ಸೈಂಟ್ ಮೇರಿಸ್ ಸೆಂಟ್ರಲ್ ಶಾಲಾ ಕಟ್ಟಡ ಉದ್ಘಾಟನೆ

ಕಿನ್ನಿಗೋಳಿ : ಶಿಸ್ತು ಹಾಗೂ ಮಾನವೀಯ ಮೌಲ್ಯಗಳ ಉದ್ದೀಪನದೊಂದಿಗೆ ವಿದ್ಯಾರ್ಥಿಗಳನ್ನು ಸಮಾಜದ ಸಭ್ಯ ಹಾಗೂ ಸುಸಂಸ್ಕೃತ ನಾಗರಿಕರನ್ನಾಗಿ ಮಾಡಲು ಶಿಕ್ಷಣ ಸಂಸ್ಥೆಗಳು ಪ್ರೇರಣೆ ನೀಡುತ್ತದೆ ಎಂದು ಫಾ| ಡಾ| ಎಲೋಸಿಯಸ್ ಪೌಲ್ ಡಿ’ಸೋಜ ಹೇಳಿದರು.
ಮಂಗಳವಾರ ಕಿನ್ನಿಗೋಳಿ ಸೈಂಟ್ ಮೇರಿಸ್ ಸೆಂಟ್ರಲ್ ನೂತನ ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಮಾತನಾಡಿ ಮೌಲ್ಯಾಧಾರಿತ ಶಿಕ್ಷಣದ ಚಿಂತನೆಗಳಿದ್ದರೆ ಸಾಕ್ಷರತೆ ಬೆಳಗುತ್ತದೆ. ಶಿಕ್ಷಣ ವ್ಯಾಪಾರಿಕರಣವಾಗದೆ ಸೇವಾ ಮನೋಭಾವದ ವಾತವರಣವಿರಬೇಕು ಎಂದರು.
ಮಂಗಳೂರು ಉತ್ತರ ವಲಯದ ಶಿಕ್ಷಣಾಧಿಕಾರಿ ಸಿ.ಲೋಕೇಶ್, ಬೆಥನಿ ಸಂಸ್ಥೆಯ ಸಹಾಯಕ ಮುಖ್ಯಸ್ಥೆ ಭಗಿನಿ ಎಮ್. ಲಿಲ್ಲಿಸ್ ಬಿ.ಎಸ್, ಕಟೀಲು ದೇವಳ ಅನುವಂಶಿಕ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಕಿನ್ನಿಗೋಳಿ ಜುಮ್ಮಾ ಮಸೀದಿಯ ಖತೀಬ್ ಅಬ್ದುಲ್ ಲತೀಫ್ ಸಖಾಫಿ, ತಾಲೂಕು ಪಂಚಾಯಿತಿ ಸದಸ್ಯೆ ಬೇಬಿ ಎಸ್. ಕೋಟ್ಯಾನ್, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ಧನ ಕಿಲೆಂಜೂರು, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಪಿ. ಹೆಗ್ಡೆ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಕಿನ್ನಿಗೋಳಿ ಯುಗಪುರುಷ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಕಿನ್ನಿಗೋಳಿ ವಲಯ ಕಾಂಗ್ರೇಸ್ ಸಮಿತಿ ಅಧ್ಯಕ್ಷ ಜೋಸ್ಸಿ ಪಿಂಟೋ, ಮಂಗಳೂರು ಸಹ ಶಿಕ್ಷಕರ ಸಂಘದ ಅಧ್ಯಕ್ಷ ಪ್ರವೀಣ್ ಕುಟಿನ್ಹೊ, ಮಂಗಳೂರು ಸಿ.ಬಿ.ಇ ಕಾರ್ಯದರ್ಶಿ ಫಾ| ವಿಲ್ಸನ್ ಎಲ್. ವಿ. ಡಿ’ಸೋಜ, ರುಡಾಲ್ಫ್ ಫೆರ್ನಾಂಡೀಸ್ ಮತ್ತಿತರರು ಉಪಸ್ಥಿತರಿದ್ದರು.
ಸೈಂಟ್ ಮೇರಿಸ್ ಸೆಂಟ್ರಲ್ ಶಾಲಾ ಸಂಚಾಲಕ ಫಾ|ಆಲ್ಫ್ರೆಡ್ ಜೆ ಪಿಂಟೊ ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಇಸಬೆಲ್ಲ ಪಿಂಟೊ ಪ್ರಸ್ತಾವನೆಗೈದರು. ಕಿನ್ನಿಗೋಳಿ ಚಚ್ ಸಹಾಯಕ ಧರ್ಮಗುರು ಫಾ| ವಿನೋದ್ ಲೋಬೊ ವಂದಿಸಿದರು. ಹೆನ್ರಿ ಮಥಾಯಸ್ ಹಾಗೂ ಸೈಂಟ್ ಮೇರಿಸ್ ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕಿ ಆನೆಟ್ ಲೋಬೊ ಕಾರ್ಯಕ್ರಮ ನಿರೂಪಿಸಿದರು.

Kinnigoli 21011412 Kinnigoli 21011413 Kinnigoli 21011414 Kinnigoli 21011415 Kinnigoli 21011416 Kinnigoli 21011417 Kinnigoli 21011418 Kinnigoli 21011419 Kinnigoli 21011420 Kinnigoli 21011421 Kinnigoli 21011422

Comments

comments

Comments are closed.

Read previous post:
ಅಮ್ಮನೆಡೆಗೆ ನಮ್ಮ ನಡೆ

ಮರವೂರು ಸಂದೀಪ್ ಶೆಟ್ಟಿಯವರ ನೇತೃತ್ವದಲ್ಲಿ ಮರವೂರಿನಿಂದ ಕಟೀಲಿನವರೆಗೆ ವಿಶೇಷ ರೀತಿಯ ಅಮ್ಮನಡೆಗೆ ನಮ್ಮ ನಡೆ ಎಂಬ ಪಾದಯಾತ್ರೆಯನ್ನು ನಡೆಸಲಾಯಿತು. ಸಾವಿರಾರು ಭಕ್ತರು ಮಾನಸಿಕ ಶಾಂತಿಗಾಗಿ ಪಾದಯಾತ್ರೆ ಮಾಡಿ...

Close