ಕೆಂಚನಕೆರೆ-ಕೆರೆಕಾಡು ಡಾಮರೀಕರಣದ ಗುದ್ದಲಿ ಪೂಜೆ

ಕಿನ್ನಿಗೋಳಿ: ಕೆಂಚನಕೆರೆ-ಕೆರೆಕಾಡು ರಸ್ತೆಗೆ ಸಂಸದ ನಿಧಿಯಿಂದ 5 ಲಕ್ಷ ರೂ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರ ಅನುದಾನದಿಂದ 4.10ಲಕ್ಷರೂ ವೆಚ್ಚದಲ್ಲಿ ನಡೆಯುವ ಡಾಮರೀಕರಣದ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ಬುಧವಾರ ಕೆರೆಕಾಡು ಸುಖಾನಂದ ಶೆಟ್ಟಿ ಸರ್ಕಲ್ ಬಳಿ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ ನೆರವೇರಿಸಿದರು. ಜಿ. ಪಂ. ಸದಸ್ಯ ಈಶ್ವರ್ ಕಟೀಲ್ , ತಾಲೂಕು ಪಂಚಾಯಿತಿ ಸದಸ್ಯೆ ವನಿತಾ ಯು.ಅಮೀನ್, ಪಡುಪಂಣೂರು ಗ್ರಾ. ಪಂ. ಮಾಜಿ ಅಧ್ಯಕ್ಷ ವಿನೋದ್ ಸಾಲ್ಯಾನ್, ಕಿಲ್ಪಾಡಿ ಗ್ರಾ. ಪಂ. ಉಪಾಧ್ಯಕ್ಷ ಮೋಹನ್ ಕುಬೆವೂರು, ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್, ಗ್ರಾ. ಪಂ. ಸದಸ್ಯೆ ಗೀತಾ ಆಚಾರ್ಯ, ಬಿ.ಜೆ.ಪಿ ಮಂಡಲ ಕ್ಷೇತ್ರ ಅಧ್ಯಕ್ಷ ಸುಚರಿತ ಶೆಟ್ಟಿ , ಪ್ರಧಾನ ಕಾರ್ಯದರ್ಶಿಗಳಾದ ನಾಗರಾಜ್ ಪೂಜಾರಿ, ದೇವಪ್ರಸಾದ ಪುನರೂರು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮಾನಾಥ ಕೋಟ್ಯಾನ್, ಕಸ್ತೂರಿ ಪಂಜ, ಭುವನಾಭಿರಾಮ ಉಡುಪ, ಸುದರ್ಶನ್, ಮಾಧವ ಶೆಟ್ಟಿಗಾರ್, ನಾಗರಾಜ ಭಟ್, ಉಪೇಂದ್ರ ಆಚಾರ್ಯ, ಸದಾಶಿವ ಆಚಾರ್ಯ ಉಪಸ್ಥಿತರಿದ್ದರು.

Kinnigoli 22011407

Comments

comments

Comments are closed.

Read previous post:
ಕಟೀಲು ಚಿಲ್ಲರೆ ವಿತರಿಸುವ ಯಂತ್ರ ಉದ್ಘಾಟನೆ

ಕಿನ್ನಿಗೊಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಆವರಣದಲ್ಲಿ ವಿಜಯ ಬ್ಯಾಂಕ್ ಪ್ರಾಯೋಜಿತ ಚಿಲ್ಲರೆ ವಿತರಿಸುವ ಯಂತ್ರದ ಉದ್ಘಾಟನೆಯನ್ನು ಬುಧವಾರ ಕಟೀಲು ದೇವಳದ ಅರ್ಚಕ ವೆಂಕಟರಮಣ ಆಸ್ರಣ್ಣ ನೆರವೇರಿಸಿದರು. ಈ...

Close