ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಮೂಲ್ಕಿ: ಅತಿಕಾರಿಬೆಟ್ಟು ಗ್ರಾಮದ ದೆಪ್ಪುಣಿ ಎಂಬಲ್ಲಿ ಕೊಂಕಣ ರೈಲ್ವೆ ಸೇತುವೆಯ ಕೆಳಗೆ ಒರ್ವ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಮೃತಪಟ್ಟ ಅಪರಿಚಿತ ವ್ಯಕ್ತಿಯ ವಿವರ: ಸುಮಾರು 40 ವರ್ಷ ವಯಸ್ಸಿನ ವ್ಯಕ್ತಿ ,ತಿಳಿ ಹಸಿರು ಬಣ್ಣದ ಗೆರೆಗಳುಳ್ಳ ಉದ್ದ ತೋಳಿನ ಶರ್ಟು, ಬಿಳಿ ಬಣ್ಣದ ಶಾಂಡೋ ಬನಿಯನ್, ಬೂದು ಬಣ್ಣದ ಪ್ಯಾಂಟು, ಕೆಂಪು ಬಣ್ಣದ ಬಕಲ್ ಇರುವ ಹಳದಿ ಬೆಲ್ಟ್, ಕಪ್ಪು ಬಣ್ಣದ ವಿ ಒಳಚಡ್ಡಿ ಧರಿಸಿದ್ದು ಎಣ್ಣೆ ಕಪ್ಪು ಮೈಬಣ್ಣ, ದೃಢಕಾಯ ಶರೀರ, 5.3 ಅಡಿ ಎತ್ತರ , ಬಲ ಎದೆಯ ಬಳಿ ಚಿಕ್ಕ ಎಳ್ಳು ಮಚ್ಚೆ,ಎಡ ಕಂಕುಳ ಕೆಳಗೆ ಚಿಕ್ಕ ಹಳೆಯ ಗಾಯದ ಗುರುತು ಹೊಂದಿದ್ದಾರೆ. ಬಲಕೈಯ 3ನೇ ಬೆರಳಿನಲ್ಲಿ ಕೆಂಪು ಕಲ್ಲಿನ ಬಿಳಿಲೋಹದ ಉಂಗುರ , ಬಲಕೈಯ 4ನೇ ಬೆರಳಿನಲ್ಲಿ ಬಿಳಿಲೋಹದ ಉಂಗುರ, ಬಲಕೈಯ ತೋಳಿನಲ್ಲಿ ಚಿಕ್ಕ ತಾಯತ ಇರುವ ನೂಲು ಇರುವ ವ್ಯಕ್ತಿಯ ಬಗ್ಗೆ ತಿಳಿದವರು ಮೂಲ್ಕಿ ಪೊಲೀಸ್ ಠಾಣೆಗೆ ಅಥವಾ ಪೊಲೀಸ್ ನಿರೀಕ್ಷಕರು ಮುಲ್ಕಿ ಅಥವಾ ಮಂಗಳೂರು ನಗರ ನಿಸ್ತಂತು ಕೊಠಡಿಗೆ ಮಾಹಿತಿ ನೀಡಬೇಕಾಗಿ ವಿನಂತಿ.

ಮುಲ್ಕಿ ಪೊಲೀಸ್ ಠಾಣೆ: 0824-2290533 ಅಥವಾ 9480805332 
ಮಂಗಳೂರು ನಗರ ನಿಸ್ತಂತು ಕೊಠಡಿ 0824-2220800

Kinnigoli 22011408

Narendra Kerekadu

 

Comments

comments

Comments are closed.