ಸಂಸ್ಥೆಗಳು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು

ಕಿನ್ನಿಗೋಳಿ: ಗ್ರಾಮೀಣ ಮಟ್ಟದಲ್ಲಿ ಸಂಘ ಸಂಸ್ಥೆಗಳು ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಕೊಡೆತ್ತೂರು ಅರಸು ಕುಂಜಿರಾಯ ದೈವಸ್ಥಾನ ಅರ್ಚಕ ಜಯರಾಮ ಮುಕ್ಕಾಲ್ದಿ ಹೇಳಿದರು.
ಶನಿವಾರ ಕಿನ್ನಿಗೋಳಿಯ ಕೊಡೆತ್ತೂರು ಆದರ್ಶ ಬಳಗದ ವಾರ್ಷಿಕೋತ್ಸವ ಹಾಗೂ ಶ್ರೀ ಕೋರ‍್ದಬ್ಬು ದೈವದ ವಾರ್ಷಿಕ ನೇಮದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು.
ಕಡಂದಲೆಯ ಸಹಾಯಕ ಪಶು ವೈದ್ಯ ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು. ಕೆ.ವಿ. ಶೆಟ್ಟಿ ದೇವಸ್ಯ, ಗುತ್ತಿನಾರ್ ಸಂಜೀವ ಶೆಟ್ಟಿ ಉಪಸ್ಥಿತರಿದ್ದರು.
ಕೊಡೆತ್ತೂರು ಆದರ್ಶ ಬಳಗದ ಅಧ್ಯಕ್ಷ ಜಿತೇಂದ್ರ ಪ್ರಸಾದ್ ಶೆಟ್ಟಿ ಸ್ವಾಗತಿಸಿ ಹರೀಶ್ ಕೊಡೆತ್ತೂರು ವಾರ್ಷಿ ವರದಿ ವಾಚಿಸಿದರು. ಕೇಶವ ಕರ್ಕೆರ ವಂದಿಸಿದರು. ಪ್ರಕಾಶ್ ಆಚಾರ್ ಕಾರ್ಯಕ್ರಮ ನಿರೂಪಿಸಿದರು.

Kinnigoli 27011404

Comments

comments

Comments are closed.

Read previous post:
ರಾಜ್ಯಮಟ್ಟದ ಪವರ್‌ಲಿಪ್ಟಿಂಗ್

ಮೂಲ್ಕಿ: ರಾಜ್ಯಮಟ್ಟದ ಪವರ್‌ಲಿಪ್ಟಿಂಗ್ ಸ್ಪರ್ದೆಯ ಬೆಂಚ್‌ಪ್ರೆಸ್‌ನ ಹಿರಿಯ ಮತ್ತು ಮಾಸ್ಟರ್ ವಿಭಾಗದಲ್ಲಿ ಚಿನ್ನದ ಪದಕ ಪಡೆದು ಬಲಾಢ್ಯ ಪುರುಷ ಪ್ರಶಸ್ತಿಯನ್ನು ಮೂಲ್ಕಿ ಪೋಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ...

Close