ಬಳಕುಂಜೆ: ಲೋ ವೋಲ್ಟೆಜ್ ಸಮಸ್ಯೆ ನೀಗಿಸಿ

ಕಿನ್ನಿಗೋಳಿ: ಬಳ್ಕುಂಜೆ ಗ್ರಾಮ ಪಂಚಾಯಿತಿಗೆ ಒಳಪಟ್ಟ ಕೊಲ್ಲೂರು, ಕವತ್ತಾರು, ಕರ್ನಿರೆ, ಹಾಗೂ ಬಳ್ಕುಂಜೆ ಗ್ರಾಮಗಳ 2013-14ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ಬುಧವಾರ ಸೋಮವಾರ ಬಳ್ಕುಂಜೆ ವಿಠೋಬಾ ರಕುಮಾಯಿ ವಠಾರದಲ್ಲಿ ನಡೆಯಿತು.
ಬೇಸಿಗೆ ಕಾಲ ಬರುವ ಮುನ್ನವೇ ಬಳ್ಕುಂಜೆ ಕೊಲ್ಲೂರು ಪರಿಸರದಲ್ಲಿ ಲೋ ವೋಲ್ಟೆಜ್ ಸಮಸ್ಯೆ ಉಂಟಾಗಿದೆ ದೊಡ್ಡ ಸಾಮಥ್ಯದ ಟಿ. ಸಿ. ಅಳವಡಿಸಿ ಬೇಕು ಎಂದು ಮೆಸ್ಕಾಂ ಅಧಿಕಾರಿ ಹಾಗೂ ಪಂಚಾಯಿತಿ ಆಡಳಿತಕ್ಕೆ ಗ್ರಾಮಸ್ಥರು ನಿವೇದನೆ ಮಾಡಿದರು.
ಬಳ್ಕುಂಜೆ ಗ್ರಾಮ ಪಂಚಾಯಿತಿಯಲ್ಲಿ ಎನ್.ಆರ್.ಇ.ಜಿ ಯೋಜನೆ ಕುಂಠಿತಗೊಂಡಿದೆ ಎನ್ನುವ ಪ್ರಶ್ನೆಗೆ ಗ್ರಾಮಸ್ಥರು ಸರಿಯಾದ ಸ್ಪಂದನ ನೀಡುತ್ತಿಲ್ಲ ಹಾಗಾಗಿ ಯೋಜನೆಗೆ ಯಶಸ್ವಿಯಾಗಿಲ್ಲ ಈಗಾಗಲೆ ಸಕಲ ಮಾಹಿತಿ ನೀಡಲಾಗಿದೆ. ಯೋಜನೆಗೆ ನಮ್ಮ ಪೂರ್ಣ ಸಹಕಾರವಿದೆ ಎಂದು ಅಧ್ಯಕ್ಷ ದಿನೇಶ್ ಪುತ್ರನ್ ಹೇಳಿದರು.
ಬಳಕುಂಜೆ ಪರಿಸರದಲ್ಲಿ ಸರಕಾರ ಐದು ಸೆಂಟ್ಸ್ ಮನೆ ನಿವೇಶನ ನೀಡಿದ್ದು ಈದೀಗ ಮನೆ ಸಹಿತ ನಿವೇಶನ ಮಾರಾಟ ಮಾಡುವ ದಂಧೆ ನಡೆಯುತ್ತಿದೆ ಇದ್ದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದಾಗ, ಕಾನೂನು ಬದ್ಧವಾಗಿ ನಿವೇಶನವನ್ನು ಅವಧಿಗಿಂತ ಮುಂಚೆ ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.
17 ಗ್ರಾಮಗಳಿಗೆ ಕುಡಿಯುವ ನೀರು ಪೊರೈಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಎರಡು ವರ್ಷಗಳು ಕಳೆದರೂ ಪೂರ್ಣವಾಗಿಲ್ಲ. ಕುಕ್ಕಟ್ಟೆ ಪರಿಸರದಲ್ಲಿ ನೀರಿನ ಅಭಾವವಿದೆ ಟ್ಯಾಂಕನ್ನು ನಿರ್ಮಿಸಿ ಎಂದು ಕುಕ್ಕಟ್ಟೆ ಗ್ರಾಮಸ್ಥರು ಅಹವಾಲು ಹೇಳಿಕೊಂಡರು.
ಹಲವಾರು ವರ್ಷಗಳಿಂದ ಡಾಮಾರೀಕರಣಗೊಳ್ಳದ ಬಪ್ಪನಾಡು-ಕುಕ್ಕಟ್ಟೆ -ಏಳಿಂಜೆ ರಸ್ತೆಗೆ 2.50 ಕೋಟಿ ಹಣ ಈಗ ಮಂಜೂರಾಗಿದ್ದು ಈಗಲಾದರೂ ಕಾಮಗಾರಿ ಶೀಘ್ರ ನಡೆಯುವಂತೆ ಪಂಚಾಯಿತಿ ಆಡಳಿತ ಹಾಗೂ ಜನಪ್ರತಿನಿಧಿಗಳು ಪ್ರಯತ್ನಿಸಬೇಕು ಎಂದು ಗ್ರಾಮಸ್ಥರು ವಿನಂತಿಸಿಕೊಂಡರು
ಸಹಾಯಕ ಕೃಷಿ ನಿರ್ದೇಶಕ ಎಂ. ಬಾಲಕೃಷ್ಣ ನೋಡೆಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
ಜಿ. ಪಂ. ಸದಸ್ಯೆ ಆಶಾ ಆರ್ . ಸುವರ್ಣ, ತಾ. ಪಂ. ಸದಸ್ಯ ನೆಲ್ಸನ್ ಲೋಬೋ, ಗ್ರಾ. ಪಂ. ಉಪಾಧ್ಯಕ್ಷೆ ಜಲಜ, ಪಿಡಿಓ ಜಲಜ ಟಿ, ಕಾರ್ಯದರ್ಶಿ ನಾರಾಯಣ, ಗ್ರಾಮಕರಣಿಕ ಕಿರಣ್ ಕುಮಾರ್, ಕೆ. ಸಂತೋಷ್, ಪಂಚಾಯತ್ ರಾಜ್ ಇಂಜೀನಿಯರಿಂಗ್ ವಿಭಾಗದ ಪ್ರಶಾಂತ್ ಆಳ್ವ ಮತ್ತಿತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Kinnigoli 23011402

Comments

comments

Comments are closed.

Read previous post:
ಅಬುದಾಬಿ ಭೀಕರ ಅಪಘಾತ-ಮೂಲ್ಕಿ ಮಹಿಳೆ ದಾರುಣ ಸಾವು

ಮೂಲ್ಕಿ : ದುಬೈ ಮತ್ತು ಅಬುದಾಬಿ ಹೈವೇಯಲ್ಲಿ ಮಂಗಳವಾರ ಬೆಳಿಗ್ಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂಲ್ಕಿ ಕೊಳಚಿ ಕಂಬಳದ ಬಬಿತಾ ರೋಹಿತ್(32) ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ....

Close