ಉತ್ತಮ ಶಿಕ್ಷಣ ನೀಡಲು ಸಮ್ಮೇಳನ ಸಹಾಯಕಾರಿ

ಮೂಲ್ಕಿ: ಸದಾ ಅಧ್ಯಯನ ಮತ್ತು ಪ್ರಯೋಗಶೀಲತೆ ಬಹುಮುಖ್ಯವಾಗಿದ್ದರೆ ಮಾತ್ರ ಪರಿಪೂರ್ಣ ಮೌಲ್ಯಾಧಾರಿತ ಶಿಕ್ಷಣ ನೀಡಲು ಸಾಧ್ಯ ಎಂದು ಅಕಾಡಮಿ ಆಫ್ ಜನರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಎಚ್.ಎಸ್.ಬಳ್ಳಾಲ್ ಹೇಳಿದರು.
ಮೂಲ್ಕಿ ವಿಜಯಾ ಕಾಲೇಜಿನಲ್ಲಿ ಅಕಾಡಮಿ ಕಾಲೇಜು ಶಿಕ್ಷಕರ ಸಮ್ಮೇಳನ 2014 ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರು ಸಂಘಟಿತರಾಗಿ ತಮ್ಮ ಉನ್ನತ ವಿಚಾರಧಾರೆಗಳನ್ನು ಹಂಚಿಕೊಂಡು ವಿದ್ಯಾರ್ಥಿ ಸಮುದಾಯಕ್ಕೆ ಉತ್ತಮ ಶಿಕ್ಷಣ ನೀಡಲು ಈ ಸಮ್ಮೇಳನ ಸಹಕಾರಿಯಾಗಲಿದೆ ಎಂದರು.
ಈ ಸಂದರ್ಭ ದೇಶದ ಉನ್ನತಿಗಾಗಿ ಉತ್ತಮ ಮೌಲ್ಯಾಧಾರಿತ ಶಿಕ್ಷಣ ಎಂಬವಿಷಯದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ನಿಟ್ಟೆ ವಿಶ್ವ ವಿದ್ಯಾನಿಲಯದ ರಿಜಿಷ್ಟ್ರಾರ್ ಡಾ.ಎಂ.ಎಸ್.ಮೂಡಿತ್ತಾಯ ಮಾಹಿತಿ ನೀಡಿದರು.
ಅತಿಥಿಗಳಾಗಿ ಮಣಿಪಾಲ್ ಯುನಿವರ್ಸಿಟಿ ರಿಜಿಷ್ಟ್ರಾರ್ ಡಾ.ಜಿ.ಕೆ.ಪ್ರಭು, ಅಕಾಡಮಿ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್,ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಡಾ.ಎಂ.ಎ.ಆರ್ ಕುಡ್ವಾ, ವಿಜಯಾ ಪದವಿ ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಆರ್ ಶಂಕರ್, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಪ್ರೊ.ಪಮೀದಾ ಬೇಗಂ ಉಪಸ್ಥಿತರಿದ್ದರು.
ಡಾ.ಎಂ.ಎ.ಆರ್.ಕುಡ್ವಾ ಸ್ವಾಗತಿಸಿದರು.ಪ್ರೊ.ರೇಷ್ಮಾ ನಿರೂಪಿಸಿದರು. ಪ್ರೊ.ಕೆ.ಆರ್.ಶಂಕರ್ ವಂದಿಸಿದರು.

Kinnigoli 15011405Puneethakrishna Sk

Comments

comments

Comments are closed.

Read previous post:
ಕವತ್ತಾರು ಗ್ರಾಮಕ್ಕೆ ಸೋಮಪ್ಪ ಸುವರ್ಣ ಪ್ರಶಸ್ತಿ

ಮೂಲ್ಕಿ;  ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಬಿಲ್ಲವ ಸಂಗಮ ೨೦೧೩ರ ಕ್ರೀಡೋತ್ಸವದ ಕೆ.ಸೋಮಪ್ಪ ಸುವರ್ಣ ಸ್ಮರಣಾರ್ಥ ನೀಡುವ ಸಮಗ್ರ ಪ್ರಶಸ್ತಿಯನ್ನು ಕವತ್ತಾರು ಗ್ರಾಮಕ್ಕೆ...

Close