ಮೂಲ್ಕಿ ಪಟ್ಟಣ ಪಂಚಾಯತ್ ಚುನಾವಣೆ : ಬಿಜೆಪಿ ಜಯಭೇರಿ

ಮೂಲ್ಕಿ: ಮೂಲ್ಕಿ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ 11 ಸ್ಥಾನಗಳಿಸಿ ಜಯಭೇರಿ ಹೊಡೆದಿದೆ ಹಿಂದಿನ ಆಡಳಿತಾರೂಢ ಕಾಂಗ್ರೆಸ್ 6 ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡಿದ್ದು ಜೆಡಿಎಸ್,ಎಸ್‌ಡಿಪಿಐ ಹಾಗೂ ಪಕ್ಷೇತರರು ಖಾತೆ ತೆರೆಯಲು ವಿಫಲರಾಗಿದ್ದಾರೆ.
12,070  ಮತದಾರರಿರುವ ಮೂಲ್ಕಿಯ17ವಾರ್ಡುಗಳಲ್ಲಿ 8,815  ಮತದಾನ ದಾಖಲಾಗಿದೆ.
ಜ. 29 ಬುಧವಾರ ಬೆಳಿಗ್ಗೆ ಮೂಲ್ಕಿ ಪಟ್ಟಣ ಪಂಚಾಯತ್ ಕಛೇರಿಯಲ್ಲಿ ಚುಣಾವಣಾ ವೀಕ್ಷಕರಾದ ಮಂಗಳೂರು ಎಸಿಸ್ಟೆಂಟ್ ಕಮಿಷನರ್ ಡಾ.ಪ್ರಶಾಂತ್ ಮತ್ತು ವಿಶೇಷ ತಹಶೀಲ್ದಾರ್ ನೇತ್ರತ್ವದಲ್ಲಿ ಫಲಿತಾಂಶ ಪ್ರಕ್ರಿಯೆ ಜರುಗಿತು.

ವಾ.1 : 693  ಮತದಾರರಲ್ಲಿ 507ಮತದಾನವಾಗಿದ್ದು ಬಿಜೆಪಿಯ ಎಂ.ಪುರುಷೋತ್ತಮ ರಾವ್226 ಮತ ಗಳಿಸಿ ವಿಜಯಿಯಾಗಿದ್ದಾರೆ. ಕಮಲಾಕ್ಷ (ಪಕ್ಷೇತರ 182), ಅಬ್ದುಲ್ ರಜಾಕ್ (ಕಾಂಗ್ರೆಸ್99).

ವಾ.2 :  406 ಮತದಾರರಲ್ಲಿ 281ಮತದಾನವಾಗಿದ್ದು ಬಿಜೆಪಿಯ ವೀಣಾ.ವಿ.ಶೆಟ್ಟಿ 178 ಮತ ಗಳಿಸಿ ವಿಜಯಿಯಾಗಿದ್ದಾರೆ. ಮೆಲಿಟಾ (ಕಾಂಗ್ರೆಸ್ 113)

ವಾ.3 :  581 ಮತದಾರರಲ್ಲಿ 411ಮತದಾನವಾಗಿದ್ದು ಬಿಜೆಪಿಯ ವಸಂತಿ ಭಂಡಾರಿ 312 ಮತ ಗಳಿಸಿ ವಿಜಯಿಯಾಗಿದ್ದಾರೆ. ಗಾಯತ್ರಿ ಗುಜರನ್ (ಕಾಂಗ್ರೆಸ್ 99)

ವಾ.4 :  715 ಮತದಾರರಲ್ಲಿ 501ಮತದಾನವಾಗಿದ್ದು ಬಿಜೆಪಿಯ ಉಮೇಶ 383 ಮತ ಗಳಿಸಿ ವಿಜಯಿಯಾಗಿದ್ದಾರೆ. ಸುಂದರ ಅಂಚನ್ (ಕಾಂಗ್ರೆಸ್ 118).

ವಾ5. :  709 ಮತದಾರರಲ್ಲಿ 474ಮತದಾನವಾಗಿದ್ದು ಕಾಂಗ್ರೆಸ್‌ನ ಜಬೀನಾ ಇಸ್ಮಾಯಿಲ್ 200 ಮತ ಗಳಿಸಿ ವಿಜಯಿಯಾಗಿದ್ದಾರೆ.  ಸಾರಿಕಾ (ಬಿಜೆಪಿ 124). ಶಮೀರಾ ಬಿಎ (ಎಸ್‌ಡಿಪಿಐ 92), ಜಮೀಲಾ (ಜೆಡಿಎಸ್ 58)

ವಾ6. : 824 ಮತದಾರರಲ್ಲಿ 575 ಮತದಾನವಾಗಿದ್ದು ಬಿಜೆಪಿಯ ಹರ್ಷರಾಜ ಶೆಟ್ಟಿ 278 ಮತ ಗಳಿಸಿ ವಿಜಯಿಯಾಗಿದ್ದಾರೆ.  ಶಶಿಕಾಂತ ಶೆಟ್ಟಿ(ಕಾಂಗ್ರೆಸ್245) ಎಂ.ಎಸ್.ಮೊಯಿದಿನಬ್ಬ(ಜೆಡಿಎಸ್31), ಎಫ್ರೋಜಿನ್ ಮೆಂಡೋನ್ಸಾ(ಪಕ್ಷೇತರ17). ದಿನೇಶ್ ಶೆಣೈ(ಪಕ್ಷೇತರ 4),

ವಾ.7 :  778 ಮತದಾರರಲ್ಲಿ 608ಮತದಾನವಾಗಿದ್ದು ಬಿಜೆಪಿಯ ಸುನೀಲ್ ಆಳ್ವಾ 359 ಮತ ಗಳಿಸಿ ವಿಜಯಿಯಾಗಿದ್ದಾರೆ. ಯೋಗೀಶ್ ಕೋಟ್ಯಾನ್(ಕಾಂಗ್ರೆಸ್249).

ವಾ.8. :  857 ಮತದಾರರಲ್ಲಿ 613 ಮತದಾನವಾಗಿದ್ದು ಬಿಜೆಪಿಯ ರಾಧಿಕಾ ಕೋಟ್ಯಾನ್ 394 ಮತ ಗಳಿಸಿ ವಿಜಯಿಯಾಗಿದ್ದಾರೆ. ಸುಧಾ ಶೆಟ್ಟಿ (ಕಾಂಗ್ರೆಸ್194). ಶಕುಂತಲಾ ಎಸ್ ತೋಳಾರ್ (ಪಕ್ಷೇತರ25).

ವಾ.9 :  756 ಮತದಾರರಲ್ಲಿ 533ಮತದಾನವಾಗಿದ್ದು ಕಾಂಗ್ರೆಸ್‌ನ ಹಸನಬ್ಬ 309 ಮತ ಗಳಿಸಿ ವಿಜಯಿಯಾಗಿದ್ದಾರೆ. ರಾಜೇಶ್ (ಬಿಜೆಪಿ 224).

ವಾ.10 :  964 ಮತದಾರರಲ್ಲಿ 658 ಮತದಾನವಾಗಿದ್ದು ಬಿಜೆಪಿಯ ಮೀನಾಕ್ಷಿ ಬಂಗೇರಾ277ಮತ ಗಳಿಸಿ ವಿಜಯಿಯಾಗಿದ್ದಾರೆ. ವಿನಯ ಚಂದ್ರಶೇಖರ್(ಕಾಂಗ್ರೆಸ್ 248). ಅನಿತಾ(ಜೆಡಿಎಸ್133)

ವಾ.11 : 311ಮತದಾರರಲ್ಲಿ 235ಮತದಾನವಾಗಿದ್ದು ಬಿಜೆಪಿಯ ಶೈಲೇಶ್ 88ಮತ ಗಳಿಸಿ ವಿಜಯಿಯಾಗಿದ್ದಾರೆ. ಜೀವನ್ ಪೂಜಾರಿ (ಕಾಂಗ್ರೆಸ್81), ನವೀನ್ ಪುತ್ರನ್ (ಜೆಡಿಎಸ್47), ಇಕ್ಬಾಲ್ (ಎಸ.ಡಿ.ಪಿ.ಐ 19)

ವಾ12 :  906 ಮತದಾರರಲ್ಲಿ 640 ಮತದಾನವಾಗಿದ್ದು ಕಾಂಗ್ರೆಸ್‌ನ ವಿಮಲಾ ಪೂಜಾರಿ 319 ಮತ ಗಳಿಸಿ ವಿಜಯಿಯಾಗಿದ್ದಾರೆ. ಪುಷ್ಪಾ (ಬಿಜೆಪಿ156) ,ಜುಬೇದಾ (ಎಸ್‌ಡಿಪಿಐ116) ಹೇಮಲತಾ (ಜೆಡಿಎಸ್49).

ವಾ.13  660ಮತದಾರರಲ್ಲಿ 519 ಮತದಾನವಾಗಿದ್ದು ಬಿಜೆಪಿಯ ಶಂಕ್ರವ್ವ 251 ಮತ ಗಳಿಸಿ ವಿಜಯಿಯಾಗಿದ್ದಾರೆ. ಚಂದ್ರವ್ವ (ಕಾಂಗ್ರೆಸ್185), ಅನ್ನಪೂರ್ಣ(ಜೆಡಿಎಸ್83)

ವಾ.14 :  932 ಮತದಾರರಲ್ಲಿ 757 ಮತದಾನವಾಗಿದ್ದು ಕಾಂಗ್ರೆಸ್‌ನ ಕಲಾವತಿ ಯಾನೆ ಕಲ್ಲವ್ವ 335 ಮತ ಗಳಿಸಿ ವಿಜಯಿಯಾಗಿದ್ದಾರೆ., ಸುನೀತಾ(ಬಿಜೆಪಿ319), ಸುಜಾತಾ(ಜೆಡಿಎಸ್103)

ವಾ.15 : 483 ಮತದಾರರಲ್ಲಿ 369 ಮತದಾನವಾಗಿದ್ದು ಕಾಂಗ್ರೆಸ್‌ನ ಬಿ.ಎಂ.ಆಸೀಫ್ 162 ಮತ ಗಳಿಸಿ ವಿಜಯಿಯಾಗಿದ್ದಾರೆ. ಮನ್ಸೂರ್(ಜೆಡಿಎಸ್106). ಪ್ರವೀಣ್ ನಾಯರ್ (ಬಿಜೆಪಿ101),

ವಾ16 :  558 ಮತದಾರರಲ್ಲಿ 407 ಮತದಾನವಾಗಿದ್ದು ಕಾಂಗ್ರೆಸ್‌ನ ಹಸನ್ ಬಶೀರ್ ಕುಲಾ 241 ಮತ ಗಳಿಸಿ ವಿಜಯಿಯಾಗಿದ್ದಾರೆ. ಆಶ್ರಪ್ (ಬಿಜೆಪಿ 65), ಎಂ.ಇಸ್ಮಾಯಿಲ್ (ಜೆಡಿಎಸ್ 48). ಶರೀಪ್ (ಎಸ್‌ಡಿಪಿಐ 53)
ವಾ.17 :  927 ಮತದಾರರಲ್ಲಿ 717 ಮತದಾನವಾಗಿದ್ದು ಬಿಜೆಪಿಯ ಕುಸುಮಾವತಿ 449 ಮತ ಗಳಿಸಿ ವಿಜಯಿಯಾಗಿದ್ದಾರೆ ಕುಸುಮಾ ರಮೇಶ್ (ಕಾಂಗ್ರೆಸ್ 268) ಮತ ಪಡೆದಿದ್ದಾರೆ.

Mulki 29011404Mulki 29011405 Mulki 29011406 Mulki 29011407 Mulki 29011408 Mulki 29011409 Mulki 29011410

Comments

comments

Comments are closed.