ಯಕ್ಷಗಾನ ಕಲೆಗೆ ಪ್ರೋತ್ಸಾಹ ನೀಡಬೇಕು

ಕಿನ್ನಿಗೋಳಿ: ಜನಪದ ಪರಂಪರೆಯ ಯಕ್ಷಗಾನ ಕಲೆಯಿಂದ ಯುವ ಜನಾಂಗ ದೂರ ಸರಿಯುತ್ತಿದ್ದಾರೆ. ಉತ್ತಮ ಸಂಸ್ಕಾರದ ಯಕ್ಷಗಾನ ಕಲೆಯನ್ನು ಕಲಾಭಿಮಾನಿಗಳು ಉಳಿಸಿ ಬೆಳಸಿ ಪ್ರೋತ್ಸಾಹ ನೀಡಬೇಕಾಗಿದೆ. ಎಂದು ಕರ್ಣಾಟಕ ಬ್ಯಾಂಕ್ ಉಪಮಹಾಪ್ರಬಂಧಕ ಗಜಾನನ ಟಿ. ಹೆಗಡೆ ಹೇಳಿದರು.
ಯಕ್ಷಲಹರಿ- ಯುಗಪುರುಷದ ಆಶ್ರಯದಲ್ಲಿ ಕಿನ್ನಿಗೋಳಿ ಯುಗಪುರುಷ ಸಭಾಭವದಲ್ಲಿ ಮಕರ ಸಂಕ್ರಾತಿ ಪಯುಕ್ತ ನಡೆದ ತಾಳಮದ್ದಳೆ ಮತ್ತು ಸಮ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಕಾರ್ಯದರ್ಶಿ ವಾಸುದೇವ ಶೆಣೈ ಹಾಗೂ ಕಿನ್ನಿಗೋಳಿ ಸಿಂಡಿಕೇಟ್ ಶಾಖಾ ಪ್ರಬಂಧಕ ಮಂಜುನಾಥ ಮಲ್ಯ, ಅವರನ್ನು ಸನ್ಮಾನಿಸಲಾಯಿತು.
ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಎಳತ್ತೂರು ಮಹಾಲಿಂಗೇಶ್ವರ ದೇವಳ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ., ಕಿನ್ನಿಗೋಳಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಕೆ. ಪುರುಷೋತ್ತಮ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಯುಗಪುರುಷದ ಭುವನಾಭಿರಾಮ ಉಡುಪ ಪ್ರಸ್ತಾವನೆಗೈದರು. ಯಕ್ಷಲಹರಿ ಅಧ್ಯಕ್ಷ ಇ. ಶ್ರೀನಿವಾಸ ಭಟ್ ಸ್ವಾಗತಿಸಿ ಕಾರ್ಯದರ್ಶಿ ಶ್ರೀಧರ ಡಿ.ಎಸ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸೀತಾಪಹಾರ – ಇಂದ್ರಜಿತು ಕಾಳಗ ಯಕ್ಷಗಾನ ತಾಳಮದ್ದಲೆ ನಡೆಯಿತು.

Kinnigoli 16011405

Comments

comments

Comments are closed.

Read previous post:
ಬಪ್ಪನಾಡು: ಚತುಃ ಪವಿತ್ರ ನಾಗಮಂಡಲೋತ್ಸವ

ಮೂಲ್ಕಿ:ಬಪ್ಪನಾಡು ಬಡಗುಹಿತ್ಲು ನಾಗ ಸಾನಿಧ್ಯದಲ್ಲಿ ಫೆ.೨೦ರಂದು ನಡೆಯಲಿರುವ ಚತುಃ ಪವಿತ್ರ ನಾಗಮಂಡಲೋತ್ಸವ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತ ಮತ್ತು ಕಂಬ ಸ್ಥಾಪನೆಯು ವೇಮೂ ನರಸಿಂಹ ಭಟ್ ಪೌರೋಹಿತ್ಯದಲ್ಲಿ ಗುರುವಾರ...

Close