ಪ್ರತೀಕ್ಷಾ ರಾಷ್ಟ್ರಮಟ್ಟದ ಗ್ರ್ಯಾಂಡ್ ಚಾಂಪಿಯನ್

ಮಂಗಳೂರು: ಮೂಲ್ಕಿಯ ಪ್ರತಿಷ್ಠಿತ ಶ್ರೀ ನಾರಾಯಣಗುರು ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿ ಪ್ರತೀಕ್ಷಾ ನಿತ್ಯಾನಂದರವರು ಇತ್ತೀಚೆಗೆ ಚಿಕ್ಕಮಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯ ಕಪ್ಪು ಪಟ್ಟಿ ವಿಭಾಗದಲ್ಲಿ ಗ್ರ್ಯಾಂಡ್ ಚಾಂಪಿಯನ್ ಪ್ರಶಸ್ತಿಯನ್ನು ಪಡೆದಿರುತ್ತಾರೆ.
ಸ್ಪರ್ಧಾ ಕೂಟದಲ್ಲಿ ಕಟಾ ವಿಭಾಗದಲ್ಲಿ ಪ್ರಥಮ, ಕುಮಿಟೆಯಲ್ಲಿ ಪ್ರಥಮ ಸ್ಥಾನ ಪಡೆದು ಅಗ್ರಶ್ರೇಯಾಂಕದಲ್ಲಿ ಬಲಿಷ್ಠ ದಿಟ್ಟ ಮಹಿಳೆ ಎಂಬ ವಿಶೇಷ ಪ್ರಶಸ್ತಿಯೊಂದಿಗೆ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದಾರೆ.
ಪ್ರತೀಕ್ಷಾ ಮೂಲ್ಕಿಯ ಶ್ರೀ ನಾರಾಯಣಗುರು ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದು, ಇವರು ಉಡುಪಿ ಲಕ್ಷ್ಮೀನಾರಾಯಣ ಆಚಾರ್ಯ ಹಾಗೂ ಉಮೇಶ್ ಬಂಗೇರರವರ ಮಾರ್ಗದರ್ಶನದಲ್ಲಿ ಹೆಜಮಾಡಿ ಶಾಖೆಯಲ್ಲಿ ಕರಾಟೆ ತರಬೇತಿ ಪಡೆಯುತ್ತಿದ್ದಾರೆ. ಹೆಜಮಾಡಿ ನಿವಾಸಿ ಸಾರಿಗೆ ಉದ್ಯಮಿ ನಿತ್ಯಾನಂದ ಹಾಗೂ ಶಿಕ್ಷಕಿ ರಾಜೇಶ್ವರಿ ದಂಪತಿಯ ಸುಪುತ್ರಿಯಾಗಿದ್ದಾಳೆ.

Kinnigoli 17011419

Comments

comments

Comments are closed.

Read previous post:
Kinnigoli 17011405
ಕಟೀಲು-ದ.ಕ ಜಿ.ಪಂ.ಅಧ್ಯಕ್ಷರ ತಂಡ ಭೇಟಿ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪರಿಸರದ ಹೋಟೆಲ್ ಕಟ್ಟಡ ಹಾಗೂ ಕಲ್ಯಾಣ ಮಂಟಪಗಳಿಂದ ಮಲೀನ ನೀರು ನಂದಿನಿ ನದಿಗೆ ಬಿಡುವುದರಿಂದ ಕುಡಿಯುವ ನೀರು ಕಲುಷಿತ ಗೊಳ್ಳುವುದು ಅಲ್ಲದೆ...

Close