ಐಕಳ ಜೋಡುಕೆರೆ ಕಂಬಳ ಫಲಿತಾಂಶ

ಕಿನ್ನಿಗೊಳಿ : ಕೃಷಿಕರಲ್ಲಿ ಮನೋಬಲ ಹೆಚ್ಚಿಸುವ ಹಾಗೂ ಧೈರ್ಯ ತುಂಬುವ ಕಾರ್ಯ ಆಗಬೇಕು. ಜನಪದ ಕ್ರೀಡೆಯಾದ ಕಂಬಳದ ಅಭಿವೃದ್ಧಿ ಹಾಗೂ ಉಳಿಸಿ ಬೆಳೆಸುವ ಪ್ರಯತ್ನ ಮಾಡಬೇಕಾಗಿದೆ ಎಂದು ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.
ಶನಿವಾರ ನಡೆದ ಐಕಳ ಬಾವಾ ಕಾಂತಬಾರೆ-ಬೂದಬಾರೆ ಜೋಡುಕರೆ ಕಂಬಳದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯುವಜನ ಸೇವೆ ಮತ್ತು ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಮಾತನಾಡಿ ಕಂಬಳ ಕ್ರೀಡೆ ಹಾಗೂ ಸಹಿತ ಗ್ರಾಮೀಣ ಕ್ರೀಡೆಗಳಿಗೆ ಸರಕಾರ ೨ ಕೋಟಿ ಅನುದಾನ ಬಿಡುಗಡೆ ಮಾಡಲಿದೆ ಆಯ್ದ ಕಂಬಳಗಳಿಗೆ ಹಾಗೂ ಅಲ್ಲಿನ ಅಭಿವೃದ್ಧಿ ಕಾಮಗಾರಿಗಾಗಿ ಹಣ ನೀಡಲಿದೆ ಎಂದರು.

ದ. ಕ. ಜಿಲ್ಲಾ ಎಸ್. ಸಿ. ಡಿ. ಸಿ. ಸಿ. ಬ್ಯಾಂಕ್‌ನ ಅಧ್ಯಕ್ಷ ಡಾ| ಎಂ. ಎನ್. ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಸಚಿವ ಅಮರನಾಥ ಶೆಟ್ಟಿ, ದೋಗಣ್ಣ ಸಿ. ಶೆಟ್ಟಿ ಐಕಳ ಬಾವಾ, ಮುಂಬಯಿ ಉದ್ಯಮಿ ಐಕಳ ಹರೀಶ್ ಶೆಟ್ಟಿ , ಐಕಳ ಗ್ರಾ. ಪಂ. ಅಧ್ಯಕ್ಷೆ ಪದ್ಮಿನಿ ವಸಂತ್, ಉಡುಪಿ ಜೆಡಿಎಸ್ ಕಾರ್ಯಾಧ್ಯಕ್ಷ ಗುಲಾಂ ಮೊಹಮ್ಮದ್, ಮುಲ್ಕಿ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್, ಉದ್ಯಮಿ ಸಂತೋಷ್ ಕುಮಾರ್ ಹೆಗ್ಡೆ , ಕಿನ್ನಿಗೋಳಿ ವ್ಯವಸಾಯ ಬ್ಯಾಂಕ್ ಅಧ್ಯಕ್ಷ ಲವ ಶೆಟ್ಟಿ , ಶಾಖಾ ಪ್ರಬಂಧಕ ಶೇಖರ ಮಾಡ, ಐಕಳ ಕರ್ಣಾಟಕ ಬ್ಯಾಂಕ್ ಪ್ರಬಂಧಕ ಒಸ್ವಾಲ್ಡ್ ಜೋಸೆಫ್ ಡಿ’ಸೋಜ, ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗದ ಪ್ರಶಾಂತ್ ಆಳ್ವ, ಐಕಳ ಮುರಳೀಧರ ಶೆಟ್ಟಿ , ಚಿತ್ತರಂಜನ್ ಭಂಡಾರಿ ಐಕಳ ಬಾವ ಉಪಸ್ಥಿತರಿದ್ದರು.
ಐಕಳ ಬಾವ ದೇವಿ ಪ್ರಸಾದ್ ಶೆಟ್ಟಿ ಬೆಳಪು ಸ್ವಾಗತಿಸಿ ಸಾಯಿನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸರಕಾರದ ವಿಶೇಷ ಯೋಜನೆಯಡಿ ಸುಮಾರು ೨೦ ಲಕ್ಷ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ ಪ್ರಾಚೀನ ಇತಿಹಾಸ ಪ್ರಸಿದ್ಧ ಕಾಂತಬಾರೆ-ಬೂದಬಾರೆ ಅವರ ಬಾಣದ ಕೆರೆಯನ್ನು ಸಚಿವ ಕೆ. ಅಭಯಚಂದ್ರ ಉದ್ಘಾಟಿಸಿದರು.
ಸಚಿವರಾದ ಕೆ. ಅಭಯಚಂದ್ರ ಜೈನ್, ವಿನಯಕುಮಾರ್ ಸೊರಕೆ, ಸಹಕಾರಿ ರತ್ನ ಪ್ರಶಸ್ತಿ ವಿಜೇತ ಡಾ| ಎಂ.ಎನ್. ರಾಜೇಂದ್ರ ಕುಮಾರ್, ಕನಾರ್ಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪಯ್ಯೊಟ್ಟು ಸದಾಶಿವ ಸಾಲ್ಯಾನ್, ಜಾನಪದ ಸಂಶೋಧಕ ಮುದ್ದು ಮೂಡಬೆಳ್ಳೆ, ವೈ ಯೋಗೀಶ್ ರಾವ್ ಹಾಗೂ ಗುರುವ ಮುಖಾರಿ ಅವರನ್ನು ಸನ್ಮಾನಿಸಲಾಯಿತು.

Kinnigoli 21011403

ಐಕಳ ಜೋಡುಕೆರೆ ಕಂಬಳದ ಫಲಿತಾಂಶ
ಸ್ಪರ್ಧೆಯಲ್ಲಿ ಒಟ್ಟು 110 ಜೋಡಿ ಕೋಣಗಳು ಭಾಗವಹಿಸಿದ್ದವು.

ಕೆನೆ ಹಲಗೆ (4 ಜತೆ ಕೋಣಗಳು)
ಪ್ರಥಮ : ವಾಮಂಜೂರು ತಿರುವೈಲು ಗುತ್ತು ನವೀನ ಚಂದ್ರ ಆಳ್ವ (ಓಡಿಸಿದವರು ಮಂದಾರ್ತಿ ಗೋಪಾಲ ನಾಯ್ಕ್)
ದ್ವಿತೀಯ : ಬಾರ್ಕೂರು ಶಾಂತರಾಮ ಶೆಟ್ಟಿ (ಓಡಿಸಿದವರು ಮಂದಾರ್ತಿ ಗೋಪಾಲ ನಾಯ್ಕ್)
ಆರೂವರೆ ಕೋಲು ನಿಶಾನೆಗೆ ನೀರು ಹಾಯಿಸಿರುತ್ತಾರೆ.

ಹಗ್ಗ ಹಿರಿಯ (13 ಜತೆ ಕೋಣಗಳು)
ಪ್ರಥಮ: ಕಾರ್ಕಳ ಜೀವನ್‌ದಾಸ್ ಅಡ್ಯಂತಾಯ (ಓಡಿಸಿದವರು ಹೊಕ್ಕಡಗೋಳಿ ಹಕ್ಕೇರಿ ಸುರೇಶ್ ಎಂ. ಶೆಟ್ಟಿ)
ದ್ವಿತೀಯ : ಅತ್ತೂರು ಗುಂಡ್ಯಡ್ಕ ಬೋಳ ಶ್ರೀನಿವಾಸ್ ಕಾಮತ್ (ಓಡಿಸಿದವರು ಪಣಪಿಲ ಸಾಧು ಶೆಟ್ಟಿ).

ಹಗ್ಗ ಕಿರಿಯ (30 ಜತೆ ಕೋಣಗಳು)
ಪ್ರಥಮ: ನಂದಳಿಕೆ ನವ್ಯತಾ ಶ್ರೀಕಾಂತ್ ಭಟ್ “ಎ” (ಓಡಿಸಿದವರು ಕೊಳಕೆ ಇರ್ವತ್ತೂರು ಆನಂದ)
ದ್ವಿತೀಯ: ನಂದಳಿಕೆ ನವ್ಯತಾ ಶ್ರೀಕಾಂತ ಭಟ್ “ಬಿ” (ಓಡಿಸಿದವರು ಮಾರ್ನಾಡು ರಾಜೇಶ್)

ನೇಗಿಲು ಹಿರಿಯ (೧೫ ಜತೆ ಕೋಣಗಳು)
ಪ್ರಥಮ : ಬೋಳದ ಗುತ್ತು ಸತೀಶ ಶೆಟ್ಟಿ (ಓಡಿಸಿದವರು ಹೊಕ್ಕಡಗೋಳಿ ಹಕ್ಕೇರಿ ಸುರೇಶ್ ಶೆಟ್ಟಿ)
ದ್ವಿತೀಯ: ಇರುವೈಲು ಪಾಣಿಲಾ ಬಾಡ ಪೂಜಾರಿ (ಓಡಿಸಿದವರು ಕೊಳಕೆ ಇರ್ವತ್ತೂರು ಆನಂದ)

ನೇಗಿಲು ಕಿರಿಯ (44 ಜತೆ ಕೋಣಗಳು)
ಪ್ರಥಮ: ಕಾಂತಾವರ ಬಾಂದೊಟ್ಟು ನಿಖಿಲ್ ಮೋಕ್ಷಿತ್ ಕುಮಾರ್ (ಓಡಿಸಿದವರು ಕಾಂತಾವರ ಗುರುಪ್ರಸಾದ್ ಕೋಟ್ಯಾನ್)
ದ್ವಿತೀಯ: ಬೋಳದ ಗುತ್ತು ಸತೀಶ ಶೆಟ್ಟಿ (ಓಡಿಸಿದವರು ಹೊಕ್ಕಡಗೋಳಿ ಹಕ್ಕೇರಿ ಸುರೇಶ್ ಎಂ. ಶೆಟ್ಟಿ)

ಅಡ್ಡ ಹಲಗೆ (4 ಜತೆ ಕೋಣಗಳು)
ಪ್ರಥಮ: ಹಂಕರ್‌ಜಾಲು ಬಿರ್ಮಣ್ಣ ಶೆಟ್ಟಿ (ಓಡಿಸಿದವರು ಅಣ್ಣಿ ದೇವಾಡಿಗ)
ದ್ವಿತೀಯ: ಮಾಳ ಕಾರ್ತಿಕ್ ಬಾಸ್ಕರ್ ಆಚಾರ್ಯ (ಓಡಿಸಿದವರು ಗಂಗಯ್ಯ ಪೂಜಾರಿ)

Comments

comments

Comments are closed.

Read previous post:
ಕೆರೆಕಾಡಿನಲ್ಲಿ ಉಚಿತ ಸಾಮೂಹಿಕ ವಿವಾಹ

ಕಿನ್ನಿಗೋಳಿ: ಇತ್ತೀಚೆಗೆ ಆಡಂಬರದ ಮದುವೆ ಕಾರ್ಯಕ್ರಮಗಳು ಬಹಳ ನಡೆಯುತ್ತಿದ್ದು ಮುಸ್ಲಿಂ ಸಮುದಾಯದ ಬಂಧುಗಳು ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಕೆರೆಕಾಡಿನಲ್ಲಿ ಉಚಿತ ಸಾಮೂಹಿಕ ವಿವಾಹದಂತಹ ಕಾರ್ಯಕ್ರಮ ಹಮ್ಮಿಕೊಂಡದ್ದು ಪ್ರಂಶಸನೀಯ...

Close