ಕಿಲ್ಪಾಡಿ ಪಂಚಾಯತ್ ಗ್ರಾಮ ಸಭೆ

ಮೂಲ್ಕಿ: ಕಿಲ್ಪಾಡಿ ಗ್ರಾಮಪಂಚಾಯತಿನ2013-14ನೇ ಸಾಲಿನ ಗ್ರಾಮ ಸಭೆ ಮತ್ತು ಆರ್ಥಿಕ ಜನಗಣತಿ ಕರಡು ಪಟ್ಟಿ ಪರಿಷ್ಕರಣೆ ಸಭೆ ಕಿಲ್ಪಾಡಿ ಪಂಚಾಯತ್ ಸಭಾಭವನದಲ್ಲಿ ನಡೆಯಿತು.ಸಭೆ ಎಲ್ಲಾ ಇಲಾಖೆಯಿಂದ ಅಧಿಕಾರಿಗಳು ಬಂದಿದ್ದರೂ ಜಿಲ್ಲಾಪಂಚಾಯತ್ ಸದಸ್ಯರು ನಾಪತ್ತೆಯಾದದ್ದು ನಾಗರಿಕರನ್ನು ಆಕ್ರೋಶಗೊಳಿಸಿತು.
ಕೆಂಚನಕೆರೆಯಲ್ಲಿರುವ ಇಬ್ಬರು ವಾಸಿಗಳ ವೈಯುಕ್ತಿಕ ಹಗೆ ಪಂಚಾಯತ್ ಸಭೆಯಲ್ಲೂ ಪ್ರತಿಧ್ವನಿಸಿ ವೈಮನಸ್ಯಕ್ಕೆ ಕಾರಣವಾದ ಬೋರ್‌ವೆಲ್ ಪುರಾಣ ಇಡೀ ಸಭೆಯನ್ನೇ ನುಂಗಿ ಹಾಕಿತು.ಕಳೆದ ಪಂಚಾಯತ್ ಸಭೆಯಲ್ಲಿ ಕ್ಯಾನೆಟ್ ಎಂಬವರು ನೆರೆಮನೆ ವಾಸಿಗಳು ಅಕ್ರಮವಾಗಿ ಮೆನ್ನಬೆಟ್ಟು ಪಂಚಾಯತ್‌ಗೆತಮ್ಮ ಬೋರ್‌ವೆಲ್ಲಿನಿಂದ ನೀರು ಮಾರಾಟ ಮಾಡುತ್ತಿದ್ದಾರೆ ಮತ್ತು ಅವರ ಬೋರ್‌ವೆಲ್ಲಿನಿಂದ ನಮ್ಮ ಬಾವಿಯ ನೀರಿಗೆ ತೊಂದರೆಯಾಗಿದೆ ಎಂದು ಆರೋಪಿಸಿದ್ದನ್ನು ಪ್ರಶ್ನಿಸುವುದಕ್ಕಾಗಿಯೇಸಭೆ ಆಗಮಿಸಿದ್ದ ನೆರೆಮನೆವಾಸಿ ರಾಜೇಶ ಪಿಂಟೋ ವಿನಾ ಕಾರಣ ನಮ್ಮ ಮೇಲೆ ವೈಯುಕ್ತಿಕ ಹಗೆತನ ಸಾದಿಸಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಅಲ್ಲದೆ ಮನೆಗೆ ಬಂದು ಜೀವಬೆದರಿಕೆ ಒಡ್ಡುತ್ತಿದ್ದಾರೆ,ನಾವು ಏನಾದರೂ ತಪ್ಪು ಮಾಡಿದ್ದರೆ ಸಾಬೀತುಪಡಿಸಲಿ ಎಂದು ಸವಾಲೆಸೆದರು.ಹೀಗೆ ಮಾತಿಗೆ ಮಾತು ಬೆಳೆದು ಸಭೆಯೇ ಗದ್ದಲದ ಗೂಡಾಗಿ ಪರಿಣಮಿಸಿದಾಗ ನಿಮ್ಮನಿಮ್ಮ ವೈಯುಕಿಕ ವಿಷಯಗಳನ್ನು ಇಲ್ಲಿ ಪ್ರಸ್ತಾಪ ಮಾಡುವಂತಿಲ್ಲ ಅವರು ಆರೋಪ ಮಾಡಿದ ಹಾಗೆ ಎಲ್ಲಿಯಾದರೂ ನೀರು ಮಾರಾಟ ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಕೆರೆಕಾಡಿನಲ್ಲಿ ಕಳೆದ 10 ವರ್ಷಗಳಿಂದ ರಸ್ತೆ ಸರಿ ಇಲ್ಲ, ವಿದ್ಯುತ್ ದೀಪವಂತೂ ಹೊತ್ತುವುದೇ ಇಲ್ಲ,ಹೆಚ್ಚು ಕಮ್ಮಿ ವೋಲ್ಟೇಜ್ ಸಮಸ್ಯೆ ಕಾಡುತ್ತಿದ್ದು ಇದರಿಂದ ವಿದ್ಯುತ್ ಉಪಕರಣಗಳು ಕೆಟ್ಟು ಹೋಗಿದ್ದು ಈ ಬಗ್ಗೆ ಅನೇಕ ಬಾರಿ ಮುಲ್ಕಿ ಮೆಸ್ಕಾಂಗೆ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ಗ್ರಾಮಸ್ತ ರೋಬರ್ಟ ಪ್ರಶ್ನಿಸಿದಾಗ ಪಂಚಾಯತ್ ಉಪಾಧ್ಯಕ್ಷ ಮೋಹನ್ ಕುಬೆವೂರು ರಸ್ತೆಯ ಒಂದು ಬದಿ ಪಡುಪಣಂಬೂರು ಪಂಚಾಯತ್‌ಗೆ ಸೇರಿದ್ದು ಇನ್ನೊಂದು ಬಾಗ ಕಿಲ್ಪಾಡಿಗೆ ಸೇರಿದೆ ಎಂದು ಹೇಳಿದಾಗ ಆಕ್ರೋಶಗೊಂಡ ರೋಬರ್ಟ ಏನು ಇಂಡಿಯಾ- ಪಾಕಿಸ್ತಾನ ಗಡಿಯೇ ಮಾತುಕತೆ ನಡೆಸಿ ಸರಿಮಾಡಬಹುದಲ್ಲವೇ ಎಂದು ಹೇಳಿದಾಗ ಸರಿಮಾಡಿಸುವ ಭರವಸೆ ವ್ಯಕ್ತವಾಯಿತು.ವೋಲ್ಟೇಜ್ ಸಮಸ್ಯೆ ಬಗ್ಗೆ ಮೆಸ್ಕಾಂ ಅಧಿಕಾರಿ ಹಳೆ ರಾಗವನ್ನೇ ಎಳೆದು ಮುಲ್ಕಿ ಮೆಸ್ಕಾಂನಲ್ಲಿ ನೌಕರರ ಕೊರತೆಯನ್ನೇ ಹೇಳುತ್ತಾ ಹೋದರು.ಪಂಚಾಯತ್ ವ್ಯಾಪ್ತಿಯಲ್ಲಿ ಭಾಗ್ಯಜ್ಯೋತಿ ಕನೆಕ್ಷನ್ ಆಗಿದೆ ಮನೆಗೆ ಕಂರೆಂಟು ಇನ್ನೂ ಕೊಟ್ಟಿಲ್ಲ ಬಡವರಿಗೆ ಕೈಗೆ ಬಂದದ್ದು ಬಾಯಿಗೆ ಬಂದಿಲ್ಲ ಎಂದು ಜಯ ಮಟ್ಟು ಆಕ್ರೋಶ ವ್ಯಕ್ತಪಡಿಸಿದರು.ಕಿಲ್ಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಆಸಕ್ತರು ಬಾವಿ ತೋಡಬಹುದು ಎಂದು ಪಂಚಾಯತ್ ಪಿಡಿಒ ಶೋಭಾ ಹೇಳಿದರು.ಸರಕಾರಿ ಯೋಜನೆಗಳ ನೀತಿ ನಿಯಮಗಳು ದಿನಕ್ಕೊಂದರಂತೆ ಬದಲಾಗುತ್ತಿದ್ದು ಪರಶೀಲಿಸಬೇಕು.ಕೃಷಿಯ ಬಗ್ಗೆ ಪ್ರಸ್ತಾಪಿಸಿ ಮಲ್ಲಿಗೆ ಕೃಷಿಯ ಬಗ್ಗೆ ಹೇಳುತ್ತಿದ್ದಂತೆ ಕುಡಿಯುವ ನೀರಿಗೇ ಗತಿಯಿಲ್ಲ ಇನ್ನು ಮಲ್ಲಿಗೆ ಕೃಷಿ ಎಲ್ಲಿಂದ ಮಾಡುವುದು ಎಂದು ಸಂಜೀವ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.ಪಂಚಾಯತ್ ವ್ಯಾಪ್ತಿ ಮೈಲೊಟ್ಟು ರಸ್ತೆ ಅವ್ಯವಸ್ಥೆ ಬಗ್ಗೆ ಗ್ರಾಮಸ್ತ ಪುನೀತ ಕೃಷ್ಣ ಕೇಳಿದ ಪ್ರಶ್ನೆಗೆ ನೋಡಲ್ ಅಧಕಾರಿ ದಯಾನಂದ ಮಾತನಾಡಿ ಪಂಚಾಯತಿನಲ್ಲಿ ಅನುದಾನ ಇಲ್ಲ ಸ್ಥಳೀಯ ಸಂಸದ ಇಲ್ಲವೇ ಶಾಸಕ,ಜಿ.ಪಂ. ಸದಸ್ಯರಿಗೆ ಮನವಿ ಮಾಡಿ ಅನುದಾನ ಒದಗಿಸಿಕೊಳ್ಳಲು ಪ್ರಯತ್ನ ಮಾಡಿ ಎಂದರು. ನೀರಿಲ್ಲ ಎಂದು ಪಂಚಾಯತ್ ಕೈಕಟ್ಟಿ ಕುಳಿತರೆ ಆಗದು ನೀರಿನ ಸಮಸ್ಯೆ ನೀಗಿಸುವುದು ಪಂಚಾಯತ್ ಜವಾಬ್ದಾರಿ ಎಂದು ಪಂಚಾಯತ್‌ಗೆ ಚಾಟಿ ಬೀಸಿದರು. ಕಿಲ್ಪಾಡಿ ಪಂಚಾಯತ್ ಅಧ್ಯಕ್ಷೆ ಶಾರದಾ ವಸಂತ ಅಧ್ಯಕ್ಷತೆ ವಹಿಸಿದ್ದರು.ತಾಲ್ಲೂಕ ಪಂಚಾಯತ್ ಸದಸ್ಯೆ ವನಿತ ಅಮೀನ್,ಉಪಾಧ್ಯಕ್ಷ ಮೋಹನ ಕುಬೆವೂರು,ಇಂಜಿನಿಯರ್ ಪ್ರಶಾಂತ ಆಳ್ವ,ಆರೋಗ್ಯಾಧಿಕಾರಿ ಭಾಸ್ಕರ ಕೋಟ್ಯಾನ್, ಪಂಚಾಯತ್ ಸದಸ್ಯ ಮನೋಹರ ಕೋಟ್ಯಾನ್, ಅತಿಕರಿಬೆಟ್ಟು ವಿ.ಎ. ಸಂತೋಷ ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು.

Kinnigoli 16011404

Puneethakrishna Sk

Comments

comments

Comments are closed.

Read previous post:
ಯಕ್ಷಗಾನ ಕಲೆಗೆ ಪ್ರೋತ್ಸಾಹ ನೀಡಬೇಕು

ಕಿನ್ನಿಗೋಳಿ: ಜನಪದ ಪರಂಪರೆಯ ಯಕ್ಷಗಾನ ಕಲೆಯಿಂದ ಯುವ ಜನಾಂಗ ದೂರ ಸರಿಯುತ್ತಿದ್ದಾರೆ. ಉತ್ತಮ ಸಂಸ್ಕಾರದ ಯಕ್ಷಗಾನ ಕಲೆಯನ್ನು ಕಲಾಭಿಮಾನಿಗಳು ಉಳಿಸಿ ಬೆಳಸಿ ಪ್ರೋತ್ಸಾಹ ನೀಡಬೇಕಾಗಿದೆ. ಎಂದು ಕರ್ಣಾಟಕ ಬ್ಯಾಂಕ್...

Close