ಸೋಗೆ ಚಪ್ಪರದಲ್ಲಿರುವ ಕವತ್ತಾರು ಹಾಲಿನ ಸೊಸೈಟಿ.

ಮೂಲ್ಕಿ : ಮೂಲ್ಕಿ ಬಳಿಯ ಕವತ್ತಾರು ಹಾಲಿನ ಸೊಸೈಟಿಯ ಸಂಘದ ಕಚೇರಿಯನ್ನು ಏಕಾಏಕಿ ಗುಡ್ಡೆ ಪ್ರದೇಶದಲ್ಲಿ ಸ್ಥಳಾಂತರಿಸಿದ್ದು ಈಗ ಹೈನುಗಾರರಿಗೆ ತೀವ್ರ ತೊಂದರೆ ಆಗುತ್ತಿದೆ ಎಂದು ಜಿಲ್ಲಾ ಸಹಕಾರ ಸಂಘಗಳ ನಿಬಂಧಕರಿಗೆ ಹೈನುಗಾರರು ದೂರು ನೀಡಿದ್ದಾರೆ.

ಕಳೆದ 10 ವರ್ಷದಿಂದ ಸುಸಜ್ಜಿತ ಖಾಸಗಿ ಕಟ್ಟಡದಲ್ಲಿ ಕವತ್ತಾರು ಹಾಲಿನ ಸೊಸೈಟಿ ಕಾರ್ಯಾಚರಿಸುತ್ತಿದ್ದರಿಂದ ಹೈನುಗಾರರಿಗೆ ಯಾವುದೇ ತೊಂದರೆ ಇರಲಿಲ್ಲ ಬದಲಾಗಿ ಅನುಕೂಲಕರವಾಗಿತ್ತು ಎಂದು ಹೇಳಿರುವ ಹೈನುಗಾರರು ಈ ಏಕಾಏಕಿ ಗುಡ್ಡೆ ಪ್ರದೇಶದಲ್ಲಿ ನಿರ್ಮಿಸಿದ್ದಾರಲ್ಲದೇ ಸೋಗೆ ಚಪ್ಪರದಿಂದ ನಿರ್ಮಿಸಿದ್ದು ಅದರ ಭದ್ರತೆಯ ಪ್ರಶ್ನೆ ಮೂಡಿದೆ ಎನ್ನುತ್ತಾರೆ.

ಈಗ ನಿರ್ಮಿಸಿರುವ ಸೋಗೆ ಚಪ್ಪರದ ಸೊಸೈಟಿಯಲ್ಲಿ ಹೈನುಗಾರರಿಗೆ ಪಶು ಆಹಾರ ಸಿಗುತ್ತಿಲ್ಲ ಅಲ್ಲದೇ ಇದನ್ನು ಕರ್ನಿರೆ ಸೊಸೈಟಿಯಿಂದ ತನ್ನಿ ಎಂದು ಹೇಳುತ್ತಿರುವವರು ವಿನಾ ಕಾರಣ ರಿಕ್ಷಾಗೆ ಹಣ ಖರ್ಚು ಮಾಡಿಕೊಂಡು ಹೈನುಗಾರರಿಗೆ ಸಂಕಷ್ಟ ಉಂಟು ಮಾಡಿದ್ದಾರೆ ಎಂದು ದೂರಿಕೊಂಡಿದ್ದಾರೆ.
ವ್ಯವಸ್ಥಿತ ರೀತಿಯಲ್ಲಿದ್ದ ಸೊಸೈಟಿಯನ್ನು ಸ್ಥಳಾಂತರಿಸುವಾಗ ಹೈನುಗಾರರಲ್ಲಿ ಮುಂಚಿತವಾಗಿಯೂ ತಿಳಿಸಿಲ್ಲ ಅಲ್ಲದೇ ಮುಂದಿನ ಫೆಬ್ರವರಿಯಲ್ಲಿ ಆಡಳಿತ ಮಂಡಳಿಗೆ ಚುನಾವಣೆ ನಡೆಯಲಿದ್ದು ಕಚೇರಿ ಸ್ಥಳಾಂತರಿಸಿ ನೇರವಾಗಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಇದರಲ್ಲಿ ಸೊಸೈಟಿ ಅಧ್ಯಕ್ಷರೊಂದಿಗೆ ಕಾರ್ಯದರ್ಶಿ ಹಾಗೂ ಜಿಲ್ಲಾ ಹಾಲು ಉತ್ಪಾದಕರ ಸಂಘವು ಶಾಮಿಲಾಗಿದ್ದು, ಹಾಲಿನ ಸೊಸೈಟಿಯ ದಾಖಲೆ ಪತ್ರಗಳು, ಕಡತಗಳು ಸಹ ಕಣ್ಮರೆ ಆಗಿದೆ ಎಂದು ಆತಂಕ ವ್ಯಕ್ತಪಡಿಸಿರುವ ಹೈನುಗಾರರು ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Kinnigoli 22011402

Narendra Kerekadu

Comments

comments

Comments are closed.

Read previous post:
ಗಾಳಿಪಟ ಸ್ಪರ್ಧೆಯಲ್ಲಿ ಜಿಲ್ಲಾ ಪ್ರಶಸ್ತಿ ಪಡೆದ ಚಿಣ್ಣರು

ಮೂಲ್ಕಿ: ತೋಕೂರು ತಪೋವನದ ಡಾ.ಎಂ.ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಇತ್ತೀಚೆಗೆ ಉಡುಪಿಯ ಗುರುಕುಲ ಪಬ್ಲಿಕ್ ವಿದ್ಯಾ ಸಂಸ್ಥೆಯಲ್ಲಿ ನಡೆದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ...

Close