ಕವತ್ತಾರು ಗ್ರಾಮಕ್ಕೆ ಸೋಮಪ್ಪ ಸುವರ್ಣ ಪ್ರಶಸ್ತಿ

ಮೂಲ್ಕಿ;  ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಬಿಲ್ಲವ ಸಂಗಮ ೨೦೧೩ರ ಕ್ರೀಡೋತ್ಸವದ ಕೆ.ಸೋಮಪ್ಪ ಸುವರ್ಣ ಸ್ಮರಣಾರ್ಥ ನೀಡುವ ಸಮಗ್ರ ಪ್ರಶಸ್ತಿಯನ್ನು ಕವತ್ತಾರು ಗ್ರಾಮಕ್ಕೆ ನೀಡಿ ಗೌರವಿಸಲಾಯಿತು.
ಮೂಲ್ಕಿ ರುಕ್ಕರಾಮ್ ಸಾಲ್ಯಾನ್ ಸಭಾಗೃಹದಲ್ಲಿ ಭಾನುವಾರ ನಡೆದ ಬಿಲ್ಲವ ಸಂಗಮದ ಸಮಾರೋಪ ಸಮಾರಂಭದಲ್ಲಿ ಬೆಂಗಳೂರಿನ ಬಿಲ್ಲವರ ಅಸೋಸಿಯೇಶನ್‌ನ ಅಧ್ಯಕ್ಷ ವೇದಕುಮಾರ್ ಪ್ರಶಸ್ತಿಯನ್ನು ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಚಲನಚಿತ್ರ ನಟ ರಾಜಶೇಖರ ಕೋಟ್ಯಾನ್ ಮಾತನಾಡಿ ನಾರಾಯಣಗುರುಗಳ ಆದರ್ಶ ಸಮಾಜದಲ್ಲಿ ವಿಶ್ವಮಟ್ಟದಲ್ಲಿ ಗುರುತಿಸುವಂತಾಗಬೇಕು ಎಂಬ ಉದ್ದೇಶದಿಂದ ಅವರ ಜೀವನ ಚರಿತ್ರೆಯನ್ನು ಮೂಲ್ಕಿಯ ನೆಲೆಯಲ್ಲಿ ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ತುಳು ಚಿತ್ರದ ಮೂಲಕ ಮಾಡಿದ್ದೇನೆ, ಇದು ಯಶಸ್ಸಾಗಬೇಕಾದರೆ ಕುಟುಂಬ ಸಹಿತ ವೀಕ್ಷಿಸಿ ಪ್ರೋತ್ಸಾಹಿಸಿದಲ್ಲಿ ಮಾತ್ರ ಸಾಧ್ಯ ಎಂದು ಹೇಳಿದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಯ್ಯೋಟ್ಟು ಸದಾಶಿವ ಸಾಲ್ಯಾನ್‌ಗೆ ಗೌರವಾರ್ಪಣೆ, ಯಕ್ಷಗಾನದ ಬಹುಮುಖ ಪ್ರತಿಭೆ ಗಣೇಶ್ ಕೊಲಕಾಡಿಗೆ ೫೦ಸಾವಿರದ ನಗದು ನಿಧಿಯೊಂದಿಗೆ ಪುರಸ್ಕಾರ, ವಿದ್ಯಾನಿಧಿಗೆ ಒಂದು ಲಕ್ಷ ನೀಡಿದ ಅರುಣಾ ರಾಜಶೇಖರ ಕೋಟ್ಯಾನ್ ದಂಪತಿಯನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಕ್ರೀಡೋತ್ಸವದಲ್ಲಿ ವಿಜೇತರಾದ ವಯುಕ್ತಿಕ ಹಾಗೂ ತಂಡ ಪ್ರಶಸ್ತಿ, ಅತಿ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿದ ಕೊಲಕಾಡಿ ಗ್ರಾಮ, ಕ್ರಿಕೇಟ್‌ನಲ್ಲಿ ವಿಜೇತರಾದ ಧರ್ಮಸಾನ, ದ್ವಿತೀಯ ಸ್ಥಾನಿ ಬಪ್ಪನಾಡು ಬೊಟ್ಟು ತಂಡ, ಹಾಗೂ ಪ್ರತಿಭೋತ್ಸವದಲ್ಲಿ ಪ್ರಥಮ ಬಪ್ಪನಾಡು-ಮಾನಂಪಾಡಿ, ದ್ವಿತೀಯ ಮಟ್ಟು ಗ್ರಾಮ, ತೃತೀಯ ಕಿಲ್ಪಾಡಿ-ಕೊಲಕಾಡಿ ಗ್ರಾಮದ ನಾರಾಯಣಗುರು ಕ್ರಿಯಾ ಸಮಿತಿಗೆ ನಗದು ಹಾಗೂ ಪ್ರಶಸ್ತಿಯನ್ನು ವಿತರಿಸಲಾಯಿತು.
ಉದ್ಯಮಿ ಹರೀಂದ್ರ ಸುವರ್ಣ, ಮಹಾಬಲ ಪೂಜಾರಿ ಎಕ್ಕಾರು, ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಯದೀಶ್ ಅಮೀನ್ ಕೊಕ್ಕರಕಲ್, ಪ್ರ.ಕಾರ್ಯದರ್ಶಿ ಗೋಪಿನಾಥ ಪಡಂಗ, ಕೋಶಾಧಿಕಾರಿ ಉದಯ ಅಮೀನ್ ಮಟ್ಟು, ನಾರಾಯಣಗುರು ವಿದ್ಯಾ ಸಂಸ್ಥೆಯ ಸಂಚಾಲಕ ಹರಿಶ್ಚಂದ್ರ ಕೋಟ್ಯಾನ್, ಕ್ರೀಡಾ ಸಂಚಾಲಕ ವಾಸು ಪೂಜಾರಿ, ಸಾಂಸ್ಕೃತಿಕ ಸಂಚಾಲಕ ಚಂದ್ರಶೇಖರ ಕೋಟ್ಯಾನ್, ಕ್ರಿಯಾ ಸಮಿತಿ ಸಂಚಾಲಕ ರಮೇಶ್ ಕೊಕ್ಕರ್‌ಕಲ್, ಮಹಿಳಾ ಮಂಡಳಿಯ ಅಧ್ಯಕ್ಷ ಸುನಿತಾ ದಾಮೋದರ್, ಸೇವಾದಳದ ದಳಪತಿ ಮೋಹನ್ ಕೋಟ್ಯಾನ್, ಮೂಲ್ಕಿ ಯುವವಾಹಿನಿ ಅಧ್ಯಕ್ಷ ಪ್ರಕಾಶ್ ಸುವರ್ಣ ಹಾಜರಿದ್ದರು.
ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.

Kinnigoli 15011403 Kinnigoli 15011404Narendra Kerekadu

Comments

comments

Comments are closed.

Read previous post:
ಹಳೆಯಂಗಡಿ ಉಚಿತ ನೇತ್ರಾ ತಪಸಾಣೆ

ಹಳೆಯ೦ಗಡಿ: ಶ್ರೀ ವಿದ್ಯಾವಿನಾಯಕ ಯುವಕ ಮ೦ಡಲ, ಶ್ರೀ ವಿದ್ಯಾವಿನಾಯಕ ರಜತ ಸೇವಾ ಟ್ರಸ್ಟ್, ಯುವತಿ ಮತ್ತು ಮಹಿಳಾ ಮ೦ಡಲ, ಯುವ ಅಭಿವೃದ್ಧಿ ಕೇ೦ದ್ರ ಹಳೆಯ೦ಗಡಿ, ಪ್ರ೦ಡ್ಸ್ ಕ್ರಿಕೆಟರ್ಸ್...

Close