ಗಾಳಿಪಟ ಸ್ಪರ್ಧೆಯಲ್ಲಿ ಜಿಲ್ಲಾ ಪ್ರಶಸ್ತಿ ಪಡೆದ ಚಿಣ್ಣರು

ಮೂಲ್ಕಿ: ತೋಕೂರು ತಪೋವನದ ಡಾ.ಎಂ.ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಇತ್ತೀಚೆಗೆ ಉಡುಪಿಯ ಗುರುಕುಲ ಪಬ್ಲಿಕ್ ವಿದ್ಯಾ ಸಂಸ್ಥೆಯಲ್ಲಿ ನಡೆದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಗಾಳಿಪಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಪರಿಸರ ಸಂರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನೆಯ ಧ್ಯೇಯದೊಂದಿಗೆ ನಡೆದ ಈ ಸ್ಪರ್ಧೆಯಲ್ಲಿ ರಾಮಣ್ಣ ಶೆಟ್ಟಿ ಶಾಲಾ ಪ್ರಾಂಶುಪಾಲರಾದ ಶ್ರೀಲತಾ ರಾವ್ ಹಾಗೂ ಸಹ ಶಿಕ್ಷಕಿ ಸುಧಾ ಹೆಗ್ಡೆಯವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಆಕಾಂಕ್ಷ ಪೈ, ಸ್ವಸ್ತಿಕ್ ಎಸ್.ಶೆಟ್ಟಿ, ಹಾಗೂ ಅಲ್ತಾಝ್‌ರವರು ಗಾಳಿಪಟವನ್ನು ಹಾರಿಸಿದ್ದರು.
ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ಶಾಲೆಗಳು ಭಾಗವಹಿಸಿದ್ದು, ತೋಕೂರು ಶಾಲೆಯ ವಿದ್ಯಾರ್ಥಿಗಳ ಗಾಳಿಪಟದ ಪರಿಕಲ್ಪನೆಯು ವಿಶೇಷ ಪ್ರಶಂಸೆಗೆ ಪಾತ್ರವಾಗಿದ್ದರಿಂದ ಪ್ರಶಸ್ತಿ ಪಡೆಯಲು ಯಶಸ್ಸಾದರು ಎಂದು ಶಿಕ್ಷಕರು ಪ್ರತಿಕ್ರಿಯಿಸಿದ್ದಾರೆ.

Kinnigoli 22011401

Narendra Kerekadu

Comments

comments

Comments are closed.

Read previous post:
ಸೈಂಟ್ ಮೇರಿಸ್ ಸೆಂಟ್ರಲ್ ಶಾಲಾ ಕಟ್ಟಡ ಉದ್ಘಾಟನೆ

ಕಿನ್ನಿಗೋಳಿ : ಶಿಸ್ತು ಹಾಗೂ ಮಾನವೀಯ ಮೌಲ್ಯಗಳ ಉದ್ದೀಪನದೊಂದಿಗೆ ವಿದ್ಯಾರ್ಥಿಗಳನ್ನು ಸಮಾಜದ ಸಭ್ಯ ಹಾಗೂ ಸುಸಂಸ್ಕೃತ ನಾಗರಿಕರನ್ನಾಗಿ ಮಾಡಲು ಶಿಕ್ಷಣ ಸಂಸ್ಥೆಗಳು ಪ್ರೇರಣೆ ನೀಡುತ್ತದೆ ಎಂದು ಫಾ| ಡಾ|...

Close