ಗುತ್ತಕಾಡು- ನರ್ಸರಿ ಕಟ್ಟಡ ಶಿಲನ್ಯಾಸ

ಕಿನ್ನಿಗೋಳಿ : ಶಿಕ್ಷಣ ತಜ್ಞ ಕೆ. ಸೋಮಪ್ಪ ಸುವರ್ಣ ಅವರ ಸ್ಮರಣಾರ್ಥ ಗುತ್ತಕಾಡು ಬಗ್ಗಲ್ ತೋಟ ತಾಳಿಪಾಡಿಯಲ್ಲಿ ಸುಮಾರು 8 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಿರುವ ಶ್ರೀ ನಾರಾಯಣ ಗುರು ನರ್ಸರಿ ಶಾಲಾ ಕಟ್ಟಡದ ಶಿಲಾನ್ಯಾಸವನ್ನು ಮಂಗಳವಾರ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲ ಪಿ. ಹೆಗ್ಡೆ ನೆರವೇರಿಸಿದರು. ಸುರತ್ಕಲ್ ಶ್ರೀ ಗುರು ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಗಣೇಶ ಬಂಗೇರ, ಖಜಾಂಜಿ ಚಂದ್ರಶೇಖರ ನಾನಿಲ್, ಚನ್ನಕೇಶವ, ಎಪಿಎಂಸಿ ಸದಸ್ಯ ಪ್ರಮೋದ್ ಕುಮಾರ್, ಸಹನಾ ಪ್ರಮೋದ್, ಹರೀಂದ್ರ, ವಿಜಯ ಕಾಲೇಜು ನಿವೃತ್ತ ಪ್ರಿನ್ಸಿಪಾಲ್ ಸ್ಯಾಮ್ ಮಾಬೆನ್, ಗುತ್ತಕಾಡು ಬಿಲ್ಲವ ಸಂಘದ ಅಧ್ಯಕ್ಷ ಬಾಲಕೃಷ್ಣ ಡಿ. ಸಾಲ್ಯಾನ್, ಹೆಜಮಾಡಿ ಗ್ರಾ. ಪಂ. ಅಧ್ಯಕ್ಷ ವಾಮನ್ ನಡಿಕುದ್ರು, ಮುಲ್ಕಿ ನಾರಾಯಣಗುರು ಶಾಲಾ ಸಂಚಾಲಕ ಎಚ್. ವಿ. ಕೋಟ್ಯಾನ್, ಜೊಸ್ಸಿ ಪಿಂಟೊ, ಚಂದ್ರಶೇಖರ ಸುವರ್ಣ, ಕುಶಲ ಪೂಜಾರಿ, ಪ್ರಕಾಶ ಆಚಾರ್ಯ ಮತ್ತ್ತಿತರರು ಉಪಸ್ಥಿತರಿದ್ದರು.

Kinnigoli 30011401

 

Comments

comments

Comments are closed.

Read previous post:
ಬಪ್ಪನಾಡು ಭಜನಾ ಸಂಕೀರ್ತನೆ

ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪಾರಮೇಶ್ವರೀ ಸೇವಾ ಯುವಕ ವೃಂದದ ಭಜನ ಮಂಗಲೋತ್ಸವದ ಪ್ರಯುಕ್ತ ಬಪ್ಪನಾಡು ದೇವಳದಲ್ಲಿ ನಡೆಯುತ್ತಿರುವ ಏಕಾದಶಿ (11 ದಿನಗಳ) ಅಖಂಡ ಅಹೋರಾತ್ರಿ ಭಜನಾ ಸಂಕೀರ್ತನೆಯ ಅಂಗವಾಗಿ...

Close