ಉಳೆಪಾಡಿ ಉಚಿತ ಆರೋಗ್ಯ ತಪಸಣಾ ಶಿಬಿರ

ಕಿನ್ನಿಗೋಳಿ: ರೋಗ ಮುಕ್ತ ಪಾನ ಮುಕ್ತ ದಾರಿದ್ರ್ಯ ಮುಕ್ತವಾಗಲು ಇಂತಹ ಸಮಾಜಪಯೋಗಿ ಶಿಬಿರಗಳು ಸಹಕಾರಿಯಾಗಿದೆ. ಎಂದು ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಮ್ಮಾಯಿ ದೇವಸ್ಥಾನದ ಧರ್ಮದರ್ಶಿ ಮೋಹನದಾಸ ಸುರತ್ಕಲ್ ಹೇಳಿದರು.
ಕಿನ್ನಿಗೋಳಿ ಸಮೀಪದ ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಮ್ಮಾಯಿ ದೇವಸ್ಥಾನ ಹಾಗೂ ಮುಕ್ಕ ಶ್ರೀನಿವಾಸ ಆಸ್ಪತ್ರೆಯ ಆಶ್ರಯದಲ್ಲಿ ಭಾನುವಾರ ದೇವಳದ ಸಭಾಂಗಣದಲ್ಲಿ ನಡೆದ ಉಚಿತ ಆರೋಗ್ಯ ತಪಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಶ್ರೀನಿವಾಸ ಆಸ್ಪತ್ರೆಯ ಎಲುಬು ಮತ್ತು ಕೀಲು ವಿಭಾಗದ ಡಾ| ರಾಮಚಂದ್ರ, ಕಿವಿ ಮೂಗು ಮತ್ತು ಗಂಟಲು ವಿಭಾಗದ ಡಾ| ಮಹೇಶ್ಚಂದ್ರ ಹೆಗ್ಡೆ, ಮಾರ್ಕೆಟಿಂಗ್ ವಿಭಾಗದ ದೀಪಿಕಾ ನಾಯಕ್ ಮತ್ತಿತರರು ಉಪಸ್ಥಿತರಿದ್ದರು. ಸುಮಾರು 100 ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.

Kinnigoli 20011405

Comments

comments

Comments are closed.

Read previous post:
ಮಕ್ಕಳ ಕಥಾ ಕವಿತಾ ತರಬೇತಿ ಗೋಷ್ಠಿ2014

ಕಿನ್ನಿಗೋಳಿ: ಸಾಹಿತ್ಯದ ಬಗ್ಗೆ ಚಿಕ್ಕ ವಯಸ್ಸಿನಲ್ಲಿಯೇ ಆಸಕ್ತಿ ಬೆಳೆಸಬೇಕು, ದೊಡ್ಡವರು ಆಸಕ್ತಿ ಬೆಳೆಸಿಕೊಂಡರೆ ಅದು ಮಕ್ಕಳಲ್ಲೂ ಬೆಳೆಯುತ್ತದೆ ಮಾತೃ ಭಾಷೆಯಲ್ಲಿ ಗುಣಮಟ್ಟದ ಶಿಕ್ಷಣ ಪಡೆದಾಗ ನಮ್ಮಲ್ಲಿರುವ ಸಹಜವಾದ ಪ್ರತಿಭೆ...

Close