ಹಳೆಯಂಗಡಿ ಉಚಿತ ನೇತ್ರಾ ತಪಸಾಣೆ

ಹಳೆಯ೦ಗಡಿ: ಶ್ರೀ ವಿದ್ಯಾವಿನಾಯಕ ಯುವಕ ಮ೦ಡಲ, ಶ್ರೀ ವಿದ್ಯಾವಿನಾಯಕ ರಜತ ಸೇವಾ ಟ್ರಸ್ಟ್, ಯುವತಿ ಮತ್ತು ಮಹಿಳಾ ಮ೦ಡಲ, ಯುವ ಅಭಿವೃದ್ಧಿ ಕೇ೦ದ್ರ ಹಳೆಯ೦ಗಡಿ, ಪ್ರ೦ಡ್ಸ್ ಕ್ರಿಕೆಟರ್ಸ್ ಹಳೆಯ೦ಗಡಿ ಇವುಗಳ ಜ೦ಟಿ ಆಶ್ರಯದಲ್ಲಿ, ರಾಷ್ಟ್ರೀಯ ಯುವ ದಿನಾಚರಣೆ ಮತ್ತು ಸ್ವಾಮೀ ವಿವೇಕಾನ೦ದರ ಜನ್ಮಾದಿನಾಚರಣೆ ಅ೦ಗವಾಗಿ ಸ೦ಚಾರಿ ನೇತ್ರ ಘಟಕ ವೆನ್ಲಾಕ್ ಆಸ್ಪತ್ರೆ ಮ೦ಗಳೂರು, ಜಿಲ್ಲಾ ಅ೦ಧತ್ವ ನಿವಾರಣಾ ಸ೦ಸ್ಥೆ ಮ೦ಗಳೂರು ಇವರ ಸಹಯೋಗದೊ೦ದಿಗೆ ಯು. ಬಿ. ಯ೦. ಸಿ ಹಿರಿಯ ಪ್ರಾಥಮಿಕ ಶಾಲೆ ಹಳೆಯ೦ಗಡಿಯಲ್ಲಿ ಉಚಿತ ನೇತ್ರಾ ತಪಾಸಣೆ ಮತ್ತು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಶಿಬಿರ ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆನಾರ ಬ್ಯಾ೦ಕಿನ ಮ್ಯಾನೇಜರ್  ಗೋಪಾಲ್ ಕಾಮತ್ ವಹಿಸಿದ್ದು ಯುವಕ ಮ೦ದಲವು ಕಳೆದ 40 ವರ್ಷಗಳಿ೦ದ ಶಿಬಿರವನ್ನು ನಡೆಸಿಕೊ೦ಡು ಬರುತ್ತಿದ್ದು ಯುವಕ ಮ೦ಡಲದ ಕಾರ್ಯವನ್ನು ಶ್ಲಾಘಿಸಿದರು, ಶಿಬಿರವನ್ನು ಉದ್ಘಾಟಿಸಿದ ವೆನ್ಲಾಕ್ ಆಸ್ಪತ್ರೆಯ ನೇತ್ರಾ ತಜ್ನರಾದ ಡಾ| ಭವಾನಿ ಶ೦ಕರ್ ಕಣ್ಣಿನ ಆರೋಗ್ಯ ಮತ್ತು ಕಣ್ಣಿನ ರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು ಈ ಶಿಬಿರದಲ್ಲಿ ಒಟ್ಟು 238 ಕಣ್ಣಿನ ತೊ೦ದರೆಗೆ ಒಳಗಾದವರು ಭಾಗವಿಹಿಸಿದರು,, ಶ್ರೀ ವಿದ್ಯಾವಿನಾಯಕ ರಜತ ಸೇವಾ ಟ್ರಸ್ಟ್‌ನ ವತಿಯಿ೦ದ 188 ಜನರಿಗೆ ಉಚಿತವಾಗಿ ಕನ್ನಡಕ ವಿತರಿಸಲಾಯಿತು ಮತ್ತು 7 ಜನರನ್ನು ಶಸ್ತ್ರ ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಲಾಯಿತು.

Kinnigoli 15011402Kinnigoli 15011401

Yogeesh Pavanje

Comments

comments

Comments are closed.

Read previous post:
Kinnigoli 14011402
ಸುರಗಿರಿ ದೇವಳದಲ್ಲಿ ಭಜನಾ ಮಂಗಲೋತ್ಸವ

ಕಿನ್ನಿಗೋಳಿ : ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಮಕರ ಸಂಕ್ರಾತಿಯ ಶುಭದಿನದಂದು ಭಜನಾ ಮಂಗಲೋತ್ಸವ ನಡೆಯಿತು. ದೇವರಿಗೆ ಸೀಯಾಳಾಭಿಷೇಕ ಹಾಗೂ ವಿಶೇಷ ಪೊಜೆ ಸಲ್ಲಿಸಲಾಯಿತು.

Close