ಸೋಮಪ್ಪ ಸುವರ್ಣ ಸಂಸ್ಮರಣೆ, ಪ್ರಶಸ್ತಿ ಪ್ರದಾನ

ಕಿನ್ನಿಗೋಳಿ: ಸೋಮಪ್ಪ ಸುವರ್ಣರು ಶೈಕ್ಷಣಿಕ ತಜ್ಞ, ಸಮಾಜ ಸೇವಕ, ಸರ್ವ ಧರ್ಮದ ಜನರನ್ನು ಒಗ್ಗೂಡಿಸಿ ರಾಜಕೀಯ ರಹಿತವಾಗಿ ಸಾಮಾಜಿಕ ಸೇವೆ ನೀಡಿದ್ದು ಪ್ರಶಂಸನೀಯ ಎಂದು ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.
ಕೆ. ಸೋಮಪ್ಪ ಸುವರ್ಣರ ನೆರಳು- ನೆನಪು ಸಮಿತಿಯ ಆಶ್ರಯದಲ್ಲಿ ಮಂಗಳವಾರ ಕಿನ್ನಿಗೋಳಿ ಸಮೀಪದ ತಾಳಿಪಾಡಿ ಬಿಲ್ಲವ ಸಂಘದ ಆವರಣದಲ್ಲಿ ಕೆ. ಸೋಮಪ್ಪ ಸುವರ್ಣರ ಸಂಸ್ಮರಣಾ – ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ಹಿರಿಯ ಕೃಷಿಕ ಪಾವುಸ್ತಿನ್ ಸಿಕ್ವೇರಾ (ಕೃಷಿಕ) ಎಕ್ಕಾರು ಮೋನಪ್ಪ ಶೆಟ್ಟಿ (ಸಮಾಜ ಸೇವೆ) ಹಾಗೂ ಅಡ್ವೆ ರವೀಂದ್ರ ಪೂಜಾರಿ (ಶಿಕ್ಷಕ) ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಟೀಲು ಪದವಿ ಕಾಲೇಜು ಉಪನ್ಯಾಸಕ ಪ್ರೊ. ಕೇಶವ ಎಚ್. ಸೋಮಪ್ಪ ಸುವರ್ಣರ ಸಂಸ್ಮರಣ ಭಾಷಣಗೈದರು.
ಸುರತ್ಕಲ್ ಶ್ರೀ ಗುರು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸದಾನಂದ ಸುವರ್ಣ, ಕೆ.ಮುರಳೀಧರ ಭಂಡಾರಿ, ಚಲನ ಚಿತ್ರ ನಿರ್ಮಾಪಕ ನಿರ್ದೇಶಕ ರಾಜ್‌ಶೇಖರ ಕೋಟ್ಯಾನ್, ತಾಳಿಪಾಡಿ ಬಿಲ್ಲವ ಸಂಘದ ಅಧ್ಯಕ್ಷ ಬಾಲಕೃಷ್ಣ ಡಿ. ಸಾಲ್ಯಾನ್, ಮುಲ್ಕಿ ನಾರಾಯಣಗುರು ಶಾಲಾ ಸಂಚಾಲಕ ಎಚ್. ವಿ. ಕೋಟ್ಯಾನ್, , ಡಾ| ಗಣೇಶ್ ಅಮೀನ್ ಸಂಕಮಾರ್, ಮುಲ್ಕಿ ಬಿಲ್ಲವ ಸಂಘದ ಯದೀಶ್ ಅಮೀನ್ ಕೊಕ್ಕರಕಲ್, ಚೆನ್ನಕೇಶವ, ಹರೀಂದ್ರ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
ಚಂದ್ರಶೇಖರ ಸುವರ್ಣ ಸ್ವಾಗತಿಸಿದರು. ತೋಕೂರು ಐ.ಟಿ.ಐ. ಪ್ರಿನ್ಸಿಪಾಲ್ ವೈ. ಎನ್. ಸಾಲ್ಯಾನ್ ಪ್ರಸ್ತಾವಿಸಿ ಎಪಿಎಂಸಿ ಸದಸ್ಯ ಪ್ರಮೋದ್ ಕುಮಾರ್ ವಂದಿಸಿದರು. ಉದಯ ಅಮೀನ್ ಹಾಗೂ ದೀಕ್ಷಾ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

Kinnigoli 30011403

Comments

comments

Comments are closed.

Read previous post:
ಕಟೀಲು ಮಲ್ಲಿಗೆ ಅಂಗಡಿ ಅಶ್ವತ್ಥ ವೃಕ್ಷದ ವಿವಾಹ ಮಹೋತ್ಸವ

ಕಿನ್ನಿಗೋಳಿ : ನವರಾತ್ರಿ ಮೆರವಣಿಗೆ ಸೇವಾ ಸಮಿತಿ ಕೊಡೆತ್ತೂರು-ಕಟೀಲು ಮತ್ತು ನಂದಿನಿ ಯುವಕ ಮಂಡಲ ಕೊಡೆತ್ತೂರು ಹಾಗೂ ಊರ ಹತ್ತು ಸಮಸ್ತರ ಆಶ್ರಯದಲ್ಲಿ ಫೆಭ್ರವರಿ 2 ಭಾನುವಾರ ಮಲ್ಲಿಗೆ...

Close