ದುಶ್ಚಟಗಳ ಕುರಿತು ಅರಿವು ಕಾರ್ಯಕ್ರಮ

ಕಿನ್ನಿಗೋಳಿ : ಐಕಳ ಪೊಂಪೈ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ, ರೆಡ್ ರಿಬ್ಬನ್ ಕ್ಲಬ್, ಯೂತ್ ರೆಡ್ ಕ್ರಾಸ್ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಸದಸ್ಯರಿಗಾಗಿ ಯುವಜನತೆಯ ಮೇಲೆ ದುಶ್ಚಟಗಳ ಪರಿಣಾಮಗಳು ಎಂಬ ವಿಷಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಕಾಲೇಜಿನ ಸಭಾಭವನದಲ್ಲಿ ನಡೆಯಿತು.
ಸಂಜೀವಿನಿ ಘಟಕದ ಸಂಪನ್ಮೂಲ ವ್ಯಕ್ತಿ ಲಲಿತಾ ಭಾಸ್ಕರ್ ಮತ್ತು ಗೌರವಾನ್ವಿತ ಭಗಿನಿ ಫ್ಲೋಸಿ ಮಿನೇಜಸ್ ರವರು ದುಶ್ಚಟಗಳ ಪರಿಣಾಮಗಳನ್ನು ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರಿಗೆ ಮನದಟ್ಟಾಗುವಂತೆ ತಿಳಿಸಿದರು. ಕನ್ಸೆಟ್ಟಾ ಆಸ್ಪತ್ರೆಯ ದಾದಿಯರು ಒಂದು ಪ್ರಹಸನದ ಮೂಲಕ ದುಶ್ಚಟಗಳು ಹೇಗೆ ಪ್ರಾರಂಭವಾಗುತ್ತದೆ ಎಂಬುದನ್ನು ಪ್ರಸ್ತುತ ಪಡಿಸಿದರು. ಪದ್ಮನೂರಿನ ವಿಕ್ಟರ್ ಪಾಯಸ್ ರವರು ದುಶ್ಚಟದ ಪರಿಣಾಮಗಳ ಬಗ್ಗೆ ತಮ್ಮ ಜೀವನಾನುಭವವನ್ನು ವಿವರಿಸಿದರು.
ಡಾ. ಗುಣಕರ್ ಎಸ್. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ, ಪ್ರೊ. ಯೋಗಿಂದ್ರ ಬಿ, ಸಮಾರಂಭದಲ್ಲಿ ಉಪಸ್ಥಿತರಿದ್ದರು.ಅಶ್ವಿತಾ ಕಾರ್ಯಕ್ರಮ ನಿರೂಪಿಸಿದರು. ಸಚಿನ್ ವಂದಿಸಿದರು.

Kinnigoli 18011402

Comments

comments

Comments are closed.