ಬಳ್ಕುಂಜೆ: ಆರೋಗ್ಯದ ಬಗ್ಗೆ ಕಾಳಜಿ ಮುಖ್ಯ

ಕಿನ್ನಿಗೋಳಿ: ಗ್ರಾಮೀಣ ಪ್ರದೇಶದ ಜನತೆ ಸ್ವಯಂ ಪ್ರೇರಣೆಯಿಂದ ಆರೋಗ್ಯ ಬಗ್ಗೆ ಕಾಳಜಿ ಮೈಗೂಡಿಸಿಕೊಳ್ಳಬೇಕು ಎಂದು ಮುಂಬಯಿ ಉದ್ಯಮಿ ವಿರಾರ್ ಶಂಕರ ಶೆಟ್ಟಿ ಹೇಳಿದರು.
ಭಾನುವಾರ ಬಳ್ಕುಂಜೆ ಸಂತ ಪೌಲ್ ಚರ್ಚ್ ಸಭಾಭವನದಲ್ಲಿ ಬಳ್ಕುಂಜೆ ಸಂತ ಪೌಲ್ ಚರ್ಚ್ ಶತಮಾನೋತ್ಸವದ ಅಂಗವಾಗಿ ಕೊಲ್ಲೂರು ಸರಕಾರಿ ಆಯುರ್ವೇದ ಆಸ್ಪತ್ರೆ ಹಾಗೂ ಮೂಡಬಿದಿರೆ ಆಳ್ವಾಸ್ ಪ್ರಕೃತಿ ಮತ್ತು ಯೋಗ ವಿಜ್ಞಾನ ಕಾಲೇಜು ಸಹಯೋಗದಿಂದ ನಡೆಯುತ್ತಿರುವ ೧೦ ದಿನಗಳ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಶಿಬಿರ ಉದ್ಘಾಟಿಸಿ ಮಾತನಾಡಿದರು.
ದಾಮಸ್‌ಕಟ್ಟೆ ಕಿರೆಂ ಚರ್ಚ್ ಧರ್ಮ ಗುರು ಫಾ| ಪೌಲ್ ಪಿಂಟೊ ಆಶೀರ್ವಚನಗೈದರು. ಬಳ್ಕುಂಜೆ ಚರ್ಚ್ ಧರ್ಮ ಗುರು ಫಾ| ಮೈಕಲ್ ಡಿಸಿಲ್ವಾ ಅಧ್ಯಕ್ಷತೆ ವಹಿಸಿದ್ದರು.
ಮೂಡಬಿದಿರೆ ಆಳ್ವಾಸ್ ಪ್ರಕೃತಿ ಮತ್ತು ಯೋಗ ವಿಜ್ಞಾನ ಕಾಲೇಜು ಪ್ರಿನ್ಸಿಪಾಲ್ ಡಾ| ವನಿತಾ ಶೆಟ್ಟಿ, ಜೆರೊಮ್ ಸಿಕ್ವೇರಾ ಕೊಲ್ಲೂರು, ಬಳ್ಕುಂಜೆ ಗ್ರಾ. ಪಂ. ಅಧ್ಯಕ್ಷ ದಿನೇಶ್ ಪುತ್ರನ್, ವೈದ್ಯಾಧಿಕಾರಿ ಡಾ| ಮುರಳೀಧರ, ಬಳ್ಕುಂಜೆ ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ ಫ್ರೆಡಿಕ್ ಪಿಂಟೋ, ಬಳ್ಕುಂಜೆ ಸಂತ ಪೌಲರ ಪ್ರೌಢ ಶಾಲೆ ಮುಖ್ಯ ಶಿಕ್ಷಕಿ ಭಗಿನಿ ಪೋಲೆಟ್, ರಶ್ಮಿ ಆಚಾರ್ಯ, ಐ. ಸಿ. ವೈ. ಯಂ. ಕಿನ್ನಿಗೋಳಿ ವಲಯ ಅಧ್ಯಕ್ಷೆ ಮೆಲ್ರೀಡಾ ರೊಡ್ರಿಗಸ್, ಎಸ್. ವಿ. ಪಿ. ಅಧ್ಯಕ್ಷೆ ಜೆಸಿಂತಾ ಡಿಸೋಜ , ವಿಠೋಭ ರಕುಮಾಯಿ ಭಜನಾ ಮಂದಿರ ಅಧ್ಯಕ್ಷ ಬಿ. ದಿನಕರ ಶೆಟ್ಟಿ , ಸಂಘಟಕ ಮೈಕಲ್ ರೊಡ್ರಿಗಸ್ ಉಪಸ್ಥಿತರಿದ್ದರು.
ಡಾ| ಬಿನು ಪ್ರಸ್ತಾವನೆಗೈದು ತಾಲೂಕು ಪಂಚಾಯಿತಿ ಸದಸ್ಯ ನೆಲ್ಸನ್ ಲೋಬೋ ಸ್ವಾಗತಿಸಿದರು. ಅನಿತಾ ಡಿಸೋಜ ವಂದಿಸಿದರು.

Kinnigoli 21011401 Kinnigoli 21011402

Comments

comments

Comments are closed.

Read previous post:
ಭ್ರಾಮರಿ ವನ ಹಾಗೂ ಬಯಲು ಆಲಯ ಶಿಲಾನ್ಯಾಸ

ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ಮೂಲ ಕುದ್ರು ಕ್ಷೇತ್ರದಲ್ಲಿ ಭ್ರಾಮರಿ ವನ ಹಾಗೂ ಬಯಲು ಆಲಯಕ್ಕಾಗಿ ಭಾನುವಾರ ಶಿಲಾನ್ಯಾಸ ನೆರವೇರಿತು. ಈ ಸಂದರ್ಭ ದಾನಿಗಳಾದ ಸತೀಶ್...

Close