಲಿ ನಡೆಸಿದ್ದರು.
ಎಸ್‌ಡಿಪಿಐನಿಂದ ಸಮೀರಾ(ವಾ.5), ಮಹಮ್ಮದ್ ಇಕ್ಬಾಲ್(ವಾ.10), ಜುಬೈದಾ(ವಾ.01), ಮಹಮ್ಮದ್ ಶರೀಫ್ (ವಾ.05), ಮಹ್ಮದ್ ಶರೀಫ್(ವಾ.09) ನಾಮಪತ್ರ ಸಲ್ಲಿಸಿದ್ದಾರೆ. ಅಬೂಬಕರ್ ಕುಳಾಯಿ, ಅಬ್ದುಲ್ ಜಲೀಲ್, ಅಕ್ಬರ್ ಆಲಿ, ಅಶ್ರಫ್ ಎ.ಕೆ., ಇಕ್ಬಾಲ್ ಮೂಲ್ಕಿ ಹಾಜರಿದ್ದರು.
ಚುನಾವಣಾ ಅಧಿಕಾರಿ ಫಿಲೋಮಿನಾ ಹಾಗೂ ಮಂಜುಳಾರವರು ನಾಮಪತ್ರವನ್ನು ಸ್ವೀಕರಿಸಿದರು, ನಾಮಪತ್ರ ಹಿಂತೆಗೆದುಕೊಳ್ಳಲು ಜ.17 ಕೊನೆಯ ದಿನವಾಗಿದ್ದು ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ಹೊರಬೀಳಲಿದೆ.

Narendra Kerekadu

Comments

comments

Comments are closed.

Read previous post:
Kinnigoli 14011401
ಮಾ| ಪ್ರಿತೇಶ್-10ನೇ ಹುಟ್ಟು ಹಬ್ಬ

10ನೇ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಮಾ| ಪ್ರಿತೇಶ್ ಶುಭಕೋರುವ ಶ್ರೀ ಪುರುಷೋತ್ತಮ (ತಂದೆ) ಶ್ರೀಮತಿ ರೇವತಿ ಮಳಲಿ (ತಾಯಿ) ಮಾ| ಪ್ರತೀಕ್ (ಅಣ್ಣ) ಅಜ್ಜ ಅಜ್ಜಿಯಂದಿರು...

Close