ಅಬುದಾಬಿ ಭೀಕರ ಅಪಘಾತ-ಮೂಲ್ಕಿ ಮಹಿಳೆ ದಾರುಣ ಸಾವು

ಮೂಲ್ಕಿ : ದುಬೈ ಮತ್ತು ಅಬುದಾಬಿ ಹೈವೇಯಲ್ಲಿ ಮಂಗಳವಾರ ಬೆಳಿಗ್ಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂಲ್ಕಿ ಕೊಳಚಿ ಕಂಬಳದ ಬಬಿತಾ ರೋಹಿತ್(32) ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.
ಮೂಲ್ಕಿಯ ಕೊಳಚಿಕಂಬಳ ನಿವಾಸಿ ರಮೇಶ್ ಕರ್ಕೇರ, ಸುಮತಿ ಕರ್ಕೇರ ದಂಪತಿಯ ಪುತ್ರಿ ಬಬಿತಾ ರೋಹಿತ್‌ರವರು ಪ್ರತಿಷ್ಠಿತ ಆಪಲ್ ಕಂಪನಿಯ ಐಟ್ಯೂನ್ ವಿಭಾಗದಲ್ಲಿ ಹಿರಿಯ ಹುದ್ದೆಯಲ್ಲಿದ್ದು, ಕಂಪನಿಯ ಮೀಟಿಂಗ್‌ಗಾಗಿ ಮಂಗಳವಾರ ಬೆಳಿಗ್ಗೆ ದುಬಾ ಮನೆಯಿಂದ ಸ್ವಯಂ ಡ್ರೈವ್ ಮಾಡಿಕೊಂಡು ಅಬುದಾಬಿಗೆ ತೆರಳಿದ್ದರು.
ಪ್ರಯಾಣದ ಸಂದರ್ಭ ಹಿಂಬದಿಯಿಂದ ಅತೀ ವೇಗದಲ್ಲಿ ಬಂದ ಬೃಹತ್ ಗಾತ್ರದ ಕಾರೊಂದು ಬಬಿತಾರ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಪೆಟ್ರೋಲ್ ಟ್ಯಾಂಕ್ ಸಿಡಿದು ಕಾರಿಗೆ ಬೆಂಕಿ ಹತ್ತಿಕೊಂಡಿತ್ತು. ತೀವ್ರ ಗಾಯಗೊಂಡು ಕಾರೊಳಗಿದ್ದ ಬಬಿತಾರವರು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೆಳಿಗ್ಗೆ ೮ಗಂಟೆಗೆ ಅಪಘಾತ ನಡೆದಿದ್ದು, ಶವಗುರುತು ಪತೆಗೆ ಸ್ಥಳೀಯ ಪೊಲೀಸರು ಸಂಜೆಯವರೆಗೆ ಶ್ರಮಪಟ್ಟಿದ್ದು, ಬಬಿತಾರ ಆಪಲ್ ಐಡಿಯಿಂದ ಗುರುತು ಪತ್ತೆ ಹಚ್ಚಿ ದುಬಾಯಲ್ಲಿದ್ದ ಪತಿ ರೋಹಿತ್‌ಗೆ ಮಾಹಿತಿ ನೀಡಿದ್ದಾರೆ. ಬಬಿತಾರ ಸಹೋದರ ಸುನಿಲ್‌ರವರು ಅಮೇರಿಕಾದಲ್ಲಿದ್ದು, ವಿಷಯ ತಿಳಿದು ದುಬಾಗೆ ಬಂದಿದ್ದಾರೆ.
ಶುಕ್ರವಾರ ಬಬಿತಾರ ಶವ ಮೂಲ್ಕಿಯ ಕೊಳಚಿಕಂಬಳ ಸ್ವಗೃಹ ಸುಮತಿ ನಿವಾಸಕ್ಕೆ ತಂದು ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಪ್ರತಿಭಾವಂತೆಯಾದ ಬಬಿತಾರವರು ಫ್ಯಾಷನ್ ಡಿಸೈನ್, ಸಂಗೀತ ವಿಭಾಗದಲ್ಲಿ ಅದ್ಭುತ ಸಾಧನೆಗೈದು ಪ್ರತಿಷ್ಠಿತ ಆಪಲ್ ಕಂಪನಿಯ ಉನ್ನತ ಹುದ್ದೆಯಲ್ಲಿದ್ದರು. 3 ಘಟನೆಯಿಂದ ಆಘಾತಗೊಂಡಿರುವ ಮೂಲ್ಕಿ ಮನೆಯಲ್ಲಿ ಶೋಕ ಮಡುಗಟ್ಟಿದೆ.
ಬಬಿತಾರಿಗೆ ನೀಲ್(5), ಸಿದ್ಧಾಥ್(4) ಇಬ್ಬರು ಮಕ್ಕಳಿದ್ದಾರೆ.

Kinnigoli 22011409

Comments

comments

Comments are closed.

Read previous post:
ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಮೂಲ್ಕಿ: ಅತಿಕಾರಿಬೆಟ್ಟು ಗ್ರಾಮದ ದೆಪ್ಪುಣಿ ಎಂಬಲ್ಲಿ ಕೊಂಕಣ ರೈಲ್ವೆ ಸೇತುವೆಯ ಕೆಳಗೆ ಒರ್ವ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಮೃತಪಟ್ಟ ಅಪರಿಚಿತ ವ್ಯಕ್ತಿಯ ವಿವರ: ಸುಮಾರು 40...

Close