ಕಿನ್ನಿಗೋಳಿ ಮಾರ್ಕೆಟ್‌ಗೆ ಪ್ರೇತ ಭಾಧೆ..?..!

ಕಿನ್ನಿಗೋಳಿ; ಹೌದು ಸ್ವಾಮಿ ಕಿನ್ನಿಗೋಳಿ ಮಾರ್ಕೇಟ್‌ಗೆ ಯಾರೋ ಮಾಟ ಮಾಡಿದ್ದಾರೆ. ಇಲ್ಲಿ ರಾತ್ರಿ ಹೊತ್ತಿನಲ್ಲಿ ಪ್ರೇತಾತ್ಮಗಳು ಓಡಾಡುತ್ತಿದ್ದು ಅದಕ್ಕೆ ಬೆಳಕು ಅಡ್ಡಿಯಾಗುತ್ತಿದೆ ಎಂದು ಅಂಗಡಿ ಮುಂದೆ ಇರುವ ಕರೆಂಟಿನ ಬಲ್ಬುಗಳನ್ನೇ ಕದಿಯುತ್ತಿದ್ದು ನಾಲ್ಕು ದಿನದಲ್ಲಿ ಸುಮಾರು ಇಪ್ಪತ್ತು ಬಲ್ಬುಗಳು ಈ ಪ್ರೇತಕ್ಕೆ ಬಲಿಯಾಗಿದ್ದು ಇದರಿಂದ ಮಾರ್ಕೆಟ್‌ಗೆ ದೊಡ್ಡ ಪ್ರಾಯಶ್ಚಿತ್ತ ಹೊಮಾನೇ ಇಡಬೇಕು ಎಂದು ಪಿಸು ಪಿಸು ಮಾತು ಕಿನ್ನಿಗೋಳಿಯ ಕೇಂದ್ರ ಮಾರ್ಕೆಟ್‌ನಲ್ಲಿ ಅಲ್ಲಲ್ಲಿ ಕೇಳಿಬರುತ್ತಿದೆ.

ಕಾರಣ ಇಷ್ಟೇ ಇಲ್ಲಿನ ಮಾರ್ಕೇಟ್‌ನಲ್ಲಿರುವ ಕೆಲವು ಅಂಗಡಿಗಳ ಬಲ್ಬುಗಳು ರಾತ್ರಿ ಉರಿಯುತ್ತಿದ್ದರೇ ಬೆಳಿಗ್ಗೆ ಮಾಯವಾಗುತ್ತಿದೆ. ಅದನ್ನು ಕದಿಯಲಾಗುತ್ತಿದೆಯೇ ಅಥವ ಕಿಡಿಗೇಡಿಗಳು ಒಡೆಯುತ್ತಿದ್ದಾರೆ ಎಂಬ ಸಂಶಯ ವ್ಯಕ್ತವಾಗಿದೆ. ನಾಲ್ಕು ದಿನದ ಹಿಂದೆ ಕೋಳಿ ಅಂಗಡಿಯಲ್ಲಿದ್ದ ಬಲ್ಬು ಕಾಣೆಯಾದರೆ ಮರುದಿನ ಅದರ ಸುತ್ತಮುತ್ತ ಇದ್ದ ಮೂರು ಅಂಗಡಿಗಳ ಸಿಎಫ್‌ಎಲ್ ಬಲ್ಬುಗಳೇಲ್ಲಾ ಮಾಯ, ಇದು ಹೀಗೇಯೇ ಮುಂದುವರಿದು ನಿನ್ನೆ ಮಾರು ಕಟ್ಟೆಯನ್ನು ಪ್ರವೇಶಿಸುವ ಕೆಲವು ಅಂಗಡಿಗಳ ಮುಂದಿದ್ದ ಎಲ್ಲಾ ಬಲ್ಬುಗಳು ಓಲ್ಡರ್‌ನ ಆಸರೆ ಕಳೆದುಕೊಂಡಿದೆ.
ದಿನಾ ಕಳೆದು ಹೋಗುತ್ತಿರುವ ಬಲ್ಬುಗಳ ಬಗ್ಗೆ ಅಂಗಡಿ ಮಾಲೀಕರು ಪೊಲೀಸರಿಗೆ ಹೇಳಿದರೇ ಅಯ್ಯೋ ನಿಮ್ಮ 15ರೂಪಾಯಿ ಬಲ್ಬುಗಳಿಗೂ ನಾವು ರಕ್ಷಣೆ ಕೊಡಬೇಕಾ ಎಂದು ಹೇಳುತ್ತಾರಂತೆ. ಕಳೆದ ವಾರ ಪುಂಡುಪೋಕರಿಯೊಬ್ಬ ಹೋಟೆಲ್ ಮತ್ತು ಬೇಕರಿಯೊಂದಕ್ಕೆ ರಾತ್ರೋ ರಾತ್ರಿ ಬೆಂಕಿ ಕೊಟ್ಟ ನಂತರವು ಗ್ರಾಮ ಪಂಚಾಯತ್ ಎಚ್ಚೆತ್ತುಕೊಳ್ಳದೇ ರಕ್ಷಣೆಗಾಗಿ ರಾತ್ರಿ ಕಾವಲು ಕಾಯುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಆದರೆ ವರ್ಷಕ್ಕೆ ಲಕ್ಷಾಂತರ ವರಿ ವಸೂಲಿ ಮಾತ್ರ ಪಂಚಾಯತ್‌ಗೆ ಬೇಕು ಎಂದು ವ್ಯಾಪಾರಸ್ಥರು ಆರೋಪಿಸುತ್ತಾರೆ.
ಮುಖ್ಯಮಂತ್ರಿಯಿಂದ ಗುದ್ದಲಿಪೂಜೆ ಮಾಡಿದ ಕಿನ್ನಿಗೋಳಿ ಮಾರ್ಕೆಟ್‌ನಲ್ಲಿ ನೆನೆಗುದಿಗೆ ಬಿದ್ದಿರುವ ಕಟ್ಟಡದ ಅವಶೇಷ, ಅಲ್ಲಿನ ಚರಂಡಿ ಅವ್ಯವಸ್ಥೆ, ಗುರುವಾರ ಸಂತೆಯನ್ನು ದಾರಿಯಲ್ಲೇ ನಡೆಸುವ ವ್ಯಾಪಾರಿಗಳು, ಸೂಕ್ತ ಭದ್ರತೆ ಇಲ್ಲದ ಅಂಗಡಿಗಳಲ್ಲಿ ಅಸಲಿ ಮಾಲೀಕರೇ ಬೇರೆ, ವ್ಯಾಪಾರ ನಡೆಸುವವರೇ ಬೇರೆ ಆಗಿದ್ದಾರೆ. ರಾಜ್ಯದಲ್ಲಿ, ಪಂಚಾಯತ್‌ನಲ್ಲಿ ಒಂದೇ ಪಕ್ಷದ ಆಡಳಿತ ಇದ್ದರೂ ಹಾಳುಕೊಂಪೆ ಆಗಿರುವ ಮಾರುಕಟ್ಟೆಗೆ ಕಾಯಕಲ್ಪವನ್ನು ಇನ್ನಾದರೂ ಮಾಡಬೇಕು ಬಲ್ಬು ಕದಿಯುವ ಪ್ರೇತಾತ್ಮನಿಗೆ ಮುಕ್ತಿ ನೀಡಿ ಎಂದು ನಿಷ್ಟಾವಂತ ವ್ಯಾಪಾರಸ್ಥರ ಅರಣ್ಯರೋಧನವಾಗಿದೆ.

 

Comments

comments

Comments are closed.

Read previous post:
ಭಜನಾ ಮಂಗಲೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರೀ ಸೇವಾ ಯುವಕ ವೃಂದ, ಬಪ್ಪನಾಡುದಿನಾಂಕ 23-01-2014ರಿಂದ 03-02-2014ರವರೆಗೆ ನಡೆಯುವ೧೧ ದಿವಸಗಳ(ಏಕಾದಶ) ಅಖಂಡ ಭಜನಾ ಮಂಗಲೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು...

Close