ಮೆನ್ನಬೆಟ್ಟು ಗ್ರಾಮ ಸಭೆ ಮುಂದೂಡಿಕೆ

ಕಿನ್ನಿಗೋಳಿ: ಗ್ರಾಮಸ್ಥರ ಸಮಸ್ಯೆಗಳಿಗೆ ಪರಿಹಾರ ನೀಡಬೇಕಾದ ವಿವಿಧ ಇಲಾಖಾ ಅಧಿಕಾರಿಗಳು ಇಲ್ಲದೇ ಆಕ್ರೋಶಗೊಂಡ ಗ್ರಾಮಸ್ಥರು ಗ್ರಾಮ ಸಭೆಯನ್ನೇ ಮುಂದೂಡಿದ ಘಟನೆ ಶುಕ್ರವಾರ ಮೆನ್ನಬೆಟ್ಟು ಪಂಚಾಯಿತಿಯಲ್ಲಿ ನಡೆದಿದೆ.
ಗ್ರಾಮದ ಪಂಚಾಯಿತಿ ಸಭಾಭವನದಲ್ಲಿ ಗ್ರಾಮ ಸಭೆ ಪ್ರಾರಂಭವಾಗುವ ಮೊದಲೇ ಗ್ರಾಮಸ್ಥರು ಇಲಾಖಾ ಅಧಿಕಾರಿಗಳು ಎಲ್ಲಿದ್ದಾರೆ? ಕಾಟಾಚಾರಕ್ಕೆ ಸಭೆ ನಡೆಸುತ್ತೀರಾ, ಯಾವ ಇಲಾಖೆ ಅಧಿಕಾರಿ ಬಂದಿದ್ದಾರೆ, ಗ್ರಾಮದ ಸಮಸ್ಯೆ ಯಾರ ಮುಂದೆ ಹೇಳೋಣ, ಪರಿಹರಿಸುವವರು ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಟೀಲು ನಂದಿನಿ ನದಿಯ ಮಲೀನ ನೀರಿನ ಸಮಸ್ಯೆ, ಒಳಚರಂಡಿ ಹಾಗೂ ಕುಡಿಯುವ ನೀರಿನ ಬಗ್ಗೆ ಗ್ರಾಮಸ್ಥರು ತಕರಾರು ಎತ್ತಿ ಇಂತಹ ಅನೇಕ ಸಮಸ್ಯೆಗಳಿಗೆ ಉತ್ತರಿಸುವ ಅಧಿಕಾರಿಗಳೇ ಸಭೆಗೆ ಬಾರದಿದ್ದರೆ ಸಮಸ್ಯೆಯ ಗಂಭೀರತೆ ಅವರಿಗೆ ತಿಳಿಯುವುದು ಹೇಗೆ? ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಅಧಿಕಾರಿಗಳು ಸಭೆ ನಡೆಸುವುದು ಸರಿಯಲ್ಲ ಎಂದು ಅಭಿಪ್ರಾಯಕ್ಕೆ ಬಂದು ಸಭೆಯನ್ನು ಮುಂದೂಡುವಂತೆ ಮಾಡಿದರು. ಇದಕ್ಕೆ ಉತ್ತರಿಸಿದ ಪಂಚಾಯಿಯಿತಿ ಅಧ್ಯಕ್ಷ ಜನಾರ್ಧನ ಕಿಲೆಂಜೂರು ನಿಮ್ಮೆಲ್ಲರ ಅಭಿಪ್ರಾಯಗಳನ್ನು ಸಂಗ್ರಹಿಸಿ ಮೇಲಾಧಿಕಾರಿಗಳಿಗೆ ತಿಳಿಸಲಾಗುವುದು ಮುಂದಿನ ಸಭೆಗೆ ಕಡ್ಡಾಯವಾಗಿ ತಹಶಿಲ್ದಾರ್ ಲೋಕೋಪಯೋಗಿ ಇಂಜೀನಿಯರ್ ಹಾಗೂ ಕಟೀಲು ದೇವಳ ಆಡಳಿತಾಧಿಕಾರಿ ಸಭೆಗೆ ಹಾಜಾರಾಗುವಂತೆ ಗ್ರಾಮಸ್ಥರ ಅಪೇಕ್ಷೆಯಂತೆ ತಿಳಿಸಲಾಗುವುದು ಮುಂದಿನ ಸಭೆ ಜನವರಿ 30ರಂದು ಗ್ರಾಮ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

Kinnigoli 17011420

Comments

comments

Comments are closed.

Read previous post:
ಪ್ರತೀಕ್ಷಾ ರಾಷ್ಟ್ರಮಟ್ಟದ ಗ್ರ್ಯಾಂಡ್ ಚಾಂಪಿಯನ್

ಮಂಗಳೂರು: ಮೂಲ್ಕಿಯ ಪ್ರತಿಷ್ಠಿತ ಶ್ರೀ ನಾರಾಯಣಗುರು ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿ ಪ್ರತೀಕ್ಷಾ ನಿತ್ಯಾನಂದರವರು ಇತ್ತೀಚೆಗೆ ಚಿಕ್ಕಮಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯ ಕಪ್ಪು ಪಟ್ಟಿ ವಿಭಾಗದಲ್ಲಿ ಗ್ರ್ಯಾಂಡ್...

Close