ಜ.26ರಂದು ಮಾನವ ಸರಪಳಿ

ಮುಲ್ಕಿ: ಜನವರಿ 26ರಂದು ಸುರತ್ಕಲ್ ಸಮೀಪದ ಕೃಷ್ಣಾಪುರದಲ್ಲಿ ಎಸ್.ಕೆ.ಎಸ್.ಎಸ್.ಎಫ್ ಆಯೋಜಿಸಿರುವ ಮಾನವ ಸರಪಳಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಹಳೆಯಂಗಡಿ ಎಸ್.ಕೆ.ಎಸ್.ಎಸ್.ಎಫ್ ಕರೆ ನೀಡಿದೆ.
1925ರಲ್ಲಿ ಸ್ಥಾಪಿತವಾದ ‘ಸಮಸ್ತ’ ಕೋಮುಸೌಹಾರ್ಧತೆಗಾಗಿ ಅವಿರತ ಪ್ರಯತ್ನಗಳನ್ನು ಮಾಡಿಕೊಂಡುಬಂದಿದ್ದು, ಸಾವಿರಕ್ಕೂ ಹೆಚ್ಚಿನ ಮದರಸಗಳು ಹಾಗೂ ವಿದ್ಯಾರ್ಜನೆಗೈಯುತ್ತಿರುವ ಸುಮಾರು 12 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳಲ್ಲಿ ಕಲಿಕೆಯ ಜೊತೆಗೆ ಕೋಮು ಸೌಹಾರ್ಧಯುತ ಭಾರತ ನಿರ್ಮಾಣದ ಕನಸನ್ನು ಬಿತ್ತುವಲ್ಲಿ ಎಸ್.ಕೆ.ಎಸ್.ಎಸ್.ಎಫ್ ಕಾರ್ಯನಿರತವಾಗಿದೆ.
ಭಾರತದ ಪ್ರಜಾಪ್ರಭುತ್ವ ಕಲ್ಪನೆಯನ್ನು ಪ್ರತಿಬಿಂಬಿಸುವ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಹಸ್ರಾರುಮಂದಿ ಕಾರ್ಯಕರ್ತರು ಹಾಗೂ ಮುಸ್ಲಿಮ್ ಸಹೋದರರು ಸೌಹಾರ್ಧತೆಯಿಂದ ರಾಷ್ಟ್ರ ರಕ್ಷಣೆ ಹಾಗೂ ಸಮಾಜಕಟ್ಟುವ ಪ್ರತಿಜ್ಞೆ ಗೈಯಲಿದ್ದಾರೆ.
ದೇಶದ ರಕ್ಷಣೆ ಸೌಹಾರ್ಧತೆಯಿಂದ ಮಾತ್ರ ಸಾಧ್ಯ ಎಂದು ನಂಬಿಕೊಂಡು ಬಂದಿರುವ ಎಸ್.ಕೆ.ಎಸ್.ಎಸ್.ಎಫ್ ಆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜನವರಿ 26ರಂದು ಕೃಷ್ಣಾಪುರದ ಫಿಝ ಮೈದಾನದಲ್ಲಿ ಬೃಹತ್ ಮಾನವ ಸರಪಳಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಹಳೆಯಂಗಡಿ ಎಸ್.ಕೆ.ಎಸ್.ಎಸ್.ಎಫ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.

Abdul Rahman Haleangadi

 

Comments

comments

Comments are closed.

Read previous post:
ನಿಡ್ಡೋಡಿ ಪಟ್ಲ ಸತೀಶ ಶೆಟ್ಟಿ ಸನ್ಮಾನ

ಕಿನ್ನಿಗೋಳಿ: ನಿಡ್ಡೋಡಿ ಗುಂಡಿಬೈಲು ಸ್ವರ್ಣ ನಿವಾಸ ವಿದ್ಯಾಧರ ಎಸ್. ಸುವರ್ಣ ಅವರ ಮನೆಯಲ್ಲಿ ನಡೆದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಹರಕೆಯ ಯಕ್ಷಗಾನ ಬಯಲಾಟ ಜರಗಿದ...

Close