ಮೂಲ್ಕಿ:ಮಹಿಳಾ ಆರೋಗ್ಯ ಮಾಹಿತಿ ಶಿಬಿರ

ಮೂಲ್ಕಿ: ಮಹಿಳೆಯರು ತಮ್ಮ ಸಂಸಾರ ನಿಭಾವಣೆಯ ನಡುವೆ ಆರೋಗ್ಯ ರಕ್ಷಣೆಗಾಗಿ ಪೌಷ್ಟಿಕ ಆಹಾರ ನಿಮಮಿತವಾಗಿ ಸೇವಿಸಬೇಕು ಎಂದು ಸ್ತ್ರ್ರೀರೋಗ ತಜ್ಞೆ ಡಾ. ಸಬಿತಾ ಸಿ ಭಟ್ ಹೇಳಿದರು.
ಗುರುವಾರ ಭಾರತೀಯ ಜೀವ ವಿಮಾ ಮಹಿಳಾ ಘಟಕದ ಸಂಯೋಜನೆಯಲ್ಲಿ ಮಹಿಳಾ ಆರೋಗ್ಯ ಮಾಹಿತಿ ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಉತ್ತಮ ಆಹಾರ ಶುದ್ದ ನೀರು ಹಾಗೂ ವ್ಯಾಯಾಮವನ್ನು ಮಹಿಳೆಯರು ತಮ್ಮ ದಿನಚರಿಯ ಪಟ್ಟಿಯಲ್ಲಿ ಸೇರಿಸಿ ಆರೋಗ್ಯವಂತರಾಗಿರಬೇಕು ಕೌಟುಂಬಿಕ ಉನ್ನತಿಯಲ್ಲಿ ಮಹಿಳೆಯ ಆರೋಗ್ಯಕ್ಕೆ ಬಹಳ ಪ್ರಮುಖ್ಯತೆ ಇದೆ ಎಂದರು.
ಕಾರ್ಯಕ್ರಮದ ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಆಶಾಲತಾ ಕೆ ಮಾತನಾಡಿ, ಮಹಿಳೆಯರ ದೇಹದಲ್ಲಿ ಆಗುವ ಗಮನಾರ್ಹ ಬದಲಾವಣೆಗಳು ಪ್ರಾಣಾಂತಿಕ ರೋಗಗಳಿಗೆ ಕಾರಣವಾಗಬಹುದು ಆದುದರಿಂದ ತಮ್ಮ ದೇಹದ ಬಗ್ಗೆ ನಿಗಾ ಇರಿಸಿ ಯವುದೇ ಅಸಮರ್ಪಕ ಬದಲಾವಣೆ ಕಂಡುಬಂದಲ್ಲಿ ತಕ್ಷಣ ತಜ್ಞರ ಸಲಹೆ ಪಡೆದು ಆರೋಗ್ಯ ರಕ್ಷಣೆ ಮಾಡಿಕೊಳ್ಳಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಮಹಿಳಾ ಘಟಕಾಧ್ಯಕ್ಷೆ ವಿಮಲಾಕೃಷ್ಣ ವಹಿಸಿದ್ದರು.
ಎಲ್‌ಐಸಿ ಎಒಐ ಅಧ್ಯಕ್ಷರಾದ ಜೆರಾಲ್ಡ್ ಕ್ರಾಸ್ತಾ, ಮಹಿಳಾ ಘಟಕ ಕಾರ್ಯದರ್ಶಿ ಗ್ರೇಸಿ ಸಿಕ್ವೇರಾ,ಜ್ಯೋತಿ.ಎ.ಶೆಟ್ಟಿ,ಜೊತೆ ಕಾರ್ಯದರ್ಶಿ ಸಂಗೀತಾ ಶೆಟ್ಟಿ ಅತಿಥಿಗಳಾಗಿದ್ದರು.
ವಿಮಲಾ ಕೃಷ್ಣ ಸ್ವಾಗತಿಸಿದರು.ಮಮತಾ ಗೀರೀಶ್ ನಿರೂಪಿಸಿದರು.ಶಾರದಾ ಬಂಗೇರಾ ವಂದಿಸಿದರು.

Kinnigoli 16011402Bhagyawan Sanil

Comments

comments

Comments are closed.

Read previous post:
ಹಳೆಯಂಗಡಿ ವ್ಯಕ್ತಿತ್ವ ವಿಕಸನ ತರಬೇತಿ

ಹಳೆಯ೦ಗಡಿ: ಭಾರತ ಸರಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಲಯದ ನೆಹರು ಯುವ ಕೇ೦ದ್ರ ಮ೦ಗಳೂರು, ಯುವತಿ ಮತ್ತು ಮಹಿಳಾ ಮ೦ಡಲ ಹಳೆಯ೦ಗಡಿ ಇವುಗಳ ಜ೦ಟಿ ಆಶ್ರಯದಲ್ಲಿ,...

Close