ಆರೋಗ್ಯದ ಹಿತ ಕಾಪಾಡಲು ನಿಯಮಿತ ಆಹಾರ ಮುಖ್ಯ

ಕಿನ್ನಿಗೋಳಿ : ರಾಸಾಯನಿಕಯುಕ್ತ ಆಹಾರ ಪದ್ಧತಿಯಿಂದ ಆರೋಗ್ಯ ಬೇಗನೆ ಹದಗೆಡುತ್ತದೆ ಆದಷ್ಟು ಸಾವಯವ ವ್ಯವಸಾಯದ ತರಕಾರಿ ಬೆಳೆಗಳನ್ನು ಬಳಸುವುದರಿಂದ ನಿಯಮಿತ ಆಹಾರ ಸೇವನೆಯಿಂದ ಆರೋಗ್ಯದ ಹಿತ ಕಾಪಾಡಬಹುದು ಎಂದು ಪೊಂಪೈ ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ಫಾ| ಜೊರೆಮ್ ಡಿಸೋಜ ಹೇಳಿದರು.
ಕೊಲ್ಲೂರು ಸರಕಾರಿ ಆಯುರ್ವೇದ ಆಸ್ಪತ್ರೆ ಹಾಗೂ ಮೂಡಬಿದಿರೆಯ ಆಳ್ವಾಸ್ ಪ್ರಕೃತಿ ಮತ್ತು ಯೋಗ ವಿಜ್ಞಾನ ಸಂಸ್ಥೆ ಹಾಗೂ ಬಳ್ಕುಂಜೆ ಸಂತ ಪೌಲರ ಚರ್ಚ್ ಶತಮಾನೋತ್ಸವದ ಅಂಗವಾಗಿ ಭಾನುವಾರ ಬಳ್ಕುಂಜೆ ಸಂತ ಪೌಲ್‌ರ ಚರ್ಚ್ ಸಭಾ ಭವನದಲ್ಲಿ ನಡೆಯುತ್ತಿರುವ ೧೦ ದಿನಗಳ ಪ್ರಕೃತಿ ಮತ್ತು ಯೋಗ ಶಿಬಿರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಬಳ್ಕಂಜೆ ಚರ್ಚ್ ಧರ್ಮಗುರು ಫಾ| ಮೈಕಲ್ ಡಿಸಿಲ್ವಾ ಅಧ್ಯಕ್ಷತೆ ವಹಿಸಿದ್ದರು.
ಮೂಡಬಿದಿರೆ ಆಳ್ವಾಸ್ ಶಿಕ್ಷಣ ಕಾಲೇಜು ಉಪ ಆಡಳಿತಾಧಿಕಾರಿ ಎನ್. ಆರ್.ಬಲ್ಲಾಳ್, ಡಾ| ಬಿನು, ಅಂಚನ್ ಆಯುರ್ವೇದ ಸಂಸ್ಥೆ ನಿರ್ದೇಶಕ ಡಾ| ಎನ್. ಟಿ. ಅಂಚನ್, ಡಾ| ಮನೋಜ್ ಕುಮಾರ್ ಶೆಟ್ಟಿ, ಕೊಲ್ಲೂರು ಆಸ್ಪತ್ರೆ ವೈದ್ಯಾಧಿಕಾರಿ ಡಾ| ಮುರಳೀಧರ್, ಬಳ್ಕುಂಜೆ ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ ಫ್ರೆಡಿಕ್ ಪಿಂಟೋ, ಬಳ್ಕುಂಜೆ ಸಂತ ಪೌಲರ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಭಗಿನಿ ಲೊಲಿಟಾ, ಪ್ರೌಢ ಶಾಲಾ ಶಿಕ್ಷಕ ಪಿ. ಆರ್. ನಾಯಕ್, ಪ್ರೊವಿಡೆನ್ಸ್ ಕಾನ್ವೆಂಟ್ ಸುಪೀರಿಯರ್ ಭಗಿನಿ ನಾತಾಲಿಯಾ, ಬಳ್ಕುಂಜೆ ಐಸಿವೈಎಮ್ ಅಧ್ಯಕ್ಷೆ ವೆನ್ಸಿಟಾ ಡಿಸೋಜ, ಸಂಘಟಕ ಮೈಕಲ್ ರೊಡ್ರಿಗಸ್ ಉಪಸ್ಥಿತರಿದ್ದರು.
ಶಿಬಿರಾರ್ಥಿಗಳಾದ ಪ್ರಜ್ಞಾ , ಆನಂದ, ಸುಶ್ಮಿತಾ, ಅನಿತಾ ಡಿಸೋಜ, ಪ್ರೀಡಾ ರೋಡ್ರಿಗಸ್ ಅನಿಸಿಕೆ ತಿಳಿಸಿದರು.

Kinnigoli 27011416

Comments

comments

Comments are closed.

Read previous post:
ಗುಣಮಟ್ಟದ ಸೇವೆಯಿಂದ ಉದ್ಯಮ ಯಶಸ್ಸು ಗಳಿಸುತ್ತದೆ.

ಕಿನ್ನಿಗೋಳಿ : ಸಾರ್ವಜನಿಕರಿಗೆ ಗುಣಮಟ್ಟದ ಸೇವೆ ನೀಡಿದಾಗ ಉದ್ಯಮದಲ್ಲಿ ಯಶಸ್ಸು ಸಿಗುತ್ತದೆ ಎಂದು ಯುವಜನ ಸೇವೆ ಮತ್ತು ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು. ಕೆನರಾ ಬಸ್ಸು...

Close