ಸೋಮಪ್ಪ ಸುವರ್ಣ ಸಂಸ್ಮರಣೆ, ಪ್ರಶಸ್ತಿ ಪ್ರಧಾನ

ಕಿನ್ನಿಗೋಳಿ: ಹಿರಿಯ ಸಮಾಜ ಸೇವಕ, ಮುಲ್ಕಿ ಮೂಡಬಿದ್ರೆ ಮಾಜಿ ಶಾಸಕ ಕೆ. ಸೋಮಪ್ಪ ಸುವರ್ಣ ಅವರ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಮಂಗಳವಾರ ಜನವರಿ 28ರಂದು ಕಿನ್ನಿಗೋಳಿ ತಾಳಿಪಾಡಿ ಬಿಲ್ಲವ ಸಂಘದಲ್ಲಿ ಜರಗಲಿದೆ ಎಂದು ಸಮಿತಿಯ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು ಶುಕ್ರವಾರ ಕಿನ್ನಿಗೋಳಿಯಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಶಿಕ್ಷಣ ತಜ್ಞ ಕೆ. ಸೋಮಪ್ಪ ಸುವರ್ಣ ಅವರ ಸ್ಮರಣಾರ್ಥ ಗುತ್ತಕಾಡು ಬಗ್ಗಲ್ ತೋಟ ತಾಳಿಪಾಡಿಯಲ್ಲಿ ನಿರ್ಮಿಸಲಿರುವ ಶ್ರೀ ನಾರಾಯಣ ಗುರು ನರ್ಸರಿ ಶಾಲಾ ಕಟ್ಟಡದ ಶಿಲಾನ್ಯಾಸವನ್ನು ಬೆಳಿಗ್ಗೆ ಯುವಜನ ಕ್ರೀಡೆ ಮತ್ತು ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್ ನೆರವೇರಿಸಲಿರುವರು.
ಸಂಜೆ ಬಿಲ್ಲವ ಸಂಘ ತಾಳಿಪಾಡಿಯಲ್ಲಿ ನಡೆಯುವ ಸಂಸ್ಮರಣಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಹಿರಿಯ ಪ್ರಗತಿ ಪರ ಕೃಷಿಕ ಪಾವುಸ್ತಿನ್ ಸಿಕ್ವೇರಾ, ಸಮಾಜ ಸೇವಕ ಎಕ್ಕಾರು ಮೋನಪ್ಪ ಶೆಟ್ಟಿ ಹಾಗೂ ನಿವೃತ್ತ ಶಿಕ್ಷಕ ಅಡ್ವೆ ರವೀಂದ್ರ ಪೂಜಾರಿ ಅವರನ್ನು ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಕಾರ್ಯಕ್ರಮದಲ್ಲಿ ಸಚಿವ ಕೆ. ಅಭಯಚಂದ್ರ ಜೈನ್, ಸುರತ್ಕಲ್ ಶ್ರೀ ಗುರು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸದಾನಂದ ಸುವರ್ಣ, ಚಲನ ಚಿತ್ರ ನಿರ್ಮಾಪಕ-ನಿರ್ದೇಶಕ ರಾಜ್‌ಶೇಖರ ಕೋಟ್ಯಾನ್ ಮತ್ತಿತರರು ಭಾಗವಹಿಸಲಿರುವರು.
ಸುದ್ದಿಗೋಷ್ಟಿಯಲ್ಲಿ ಎಪಿಎಂಸಿ ಸದಸ್ಯ ಪ್ರಮೋದ್ ಕುಮಾರ್, ಚಂದ್ರಶೇಖರ ಸುವರ್ಣ, ವೈ. ಎನ್. ಸಾಲ್ಯಾನ್ ಉಪಸ್ಥಿತರಿದ್ದರು.

Comments

comments

Comments are closed.

Read previous post:
ಪಡುಪಂಣಂಬೂರಿನಲ್ಲಿ ಬಸ್ ಸ್ಟಾಂಡ್ ರಾಜಕೀಯ?

ಹಳೆಯಂಗಡಿ : ಪಡುಪಣಂಬೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಿಜೆಪಿ ಬಣಗಳ ರಾಜಕೀಯ ಬಿರುಸಾಗಿದ್ದು ಮತ್ತೆ ಅಧಿಕಾರಿ ಬಣ ಹುಟ್ಟಿಕೊಂಡಿದ್ದು ಎರಡು ಬಣಗಳ ಎರಡು ಬಸ್ಸು ತಂಗುದಾಣ ಎರಡು ದಿನದಲ್ಲಿ...

Close