ದುಶ್ಚಟಗಳ ಕುರಿತು ಅರಿವು ಕಾರ್ಯಕ್ರಮ

 ಕಿನ್ನಿಗೋಳಿ : ಐಕಳ ಪೊಂಪೈ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ, ರೆಡ್ ರಿಬ್ಬನ್ ಕ್ಲಬ್, ಯೂತ್ ರೆಡ್ ಕ್ರಾಸ್ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಯುವ ಜನತೆಯ ಮೇಲೆ ದುಶ್ಚಟಗಳ ಪರಿಣಾಮಗಳು ವಿಷಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಕಾಲೇಜಿನ ಸಭಾಭವನದಲ್ಲಿ ನಡೆಯಿತು.
ಸಂಜೀವಿನಿ ಘಟಕದ ಲಲಿತಾ ಭಾಸ್ಕರ್ ಮತ್ತು ಭಗಿನಿ ಫ್ಲೋಸಿ ಮಿನೇಜಸ್ ಹಾಗೂ ವಿಕ್ಟರ್ ಪಾಯಸ್ ಪದ್ಮನೂರು ಅವರು ಸಂಪನ್ಮೂಲ ವ್ಯಕಿಗಳಾಗಿ ಮಾಹಿತಿ ನೀಡಿದರು. ಕನ್ಸೆಟ್ಟಾ ಆಸ್ಪತ್ರೆಯ ದಾದಿಯರು ಪ್ರಹಸನ ಪ್ರಸ್ತುತ ಪಡಿಸಿದರು.
ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ಗುಣಕರ್ ಎಸ್., ಉಪನ್ಯಾಸಕ ಪ್ರೊ. ಯೋಗಿಂದ್ರ ಬಿ, ಉಪಸ್ಥಿತರಿದ್ದರು.
ಅಶ್ವಿತಾ ಕಾರ್ಯಕ್ರಮವನ್ನು ನಿರೂಪಿಸಿ. ಸಚಿನ್ ವಂದಿಸಿದರು.

Kinnigoli 24Kinni24011401

Comments

comments

Comments are closed.