ಮೂಲ್ಕಿ: ಬಪ್ಪನಾಡು ಏಕಾದಶ ಭಜನಾ ಸಂಕೀರ್ತನೆ

ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಸೇವಾ ಯುವಕ ವೃಂದದ ಸಂಯೋಜನೆಯಲ್ಲ್ಲಿ ಶ್ರೀ ಕ್ಷೇತ್ರ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಹನ್ನೊಂದು ದಿನಗಳ ಕಾಲ ಅಖಂಡವಾಗಿ ನಡೆಯಲಿರುವ ಏಕಾದಶ ಭಜನಾ ಸಂಕೀರ್ತನೆಯನ್ನು ಗುರುವಾರ ಮುಂಜಾನೆ ಬಪ್ಪನಾಡು ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಶಿಬರೂರು ಗೋಪಾಲ ಕೃಷ್ಣ ತಂತ್ರಿಗಳು ದೀಪ ಬೆಳಗಿಸಿ ಚಾಲನೆ ನೀಡಿದರು ಕ್ಷೇತ್ರದ ಅರ್ಚಕರಾದ ಕೃಷ್ಣದಾಸ್ ಭಟ್, ಶ್ರೀಪತಿ ಉಪಾಧ್ಯಾಯರಿಂದ ಮಹಾ ಪ್ರಾರ್ಥನೆ ಸಲ್ಲಿಸಿದ ಬಳಿಕ ಭಜನೆ ಪ್ರಾರಂಭಗೊಂಡಿತು. ಮೂಲ್ಕಿ ಸೀಮೆ ಅರಸು ಶ್ರೀ ದುಗ್ಗಣ್ಣ ಸಾವಂತರು, ಆಡಳಿತ ಮೊಕ್ತೇಸರ ಎನ್.ಎಸ್.ಮನೋಹರ ಶೆಟ್ಟಿ,ಧರ್ಮದರ್ಶಿ ಹರಿಕೃಷ್ಣ ಪುನರೂರು,ಬೆಂಗಳೂರು ಉದ್ಯಮಿ ನಾರಾಯಣ ಶೆಟ್ಟಿ, ಕಾರ್ನಾಡು ಶ್ರೀ ಕ್ಷೇತ್ರ ಹರಿಹರ ಆಡಳಿತ ಮೊಕ್ತೇಸರ ಯಂ.ಹೆಚ್.ಅರವಿಂದ ಪೂಂಜಾ ಅರಸು ಕಂಬಳ ಸಮಿತಿ ಅಧ್ಯಕ್ಷ ರಾಮಚಂದ್ರ ನಾಯ್ಕ್,ಜೀವನ್ ಶೆಟ್ಟಿ ದೊಡ್ಡಣ್ಣ ಮೊಯ್ಲಿ, ಯಶವಂತ ಎನ್ ಸಾಲಿಯಾನ್, ಬಾರ್ಕೂರು ಶ್ರೀ ಕಚ್ಚೂರುಮಾಲ್ದಿ ದೈವಸ್ಥಾನದ ಗೌರವಾಧ್ಯಕ್ಷರಾದ ಚೆನ್ನಪ್ಪ ಮೂಲ್ಕಿ, ಮೂಲ್ಕಿ ನಪಂ.ಮುಖ್ಯಾಧಿಕಾರಿ ಹರಿಶ್ಚಂದ್ರ.ಪಿ.ಸಾಲ್ಯಾನ್, ಭಗವಾನ್‌ದಾಸ್ ರಾವ್, ಹರೀಶ್ ದೇವಾಡಿಗಾ, ಕಿಶೋರ್ ಶೆಟ್ಟಿ,ನರಸಿಂಹ ಭಟ್,  ಪ್ರೇಮ್.ಬಿ.ಮೂಲ್ಕಿ, ವಿಶ್ವನಾಥ ರಾವ್,ಉಪಸ್ಥಿತರಿದ್ದರು

Kinnigoli 23011405Bhagyawan Sanil

Comments

comments

Comments are closed.

Read previous post:
ಮೂಲ್ಕಿ ಪ.ಪಂ.ಚುನಾವಣೆ ಸ್ವಾರಸ್ಯ

ಮೂಲ್ಕಿ: ನಿಧಾನವಾಗಿ ಮೂಲ್ಕಿಯ ಪಟ್ಟಣ ಪಂಚಾಯಿತಿಯ ಚುನಾವಣ ಕಣವು ಸದ್ದಿಲ್ಲದೆ ರಂಗೇರುತ್ತಿದ್ದು, ಪ್ರಸ್ತುತ ಚುನಾವಣೆಯಲ್ಲಿ ಹಲವಾರು ಸ್ವಾರಸ್ಯಗಳಿದ್ದು ಅದರಲ್ಲಿ ಪ್ರಮುಖವಾಗಿ ವಾರ್ಡ್‌ವೊಂದರಲ್ಲಿ ಒರ್ವನ ಇಬ್ಬರು ಪತ್ನಿಯರೂ ಸಹ ಪರಸ್ಪರ...

Close