ಸಂಗೀತ ಸ್ಪರ್ಧೆ ಮತ್ತು ಮದ್ಯವರ್ಜನಾ ಮಾಹಿತಿ

ಮೂಲ್ಕಿ: ಆದ್ಯಾತ್ಮಿಕ ಸಾಹಿತ್ಯ ಓದುವ ಹವ್ಯಾಸದೊಂದಿಗೆ ಕ್ರೀಡೆ, ನೃತ್ಯ ಸಂಗೀತ ದಂತಹ ಶೃಜನಶೀಲ ಹವ್ಯಾಸಗಳಲ್ಲಿ ತೊಡಗಿಸಿಕೊಂಡಲ್ಲಿ ಯುವ ಪೀಳಿಗೆ ದುಶ್ಚಟಗಳಿಂದ ದೂರವಿರಲು ಸಾಧ್ಯವಾಗುತ್ತದೆ ಎಂದು ಸಿ.ಎಸ್.ಐ. ವಿಶ್ರಾಂತ ಬಿಷಪ್ ರೈಟ್ ರೆ.ಸಿ.ಎಲ್ ಪುರ್ಟಾಡೋ ಹೇಳಿದರು. ದಕ್ಷಿಣ ಭಾರತ ಕ್ರೈಸ್ತ ಚರ್ಚುಗಳ ಮಹಾ ಒಕ್ಕೂಟ ಹಾಗೂ ಸೈಂಟ್ಸ್ ಆನ್ಸ್ ಸಮೂಹ ಶಿಕ್ಷಣ ಸಂಸ್ಥೆ ಮೂಲ್ಕಿ ಇವರ ಸಂಯುಕ್ತ ಆಶ್ರಯದಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಸಂಗೀತ ಸ್ಪರ್ಧೆ ಮತ್ತು ಮದ್ಯವರ್ಜನಾ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದುಶ್ಚಟಗಳು ಜನರನ್ನು ಆರ್ಥಿಕ ದೈಹಿಕ ಹಾಗೂ ಪಾರಮಾರ್ಥಿಕವಾಗಿ ದುರ್ಬಲರನ್ನಾಗಿಸುವುದರೊಂದಿಗೆ ಕೌಟುಂಬಿಕವಾಗಿ ಅಧಃಪತನಕ್ಕೀಡು ಮಾಡುವುದರಿಂದ ನಾವು ಜಾಗ್ರತೆಯಾಗಿರುವುದರ ಜೊತೆಗೆ ನಮ್ಮ ಸ್ನೇಹಿತರನ್ನೂ ಎಚ್ಚರಿಸಲು ಮರೆಯಬಾರದು ಎಂದರು. ದಕ್ಷಿಣ ಭಾರತ ಕ್ರೈಸ್ತ ಚರ್ಚುಗಳ ಮಹಾ ಒಕ್ಕೂಟದ ಡೇನಿಯಲ್ ದೇವರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ವಿಶೇಷ ಸಾಧಕರಾದ ಸಿ.ಎಸ್.ಐ ವಿಶ್ರಾಂತಿ ಚರ್ಚು ಬೊಕ್ಕಪಟ್ಟಣ ಸಭಾಪಾಲಕ ರೆ. ಐಸನ್ ಪಾಲನ್ನ, ಹಳೆಯಂಗಡಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಅಧ್ಯಕ್ಷರು ಮತ್ತು ನಿವೃತ್ತ ಮುಖ್ಯೋಪಾಧ್ಯಾಯಿನಿ ಮೀರಾ.ಬಾ.ಕೆ ಯವರನ್ನು ಸನ್ಮಾನಿಸಲಾಯಿತು.

ಪಕ್ಷಿಕೆರೆ ಸಂತ ಜ್ಯೂಡ್ ಚರ್ಚು ಧರ್ಮಗುರು ರೆವೆ.ಫಾದರ್ ಎಂಡ್ರೂ ಲಿಯೋ ಡಿಸೋಜ, ಮೂಲ್ಕಿ ಸೈಂಟ್ ಆನ್ಸ್ ಕಾಲೇಜು ಆಫ್ ನರ್ಸಿಂಗ್ ಪ್ರಾಂಶುಪಾಲ ಸಿಸ್ಟರ್ ಪ್ಲೋರಾ, ಸಿ.ಎಸ್.ಐ. ವಿಶ್ರಾಂತಿ ಚರ್ಚು ಸಭಾ ಪಾಲಕ ಐಸನ್ ಪಾಲನ್ನಾ, ಮೂಲ್ಕಿ ಸೈಂಟ್ಸ್ ಆನ್ಸ್ ಚೇತನಾ ನರ್ಸಿಂಗ್ ಹೋಮ್ ಆಡಳಿತ ಅಧಿಕಾರಿ ಜೋಸೆಫ್ ಲೋಬೋ, ಉಡುಪಿ ಭಾರತೀಯ ಕ್ರೈಸ್ತ ಒಕ್ಕೂಟ ಜಿಲ್ಲಾ ಅಧ್ಯಕ್ಷರು ಚಾಲ್ಸ್ ಅಂಬ್ಲರ್, ಉಡುಪಿ ಭಾರತೀಯ ಕ್ರೈಸ್ತ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಪೀಟರ್ ಶೆರಿನ್ ದಾಂತಿ ಉಪಸ್ಥಿತರಿದ್ದರು.

Kinnigoli 27011407

Bhagyavan Sanil

Comments

comments

Comments are closed.

Read previous post:
ದೊಂಬಿವಿಲಿ ಶ್ರೀ ಅಯ್ಯಪ್ಪ ಭಜನ ಮಂಡಳಿ ಏಕಾದಶ ಭಜನೆ

ಮೂಲ್ಕಿ: ಲೋಕ ಕಲ್ಯಾಣಾರ್ಥವಾಗಿ ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆಯುವ ಏಕಾದಶ ಭಜನಾ ಸಂಕೀರ್ತನೆಯ ಪ್ರಯುಕ್ತ ಶನಿವಾರ ಮುಂಬೈ ದೊಂಬಿವಿಲಿ ಶ್ರೀ ಅಯ್ಯಪ್ಪ ಭಜನ ಮಂಡಳಿ...

Close