ಬಬಿತಾ ರೋಹಿತ್ ಅಶ್ರುತರ್ಪಣ

ಮೂಲ್ಕಿ : ದುಬೈ ಮತ್ತು ಅಬುದಾಬಿ ಹೈವೇಯಲ್ಲಿ ಜ.20 ಮಂಗಳವಾರ ಬೆಳಿಗ್ಗೆ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಮೂಲ್ಕಿ ಕೊಳಚಿ ಕಂಬಳದ ಬಬಿತಾ ರೋಹಿತ್(33) ರವರ ಅಂತ್ಯಕ್ರಿಯೆ ಮಂಗಳವಾರ ಸಹಸ್ರಾರು ಜನರ ಅಶ್ರುತರ್ಪಣದೊಂದಿಗೆ ಮೂಲ್ಕಿ ಹಿಂದೂ ರುದ್ರ ಭೂಮಿಯಲ್ಲಿ ನಡೆಯಿತು. ಮೂಲ್ಕಿ ಕೊಳಚಿಕಂಬಳದ ಮನೆ ಸುಮತಿ ನಿವಾಸದಲ್ಲಿ ನಡೆದ ಅಂತ್ಯಕ್ರಿಯಾಪೂರ್ವ ಪ್ರಾರ್ಥನಾ ವಿಧಿಯಲ್ಲಿ ಮಾತನಾಡಿದ ಆಪಲ್ ಕಂಪನಿಯ ಪ್ರಾಂಥೀಯ ಪ್ರಭಂದಕರಾದ ಬೆನ್‌ಕಿಂಗ್,ಬಬಿತಾರೋಹಿತ್ ಓರ್ವ ಶೃಜನಶೀಲ ಮಹಿಳೆಯಾಗಿ ಸಹೃದಯಿ ಸಹದ್ಯೋಗಿಯಾಗಿದ್ದರು ತಮ್ಮ ಕಠಿಣ ಪರಿಶ್ರಮದಿಂದ ಉನ್ನತ ಸ್ಥಾನಗಳಿಸಿದ್ದರು.ಕುಟುಂಬಕ್ಕೆ ಅವರ ಅಗಲಿಕೆಯ ದುಖಃವನ್ನು ಸಹಿಸುವ ಶಕ್ತಿಯನ್ನು ದೇವರು ಕರುಣಿಸಲಿ ಮತ್ತು ಅವರ ಆತ್ಮಕ್ಕೆ ಶಾಂತಿ ಲಭಿಸಲಿಎಂದರು. ಈ ಸಂದರ್ಭ ಆಪಲ್ ಕಂಪನಿಯ ಅಧಿಕಾರಿಗಳು ಮತ್ತು ಸಹದ್ಯೋಗಿಗಳು ಉಪಸ್ಥಿತರಿದ್ದರು. ಬಳಿಕ ಮೂಲ್ಕಿ ಹಿಂದೂ ರುದ್ರ ಭೂಮಿಯಲ್ಲಿ ಮೃತದೇಹಕ್ಕೆ ಬಬಿತಾರ ಪತಿ ರೋಹಿತ್ ಅಗ್ನಿಸ್ಪರ್ಷನೀಡುವುದರೊಂದಿಗೆ ಅಂತ್ಯಕ್ರಿಯೆ ನಡೆಯಿತು.ಬಬಿತಾ ಕಲಿತಿರುವ ಶಾಲೆ ಮತ್ತು ಕಾಲೇಜಿನ ಮುಖ್ಯಸ್ಥರು,ಶಿಕ್ಷಕರು,ಸ್ನೇಹಿತರು ಬಂದುಗಳ ಸಹಿತ ಊರ ಪರವೂರ ಆತ್ಮೀಯರು ಸಹಸ್ರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Mulki 29011401

Comments

comments

Comments are closed.

Read previous post:
ಹರಿಹರ ಕ್ಷೇತ್ರ ವಿಷ್ಣು ಮೂರ್ತಿ ದೇವಸ್ಥಾನ ವಾರ್ಷಿಕ ಉತ್ಸವ

ಮೂಲ್ಕಿ: ಪ್ರಯುಕ್ತ ಉತ್ಸದವ ಮೂರ್ತಿಬಲಿ ಬಹಳ ವಿಜ್ರಂಭಣೆಯಿಂದ ಜರುಗಿತು

Close