ಕೆರೆಕಾಡಿನಲ್ಲಿ ಉಚಿತ ಸಾಮೂಹಿಕ ವಿವಾಹ

ಕಿನ್ನಿಗೋಳಿ: ಇತ್ತೀಚೆಗೆ ಆಡಂಬರದ ಮದುವೆ ಕಾರ್ಯಕ್ರಮಗಳು ಬಹಳ ನಡೆಯುತ್ತಿದ್ದು ಮುಸ್ಲಿಂ ಸಮುದಾಯದ ಬಂಧುಗಳು ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಕೆರೆಕಾಡಿನಲ್ಲಿ ಉಚಿತ ಸಾಮೂಹಿಕ ವಿವಾಹದಂತಹ ಕಾರ್ಯಕ್ರಮ ಹಮ್ಮಿಕೊಂಡದ್ದು ಪ್ರಂಶಸನೀಯ ಎಂದು ಯುವಜನ ಕ್ರೀಡಾ ಹಾಗೂ ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು. ಸಾದಾತ್ ವಲೀಯುಲ್ಲಾಹಿ ದ್ಸಿಕ್‌ರ್ ಸ್ವಲಾತ್ ಮಜ್ಲೀಸ್ ರವರ ಆಶ್ರಯದಲ್ಲಿ ಕೆರೆಕಾಡಿನಲ್ಲಿ ಭಾನುವಾರ ನಡೆದ 9 ನೇ ವರ್ಷದ ದಿಕ್ಸರ್ ಸ್ವಲಾತ್ ಹಾಗೂ ಸಾಮೂಹಿಕ ವಿವಾಹ ಮತ್ತು ಸೌಹಾರ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿವಿಧ ಜಿಲ್ಲೆಗಳ ೮ ಜೋಡಿಗಳ ವಿವಾಹ ನಡೆಯಿತು. ಮುತ್ತುಪೇಟೆಯ ಎಸ್. ಎಸ್. ಬರ್ಕತಾಲಿ ಸಾಹೇಬ್ ಕಲೀಫಾ ಶುಭ ಹಾರೈಸಿದರು. ಕೆರೆಕಾಡು ಕುವ್ವೆತುಲ್ ಇಸ್ಲಾಂ ಸಂಸ್ಥೆಯ ಮಹಮ್ಮದ್ ಹನೀಫ್ ಮದನಿ ಕಾರ್ಯಕ್ರಮ ಉದ್ಘಾಟಿಸಿದರು. ಮೂಳೂರಿನ ಮನೀರ್ ಸಾಹೇಬ್, ಗದಗದ ಮಹಮ್ಮದ್ ಎಝಝ್ ರೆಹಮಾನ್ ಆಶ್ರಫಿ ಮಸಜ್ದಿದೆ ಬಿಲಾಲ್, ಕೊಲ್ನಾಡು ಖತೀಬರಾದ ಇಸಾಹಾಕ್ ಫೈಝೀ, ಚೊಕ್ಕಬೆಟ್ಟು ಜುಮ್ಮಾ ಮಸೀದಿಯ ಕೆ. ಅಬ್ದುಲ್ ಝೀಝ್ ದಾರಿಮಿ, ಮಂಗಳೂರು ನಗರಾಭಿವೃದ್ಧಿ ಪ್ರಾಽಕಾರದ ಆಯುಕ್ತ ಜನಾಬ್ ಮೊಹಮ್ಮದ್ ನಜೀರ್, ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯ ಅಹವದ್ ಬಾವ, ಕೆರೆಕಾಡು ಸಾದತ್ ವಲಿಯ ಗೌರವಾಧ್ಯಕ್ಷ ಎಮ್. ಕೆ. ಕೋಯಲಿ, ಪಡುಪಣಂಬೂರು ಗ್ರಾ. ಪಂ. ಮಾಜಿ ಅಧ್ಯಕ್ಷ ವಿನೋದ್ ಸಾಲ್ಯಾನ್, ಕೆರೆಕಾಡು ಹಿಂದು ಜಾಗರಣ ವೇದಿಕೆ ಅಧ್ಯಕ್ಷ ಶ್ರೀನಿವಾಸ ಆಚಾರ್ಯ, ಡಾ| ಶೈಲೇಶ್ ಎಂ. ಡಿ, ನಿತ್ಯಾನಂದ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು. ಕೆ. ಸಾಹುಲ್ ಹಮೀದ್ ಕದಿಕೆ ಸ್ವಾಗತಿಸಿ ಬಿ. ಕೆ. ಇಮ್ತಿಯಾಜ್ ಕಾರ್ಯಕ್ರಮ ನಿರೂಪಿಸಿದರು.

Kinnigoli 20011406

Comments

comments

Comments are closed.

Read previous post:
ಅಂಗರಗುಡ್ಡೆ : ಶ್ರಮದಾನ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಅಂಗರಗುಡ್ಡೆ ಮೋದಿ ಅಭಿಮಾನಿ ಬಳಗದ ಆಶ್ರಯದಲ್ಲಿ ಮೂಲ್ಕಿ ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಕೆಂಚನಕೆರೆ ತಿರುವು ಪರಿಸರದಲ್ಲಿ ಭಾನುವಾರ ರಸ್ತೆ ಬದಿಯ ಹೊಂಡಗಳಿಗೆ ಮಣ್ಣು...

Close