ತಾಳಿಪಾಡಿ-ಶಾಂತಿನಗರ ಈದ್ ಮಿಲಾದ್

ಕಿನ್ನಿಗೋಳಿ : ಕಿನ್ನಿಗೋಳಿ ತಾಳಿಪಾಡಿ -ಶಾಂತಿನಗರ ಖಿಲ್‌ರಿಯಾ ಜುಮ್ಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಂ ಮದ್ರಸ ಕಮಿಟಿಯ ಜಂಟೀ ಆಶ್ರಯದಲ್ಲಿ ಈದ್ ಮಿಲಾದ್ ಆಚರಣೆಯ ಸಂಧರ್ಭ ಮದ್ರಸ ವಿದ್ಯಾರ್ಥಿಗಳಿಂದ ಶೈಕ್ಷಣಿಕ ಕಾರ್ಯಕ್ರಮ, ಧಾರ್ಮಿಕ ಪ್ರವಚನ ನಡೆಯಿತು.
ಮಸೀದಿ ಗುರು ಪಿ. ಜೆ. ಅಹಮ್ಮದ್ ಮದನಿ ಕಾರ್ಯಕ್ರಮ ಉದ್ಘಾಟಿಸಿದರು. ಮಸೀದಿಯ ಅಧ್ಯಕ್ಷ ಟಿ. ಎಚ್. ಮಯ್ಯದ್ದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಿನ್ನಿಗೋಳಿ ಮಸೀದಿ ಗುರು ಅಬ್ದುಲ್ ಲತೀಫ್ ಸಖಾಫಿ, ಹಾಗೂ ಪುನರೂರು ಮಸೀದಿ ಗುರು ಹಸನ್ ಸಖಾಫಿ ಧಾರ್ಮಿಕ ಉಪನ್ಯಾಸ ನೀಡಿದರು. ಪಕ್ಷಿಕೆರೆ ಹಾಜಿ ಕೆ. ಮೀರಾನ್ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿದರು. ಸೂರಿಂಜೆ ಶಾಲೆಯ ಅಧ್ಯಕ್ಷ ಕೆ. ಎ. ಖಾದರ್, ಟಿ. ಹಸನಬ್ಬ , ಟಿ. ಕೆ. ಅಬ್ದುಲ್ ಕಾದರ್, ಪಕೀರಬ್ಬ , ನೂರುಲ್ ಹುದಾ ಸಂಸ್ಥೆಯ ಅಧ್ಯಕ್ಷ ಸಿದ್ಧೀಕ್ ಎಫ್, ಪಿ. ಎಮ್ ನಝೀರ್ ಮದನಿ, ಝೈನುದ್ದೀನ್ ಮುಸ್ಲಿಯಾರ್ ಮತ್ತಿತರರು ಉಪಸ್ಥಿತರಿದ್ದರು. ಮಸೀದಿ ಕಾರ್ಯದರ್ಶಿ ಟಿ. ಎ. ನಝೀರ್ ಕಾರ್ಯಕ್ರಮ ನಿರೂಪಿಸಿದರು.

Kinnigoli 14011403

Comments

comments

Comments are closed.

Read previous post:
ಅಲ್ಲಲ್ಲಿ ಈದ್ ಮೆರವಣಿಗೆ

  ತೋಕೂರು ಸಮೀಪದ ಬೊಳ್ಳೂರು ಮಸೀದಿ ಗುತ್ತಕಾಡು ಮಸೀದಿ ಕೇಂದ್ರ ಶಾಫೀ ಜುಮ್ಮಾ ಮಸೀದಿ ಮುಲ್ಕಿ

Close