ಹಳೆಯಂಗಡಿ ಪಂಚಾಯತ್ ಸಭೆಯಲ್ಲಿ ಭುಗಿಲೆದ್ದ ಆಕ್ರೋಶ

ಮೂಲ್ಕಿ: ಹಳೆಯಂಗಡಿ ಗ್ರಾಮ ಪಂಚಾಯತ್ ಸಭೆಯಲ್ಲಿ ಮೂಲ್ಕಿ ಮೆಸ್ಕಾಂ ಅಧಿಕಾರಿ ಶ್ರೀಧರ ವಿರುದ್ದ ಗ್ರಾಮಸ್ತರು ಸಹಿತ ಪಂಚಾಯತ್ ಸದಸ್ಯರು ಪಕ್ಷಬೇಧ ಮರೆತು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಿನ್ನೆ ಪಂಚಾಯತ್ ಸಭೆಯಲ್ಲಿ ನಡೆದಿದೆ. ಸಭೆಯಲ್ಲಿ ಮೆಸ್ಕಾಂ ಆಧಿಕಾರಿ ಮಾತನಾಡಲು ಮುಂದಾಗುತ್ತಿದ್ದಂತೆ ಆಡಳಿತ ಪಂಚಾಯತ್ ಸದಸ್ಯರೇ ಆದ ಉಪಾಧ್ಯಕ್ಷ ಅಬ್ದುಲ್ ರಜಾಕ್ ಮತ್ತು ವಸಂತ ಬೆರ್ನಾಡ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಪಂಚಾಯತ್ ವ್ಯಾಪ್ತಿಯ ಇಂದಿರಾನಗರದಲ್ಲಿ ರಾತ್ರಿ ಹೊತ್ತು ಅಘೋಷಿತ ವಿದ್ಯುತ್ ಕಡಿತಗೊಳ್ಳುತ್ತಿದ್ದು ಇದನ್ನು ಪ್ರಶ್ನಿಸಿದರೆ ದೂರವಾಣಿಯಲ್ಲಿ ಉಢಾಫೆ ಉತ್ತರ ಕೊಡುತ್ತಿದ್ದಾರೆ,ಪಂಚಾಯತ್ ಸದಸ್ಯರಿಗೇ ಬೆಲೆ ಕೊಡದಿದ್ದರೆ ಜನಸಾಮಾನ್ಯರ ಪಾಡೇನು,ಖಾಸಗಿ ಗುತ್ತಿಗೆದಾರರ ಲಂಚಕ್ಕೆ ಬಾಯಿ ಬಿಟ್ಟು ಕೆಲಸ ಮಾಡುತ್ತಿದ್ದಾರೆಂದು ಅಬ್ದುಲ್ ರಜಾಕ್ ಗಂಭೀರ ಆರೋಪ ಮಾಡಿದರು.ಈ ಬಗ್ಗೆ ಸಚಿವರಿಗೂ ದೂರು ಕೊಟ್ಟಿದ್ದೇವೆ ಕೂಡಲೇ ಅವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದರು. ಇದಕ್ಕೆ ಸಭೆಯೇ ಬೆಂಬಲಕ್ಕೆ ನಿಂತು ಮೆಸ್ಕಾಂ ಸಿಬ್ಬಂದಿ ವಿರುದ್ದ ಆರೋಪಗಳ ಸುರಿಮಳೆಗೈಯುತ್ತಿರುವ ಸಮಯದಲ್ಲಿ ಮದ್ಯಪ್ರವೇಶಿಸಿದ ನೋಡಲ್ ಅಧಿಕಾರಿ ಸಿ.ಲೋಕೇಶ ಪರೀಸ್ಥಿತಿಯನ್ನು ಹತೋಟಿಗೆ ತಂದು ಮೆಸ್ಕಾಂ ಅಧಿಕಾರಿಗೆ ಉತ್ತರ ಕೊಡಲು ಸೂಚಿಸಿದಾಗ ಮೆಸ್ಕಾಂ ಅಧಿಕಾರಿ ಹಳೆ ರಾಗವನ್ನೇ ಎಳೆದು ಸಿಬ್ಬಂದಿ ಕೊರತೆ, ರಾತ್ರಿ 9ರಿಂದ 10 ಗಂಟೆಯವರೆಗೆ ಮೂಲ್ಕಿ ಕಿನ್ನಿಗೋಳಿ ಪರಿಸರದಲ್ಲಿ ಸರ್ವೀಸು ಸ್ಟೇಷನ್ ಇಲ್ಲ ಎಂದು ಹೇಳಿದರು.
ಪಂಚಾಯತ್ ವ್ಯಾಪ್ತಿಯಲ್ಲಿ ನೀರು ಸರಿಯಾಗಿ ಬರುತ್ತಿಲ್ಲ,ಬಂದರೂ ಯಾವ ಗಳಿಗೆಯಲ್ಲಿ ಬರುತ್ತದೆ ಎಂದು ಗೊತ್ತಾಗುತ್ತಿಲ್ಲ,ಮಣ್ಣು ಮಿಶ್ರಿತ ನೀರು ಬರುತ್ತಿದೆ ಎಂದು ಮಹಿಳೆಯೊಬ್ಬರು ನೀರು ಸರಬರಾಜು ಸಮಿತಿಯ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು. ಕದಿಕೆ ಎಂಬಲ್ಲಿ ರಸ್ತೆ ವಿವಾದ ಹಾಗೇಯೇ ಇದೆ ಅಲ್ಲಿ ರಸ್ತೆ ಮಾಡಲು ಪಂಚಾಯತ್ ಅಧ್ಯಕ್ಷರು ಬಿಡದೆ ಸ್ವಜನ ಪಕ್ಷಪಾತ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರೊಬ್ಬರು ಆರೋಪಿಸಿದರು.ಪಂಚಾಯತ್ ವ್ಯಾಪ್ತಿಯ ಕೆಲವು ಕಡೆ ವಾರ್ಡು ಸಭೆ ರದ್ದುಗೊಳಿಸಿದ ಕ್ರಮಕ್ಕೆ ಪಂಚಾಯತ್ ಅಭಿವೃದ್ದಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ರದ್ದುಗೊಳಿಸಿದ್ದಕ್ಕೆ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದರು.ಅದಕ್ಕೆ ಉತ್ತರಿಸಿದ ಪಿಡಿಒ ಸಭೆಗೆ ಜನರೇ ಇಲ್ಲದ್ದಕ್ಕೆ ರದ್ದುಗೊಳಿಸಲಾಯಿತು ಎಂದಾಗ ಇಂದಿನ ಸಭೆಯಲ್ಲೂ ಕೇವಲ ಇಪ್ಪತ್ತು ಗ್ರಾಮಸ್ಥರೇ ಇರುವುದು ಕೂಡಲೇ ಸಭೆ ರದ್ದುಗೊಳಿಸಿ ಎಂದು ಒತ್ತಾಯಿಸಿದರು.ಗ್ರಾಮಸಭೆ ಬಗ್ಗೆ ಗ್ರಾಮಸ್ಥರಿಗೆ ತಿಳಿಸದಿರುವುದಕ್ಕೆ ಗ್ರಾಮಸ್ಥರೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸಭೆ ಸರಿಯಾದ ಸಮಯಕ್ಕೆ ಆರಂಭವಾಗದೇ ಇದ್ದದ್ದಕ್ಕೆ ಮೊದಲಿಗೆ ನೋಡಲ್ ಅಧಿಕಾರಿಯೊಡನೆ ಗ್ರಾಮಸ್ತರ ಮಾತಿನ ಚಕಮಕಿಯೂ ನಡೆಯಿತು.(ಚಿತ್ರ ಇದೆ ಮೆಸ್ಕಾಂ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ಗ್ರಾಮಸ್ತರು.

Kinnigoli 25011407Kinnigoli 25011408

Comments

comments

Comments are closed.

Read previous post:
001
Republic Day Wishes

      Republic Day Wishes

Close