ಕಟೀಲು-ದ.ಕ ಜಿ.ಪಂ.ಅಧ್ಯಕ್ಷರ ತಂಡ ಭೇಟಿ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪರಿಸರದ ಹೋಟೆಲ್ ಕಟ್ಟಡ ಹಾಗೂ ಕಲ್ಯಾಣ ಮಂಟಪಗಳಿಂದ ಮಲೀನ ನೀರು ನಂದಿನಿ ನದಿಗೆ ಬಿಡುವುದರಿಂದ ಕುಡಿಯುವ ನೀರು ಕಲುಷಿತ ಗೊಳ್ಳುವುದು ಅಲ್ಲದೆ ಹಾಗೂ ಘನ ತ್ಯಾಜ್ಯಗಳ ಶೇಖರಣೆ ಬಗ್ಗೆ ಕಳೆದ ತಿಂಗಳು ದಕ್ಷಿಣ ಕನ್ನಡ ಜಿ. ಪಂ. ಸಭೆಯಲ್ಲಿ ವ್ಯಾಪಕ ಚರ್ಚೆ ನಡೆದಿದ್ದು ಗುರುವಾರ ದ.ಕ. ಜಿ. ಪಂ. ಅಧ್ಯಕ್ಷ ಕೊರಗಪ್ಪ ನಾಯ್ಕ್ ಹಾಗೂ ಇಲಾಖಾಧಿಕಾರಿಗಳ ತಂಡ ಕಟೀಲು ದೇವಳದ ಪರಿಸರ ಹಾಗೂ ಕಲ್ಯಾಣ ಮಂಟಪಗಳಿಗೆ ಹಾಗೂ ಹೋಟೆಲ್ ಅಂಗಡಿಗಳಿಗೆ ಬೇಟಿ ನೀಡಿ ಪರಿಶೀಲಿಸಿದರು. ಮೆನ್ನಬೆಟ್ಟು, ಎಕ್ಕಾರು ಮತ್ತಿತರ ಜನವಸತಿ ಪ್ರದೇಶದ ಜನರಿಗೆ ನದಿಯಿಂದ ಕುಡಿಯಲು ನೀರು ಪೂರೈ ಸಲಾಗುತ್ತಿದ್ದು, ಇದೀಗ ನದಿಯ ನೀರು ಜನವರಿ ತಿಂಗಳಲ್ಲೇ ಮಲೀನಗೋಳ್ಳುತ್ತಿದ್ದು ನೀರಿನ ಹಾಹಾಕಾರ ಹೆಚ್ಚಾಗುವ ಸಂಭವವಿದೆ. ಕಟೀಲು ದೇವಳ ದಿನದಿಂದ ದಿನಕ್ಕೆ ಪ್ರಸಿದ್ದಿ ಪಡೆಯುತ್ತಿದ್ದರೂ ಅಭಿವೃದ್ದಿ ಯಲ್ಲಿ ಭಾರಿ ಹಿನ್ನಡೆ ಆಗಿದೆ ಎಂದು ಆರೋಪ ಕೇಳಿ ಬಂದಿದ್ದು, ಹಲವು ಯೋಜನೆಗಳಾದ ಯಾತ್ರೀ ನಿವಾಸ, ವಸತಿ ಗೃಹ, ರಸ್ತೆ ವಿಸ್ತರಣೆ, ಏಕಮುಖ ಸಂಚಾರ, ನದಿ ನೀರಿನಿಂದ ವಿದ್ಯುತ್ ಉತ್ಪಾದನೆ, ಆವರಣದಲ್ಲಿರುವ ಅಂಗಡಿ ಗಳ ಸ್ಥಳಾಂತರ ಹೀಗೆ ಹಲವಾರು ಯೋಜನೆಗಳು ನೆನೆಗುದಿಗೆ ಬಿದ್ದಿವೆ.

ಕಳೆದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದ ಒಳಚರಂಡಿ ಯೋಜನೆ
ಕಟೀಲು ದೇವಳದಲ್ಲಿ ಹಲವು ಹೋಟೆಲ್, ದೇವಳದ ಯಾತ್ರಿನಿವಾಸ ಕಲ್ಯಾಣ ಮಂಟಪಗಳ ಶೌಚಾಲಯದ ಕಲುಷಿತ ನೀರು ನೇರವಾಗಿ ನದಿಗೆ ಬಿಡುವ ಬಗ್ಗೆ ಖದ್ದಾಗಿ ಜಿ. ಪಂ. ಅಧ್ಯಕ್ಷ ಹಾಗೂ ಅಧಿಕಾರಿಗಳ ತಂಡ ನೋಡಿ ಆಶ್ಚರ್ಯ ಚಕಿತರಾದರು.
ನಂದಿನಿ ನದಿಯು ಉದ್ದಕ್ಕೂ ನೀರನ್ನು ಕುಡಿಯಲು ಬಳಸುತ್ತಿದ್ದು ಕಟೀಲು ಪರಿಸರದ ತ್ಯಾಜ್ಯ, ಕುಲುಷಿತ ನೀರಿನಿಂದ ನದಿಯ ನೀರು ಮಲೀನ ಗೊಂಡು ಕುಡಿಯಲು ಆಯೋಗ್ಯವಾಗುತ್ತಿದೆ ಎಂದು ಗ್ರಾಮಸ್ಥರು, ಜಿ. ಪಂ. ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು ಗ್ರಾಮ ಪಂಚಾಯಿತಿ ಹಾಗೂ ಇಲಾಖೆಗಳಿಗೆ ಹಲವಾರು ಬಾರಿ ದೂರು ನೀಡಿದ್ದರು. ಪಂಚಾಯಿತಿ ಕೂಡ ದೇವಳದ ಆಡಳಿತದ ಗಮನಕ್ಕೆ ತಂದರೂ ಎಳ್ಳಷ್ಟು ಪ್ರಯೋಜನವಾಗಿಲ್ಲ. ಎಲ್ಲಾ ಸಮಸ್ಯೆಗಳಿಗೆ ಕಳೆದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದ ಒಳಗೊಂಡ ಒಳಚರಂಡಿ ಯೋಜನೆ ಕಾರ್ಯಗತವಾಗದೇ ಕೇವಲ ಕಡತಗಳ ಪ್ರಕ್ರಿಯೆಗೆ ಬಾಕಿ ಉಳಿದಿರುವ ಸಮಸ್ಯೆಯಾಗಿದೆ.

ಕಟೀಲು ದೇವಳದ ಹಾಗೂ ಪರಿಸರದ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಿ ಅಭಿವೃದ್ಧಿಗೆ ಸಹಕರಿಸಬೇಕಾಗಿದೆ. ನಂದಿನಿ ನದಿ ನೀರು, ಒಳಚಂರಂಡಿ ವ್ಯವಸ್ಥೆಯ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಹೋಟೆಲ್ ಮಾಲಕರು ಹಾಗೂ ದೇವಸ್ಥಾನದ ಆಡಳಿತ ಮಂಡಳಿಗೆ ನ್ಯೂನತೆಯ ಬಗ್ಗೆ ಮನವರಿಕೆ ಮಾಡಲಾಗಿದ್ದು ವ್ಯವಸ್ಥೆ ಸರಿಪಡಿಸದೆ ಇದ್ದರೆ ಮುಂದಿನ ದಿನಗಳಲ್ಲಿ ಯಾವುದೇ ಬಾಹ್ಯ ಒತ್ತಡಕ್ಕೆ ಮಣಿಯದೇ ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ಜರಗಿಸಲಾಗುವುದು ಎಂದು ಜಿ. ಪಂ. ಅಧ್ಯಕ್ಷ ಕೊರಗಪ್ಪ ನಾಯ್ಕ್ ತಿಳಿಸಿದ್ದಾರೆ.
ಜಿ.ಪಂ. ಉಪ ಕಾರ್ಯದರ್ಶಿ ಎನ್. ಆರ್. ಉಮೇಶ್, ನೆರವು ಘಟಕದ ಮಂಜುಳಾ, ತಾ. ಪಂ. ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ಪೂಜಾರಿ, ಜಿ. ಪಂ. ಸದಸ್ಯ ಈಶ್ವರ್ ಕಟೀಲ್, ಕಟೀಲು ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ| ಚಂದ್ರಪ್ರಭಾ, ಮೆನ್ನಬೆಟ್ಟು ಗ್ರಾ. ಪಂ. ಅಧ್ಯಕ್ಷ ಜನಾರ್ದನ ಕಿಲೆಂಜೂರು, ಪಿಡಿಒ ಪ್ರಕಾಶ್, ಎಕ್ಕಾರು ಗ್ರಾ. ಪಂ. ಅಧ್ಯಕ್ಷೆ ಶೋಭಾ, ಎಕ್ಕಾರು ಪಿಡಿಓ ದೀಪಿಕಾ ಮತ್ತಿತರರಿದ್ದರು.

Kinnigoli 17011405 Kinnigoli 17011406 Kinnigoli 17011407 Kinnigoli 17011408 Kinnigoli 17011409 Kinnigoli 17011410 Kinnigoli 17011411 Kinnigoli 17011412 Kinnigoli 17011413 Kinnigoli 17011414 Kinnigoli 17011415 Kinnigoli 17011416 Kinnigoli 17011417 Kinnigoli 17011418

 

Comments

comments

Comments are closed.

Read previous post:
ಕಿನ್ನಿಗೋಳಿ ಮಾರ್ಕೆಟ್‌ಗೆ ಪ್ರೇತ ಭಾಧೆ..?..!

ಕಿನ್ನಿಗೋಳಿ; ಹೌದು ಸ್ವಾಮಿ ಕಿನ್ನಿಗೋಳಿ ಮಾರ್ಕೇಟ್‌ಗೆ ಯಾರೋ ಮಾಟ ಮಾಡಿದ್ದಾರೆ. ಇಲ್ಲಿ ರಾತ್ರಿ ಹೊತ್ತಿನಲ್ಲಿ ಪ್ರೇತಾತ್ಮಗಳು ಓಡಾಡುತ್ತಿದ್ದು ಅದಕ್ಕೆ ಬೆಳಕು ಅಡ್ಡಿಯಾಗುತ್ತಿದೆ ಎಂದು ಅಂಗಡಿ ಮುಂದೆ ಇರುವ...

Close