ಗುಣಮಟ್ಟದ ಸೇವೆಯಿಂದ ಉದ್ಯಮ ಯಶಸ್ಸು ಗಳಿಸುತ್ತದೆ.

ಕಿನ್ನಿಗೋಳಿ : ಸಾರ್ವಜನಿಕರಿಗೆ ಗುಣಮಟ್ಟದ ಸೇವೆ ನೀಡಿದಾಗ ಉದ್ಯಮದಲ್ಲಿ ಯಶಸ್ಸು ಸಿಗುತ್ತದೆ ಎಂದು ಯುವಜನ ಸೇವೆ ಮತ್ತು ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು.
ಕೆನರಾ ಬಸ್ಸು ಮಾಲಕರ ಸಂಘ ಮಂಗಳೂರು, ಕಿನ್ನಿಗೋಳಿ ವಲಯ ಬಸ್ಸು ಮಾಲಕರ ಸಂಘ, ಸಾರಿಗೆ ಇಲಾಖೆ ಮತ್ತು ಪೋಲಿಸ್ ಇಲಾಖೆ ಇದರ ಜಂಟೀ ಸಹಯೋಗದಲ್ಲಿ ಕಿನ್ನಿಗೋಳಿ ಅನುಗ್ರಹ ಸಭಾಗೃಹದಲ್ಲಿ ನಡೆದ ಕಿನ್ನಿಗೋಳಿ ವಲಯ ಬಸ್ಸು ಮಾಲಕರ ಸಂಘ ಇದರ ನೂತನ ಪದಾಧಿಕಾರಿಗಳ ಪದಗ್ರಹಣ, ಕಿನ್ನಿಗೋಳಿ ಕಂಬೈನ್ಡ್ ಟ್ರಾವಲ್ಸ್ ಹಾಗೂ 25ನೇ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹ 2014ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಮುಲ್ಕಿ ಮೂಡಬಿದ್ರೆ ಕ್ಷೇತ್ರದ 35 ಕೋಟಿ ರೂ. ವೆಚ್ಚದಲ್ಲಿ ಹೆಚ್ಚಿನ ಲೋಕೋಪಯೋಗಿ ಇಲಾಖೆಯ ರಸ್ತೆಗಳಿಗೆ ಡಾಮರೀಕರಣ ಮಾಡಲಾಗುವುದು. ಸುಮಾರು 6 ಕೋಟಿ ರೂ ವೆಚ್ಚದಲ್ಲಿ ಕರಾವಳಿಯ ಮೀನುಗಾರಿಕಾ ಕೊಂಡಿ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭ ಬಸ್ ಮಾಲಕರಾದ ಮಾಧವ ನಾಯಕ್, ಜಗದೀಶ ಶೆಟ್ಟಿ, ಇಬ್ರಾಹಿಂ ಹಾಗೂ ಹಿರಿಯ ಚಾಲಕ ನಿರ್ವಾಹಕರಾದ ಸುಧಾಕರ ಶೆಟ್ಟಿ, ಗಿರಿಯಪ್ಪ ಗೌಡ, ನಾಗೇಶ್, ಸಂತೋಷ್ ಶೆಟ್ಟಿ , ಶ್ರೀಧರ ಶೆಟ್ಟಿ ಅತ್ತೂರು ಅವರನ್ನು ಸನ್ಮಾನಿಸಲಾಯಿತು.
ಕೆನೆರಾ ಬಸ್ಸು ಮಾಲಕರ ಸಂಘ ಅಧ್ಯಕ್ಷ ರಾಜವರ್ಮ ಬಲ್ಲಾಳ್, ಸಹಾಯಕ ಪೋಲಿಸ್ ಆಯುಕ್ತ ರವಿಕುಮಾರ್ ಎಸ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಅಫ್ಜಲ್ ಅಹ್ಮದ್ ಖಾನ್, ಟ್ರಾಫಿಕ್ ಪೋಲೀಸ್ ಇನ್ಸ್‌ಪೆಕ್ಟರ್ ಜಿ. ಪಿ. ಭಟ್, ಉದ್ಯಮಿ ಸಂತೋಷ್ ಕುಮಾರ್ ಹೆಗ್ಡೆ , ಕಿನ್ನಿಗೋಳಿ ವಲಯ ಬಸ್ಸು ಚಾಲಕ-ನಿರ್ವಾಹಕರ ಸಂಘ ಗೌರವಾಧ್ಯಕ್ಷ ಭುವನಾಭಿರಾಮ ಉಡುಪ, ಅಧ್ಯಕ್ಷ ಭಾಸ್ಕರ ಅಮೀನ್, ಬಸ್ಸು ಮಾಲಕರ ಸಂಘದ ಗೌರವ ಸಲಹೆಗಾರರಾದ ಅಬ್ದುಲ್ ಲತೀಫ್, ನಾರಾಯಣ ಪಿ. ಎಂ., ಉಪಾಧ್ಯಕ್ಷರಾದ ಪರ್ಸಿ ಪಿಂಟೋ, ಭುವನೇಶ್, ಶಶಿ ಅಮೀನ್, ಉಮೇಶ್ ಕೋಟ್ಯಾನ್, ಪ್ರಕಾಶ್ ಹೆಗ್ದೆ , ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು. ಕಿನ್ನಿಗೋಳಿ ವಲಯ ಬಸ್ಸು ಮಾಲಕರ ಸಂಘ ಅಧ್ಯಕ್ಷ ದುರ್ಗಾಪ್ರಸಾದ್ ಹೆಗ್ಡೆ ಸ್ವಾಗತಿಸಿದರು. ನಾರ್ಬಟ್ ಡಿಸೋಜ ಮತ್ತು ನೀಲಯ್ಯ ಕೋಟ್ಯಾನ್ ಸನ್ಮಾನ ಪತ್ರ ವಾಚಿಸಿದರು. ಕಾರ್ಯದರ್ಶಿ ಸ್ವರಾಜ್ ಶೆಟ್ಟಿ ವಾರ್ಷಿಕ ವರದಿ ಮಂಡಿಸಿದರು. ಸಾಯಿನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli 27011410 Kinnigoli 27011411 Kinnigoli 27011412 Kinnigoli 27011413 Kinnigoli 27011414 Kinnigoli 27011415

Comments

comments

Comments are closed.

Read previous post:
OLYMPUS DIGITAL CAMERA
ಮೂಲ್ಕಿ ಗಾಂಧಿ ಮೈದಾನ : 65ನೇ ಗಣರಾಜ್ಯೋತ್ಸವ

ಮೂಲ್ಕಿ: 65ನೇ ಗಣರಾಜ್ಯೋತ್ಸವದ ಪ್ರಯುಕ್ತ ಮೂಲ್ಕಿ ಗಾಂಧಿ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಮೂಲ್ಕಿ ವಿಶೇಷ ತಹಶೀಲ್ದಾರ್ ರವಿಚಂದ್ರ ನಾಯಕ್ ಧ್ವಜಾರೋಹಣಗೈದು ಪೋಲೀಸ್, ಗ್ರಹರಕ್ಷಕದಳ, ಎನ್‌ಸಿ.ಸಿ.,ರಾಷ್ಟ್ರೀಯ ಸೇವಾಯೋಜನೆ, ಸ್ಕೌಟ್...

Close