ಪಡುಪಂಣಂಬೂರಿನಲ್ಲಿ ಬಸ್ ಸ್ಟಾಂಡ್ ರಾಜಕೀಯ?

ಹಳೆಯಂಗಡಿ : ಪಡುಪಣಂಬೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಿಜೆಪಿ ಬಣಗಳ ರಾಜಕೀಯ ಬಿರುಸಾಗಿದ್ದು ಮತ್ತೆ ಅಧಿಕಾರಿ ಬಣ ಹುಟ್ಟಿಕೊಂಡಿದ್ದು ಎರಡು ಬಣಗಳ ಎರಡು ಬಸ್ಸು ತಂಗುದಾಣ ಎರಡು ದಿನದಲ್ಲಿ ಉದ್ಘಾಟನೆಗೊಂಡಿದೆ.ಒಂದು ಬಿಜೆಪಿ ಬಣದ ತಂಗುದಾಣ ಪಡುಪಣಂಬೂರು ರಾಷ್ಟ್ರೀಯ ಹೆದ್ದಾರಿ ಬಳಿ ಸಂಸದ ನಳಿನ್ ರವರಿಂದ ಉದ್ಘಾಟನೆಗೊಂಡಿದ್ದು ಇದರಲ್ಲಿ ಪಂಚಾಯತ್ ಮಾಜೀ ಅಧ್ಯಕ್ಷ ವಿನೋದ ಸಾಲ್ಯಾನ್ ಗುರುತಿಸಿಕೊಂಡಿದ್ದಾರೆ. ಇವರ ಬದ್ದ ರಾಜಕೀಯ ವೈರಿಗಳೆ ಅಗಿರುವವರು ಸೇರಿಕೊಂಡು ಮೊದಲಿನಿಂದಲೂ ಅಧಿಕಾರಿ ಬಣದಲ್ಲಿ ಗುರುತಿಸಿಕೊಂಡಿರುವ ಪಂಚಾಯತ್ ಉಪಾಧ್ಯಕ್ಷೆ ಮತ್ತಿತರರು ಸೇರಿಕೊಂಡು ಶನಿವಾರ ಸಂಜೆ ಪಡುಪಣಂಬೂರು -ಕೋಲ್ನಾಡು ಚಂದ್ರಮೌಳೀಶ್ವರ ದೇಚಸ್ಥಾನದ ಬಳಿ ಇತ್ತೀಚೆಗೆ ಅಸೌಖ್ಯದಿಂದ ನಿಧನರಾದ ಬಿಜೆಪಿಯ ಪವನ್ ಶೆಣೈ ಸ್ಮಾರಕ ತಂಗುದಾಣ ಮಾಜಿ ಸಚಿವ ಕೃಷ್ಣ ಪಾಲೇಮಾರ್ ಉದ್ಘಾಟಿಸುತ್ತಿದ್ದಾರೆ. ಇದಕ್ಕೆ ಮಾಜಿ ಅಧ್ಯಕ್ಷ ವಿನೋದ್ ಸಾಲ್ಯಾನ್ ಅಮಂತ್ರಣ ಪತ್ರಿಕೆಯಿಂದ ಹೆಸರು ಕೈಬಿಡಲಾಗಿದ್ದು ಅಧಿಕಾರಿ ಬಣದ ಎಲ್ಲರೂ ಗುರುತಿಸಿಕೊಂಡಿದ್ದಾರೆ.ಆದರೆ ವಿಚಿತ್ರವೆಂದರೆ ಇತ್ತೀಚೆಗೆ ರಾಜಕೀಯದಿಂದ ದೂರವಿದ್ದು ಕಣ್ಮರೆಯಾಗಿದ್ದ ಸತೀಶ ಭಟ್ಟರು ಅಧಿಕಾರಿ ಬಣದ ಆಮಂತ್ರಣ ಪತ್ರಿಕೆಯಲ್ಲಿ ಗುರುತಿಸಿಕೊಂಡದ್ದು ವಿಶೇಷವಾಗಿದೆ.

Comments

comments

Comments are closed.

Read previous post:
ಹಳೆಯಂಗಡಿ ಪಂಚಾಯತ್ ಸಭೆಯಲ್ಲಿ ಭುಗಿಲೆದ್ದ ಆಕ್ರೋಶ

ಮೂಲ್ಕಿ: ಹಳೆಯಂಗಡಿ ಗ್ರಾಮ ಪಂಚಾಯತ್ ಸಭೆಯಲ್ಲಿ ಮೂಲ್ಕಿ ಮೆಸ್ಕಾಂ ಅಧಿಕಾರಿ ಶ್ರೀಧರ ವಿರುದ್ದ ಗ್ರಾಮಸ್ತರು ಸಹಿತ ಪಂಚಾಯತ್ ಸದಸ್ಯರು ಪಕ್ಷಬೇಧ ಮರೆತು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಿನ್ನೆ...

Close