ಕಟೀಲು ಮಲ್ಲಿಗೆ ಅಂಗಡಿ ಅಶ್ವತ್ಥ ವೃಕ್ಷದ ವಿವಾಹ ಮಹೋತ್ಸವ

ಕಿನ್ನಿಗೋಳಿ : ನವರಾತ್ರಿ ಮೆರವಣಿಗೆ ಸೇವಾ ಸಮಿತಿ ಕೊಡೆತ್ತೂರು-ಕಟೀಲು ಮತ್ತು ನಂದಿನಿ ಯುವಕ ಮಂಡಲ ಕೊಡೆತ್ತೂರು ಹಾಗೂ ಊರ ಹತ್ತು ಸಮಸ್ತರ ಆಶ್ರಯದಲ್ಲಿ ಫೆಭ್ರವರಿ 2 ಭಾನುವಾರ ಮಲ್ಲಿಗೆ ಅಂಗಡಿ ಬಳಿಯ ನಂದಿನಿ ಕಟ್ಟೆಯಲ್ಲಿ ಕೊಡೆತ್ತೂರು ನವರಾತ್ರಿ ಮೆರವಣಿಗೆ ಸೇವಾ ಸಮಿತಿ ಇದರ 2014ರ ಸಾಲಿನ ಸುವರ್ಣ ಮಹೋತ್ಸವ ಸಂಭ್ರಮದ ಅಂಗವಾಗಿ ಅಶ್ವತ್ಥ ವೃಕ್ಷದ ವಿವಾಹ ಮಹೋತ್ಸವ ನಡೆಯಲಿದೆ ಫೆಬ್ರವರಿ 1ರ ಶನಿವಾರದಂದು ಸಾಯಂಕಾಲ 5.00ಕ್ಕೆ ಸಾಮೂಹಿಕ ಪ್ರಾರ್ಥನೆ ತೋರಣ ಮುಹೂರ್ತ, ಗಂಟೆ 6ರಿಂದ 8ರ ವರೆಗೆ ವಾಸ್ತು ಪೂಜೆ, ವಾಸ್ತು ಬಲಿ, ವಾಸ್ತು ಹೋಮಾದಿ ಧಾರ್ಮಿಕ ಕಾರ್ಯಕ್ರಮ, ಫೆಬ್ರವರಿ 2ರಂದು ಬೆಳಿಗ್ಗೆ 7.30ಕ್ಕೆ ಗಣಪತಿ ಹೋಮ ಹಾಗೂ ಅಶ್ವತ್ಥ ಉಪನಯನ ಬೆಳಿಗ್ಗೆ 8ಕ್ಕೆ ಕಟೀಲು ದೇವಸ್ಥಾನದ ರಥಬೀದಿಯಿಂದ ಮಲ್ಲಿಗೆ ಅಂಗಡಿಯ ನಂದಿನಿ ಕಟ್ಟೆಯವರೆಗೆ ಅಶ್ವತ್ಥ ವೃಕ್ಷದ ವಧು ತುಳಸೀ ಗಿಡವನ್ನು ಭವ್ಯ ಮೆರವಣಿಗೆಯೊಂದಿಗೆ ಕರೆತರಲಾಗುವುದು. ಗಂಟೆ 10ರಿಂದ ಅಶ್ವತ್ಥ ವೃಕ್ಷದ ವಿವಾಹ ಮಹೋತ್ಸವ ಮತ್ತು ಇನ್ನಿತರ ಧಾರ್ಮಿಕ ಕಾರ್ಯಕ್ರಮ ಮಧ್ಯಾಹ್ನ 1ರಿಂದ ಅನ್ನ ಸಂತರ್ಪಣೆ ಸಂಜೆ 6ರಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ ರಾತ್ರಿ 9ರಿಂದ ಶ್ರೀ ರಾಮಚಂದ್ರ ಕೃಪಾಪೋಷಿತ ಯಕ್ಷಗಾನ ಮಂಡಳಿ ರಾಮಚಂದ್ರಾಪುರ ಹೊಸನಗರ ಇವರಿಂದ “ಕಲ್ಯಾಣ ತ್ರಯ” ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

Kinnigoli 30011402

Comments

comments

Comments are closed.

Read previous post:
ಮೂಲ್ಕಿ- ಮೊದಲ ಬಾರಿ ಮುಸ್ಲಿಂ ಮಹಿಳೆ ಆಯ್ಕೆ

ಮೂಲ್ಕಿ:  ಸರಕಾರದ ಮೀಸಲಾತಿಯಲ್ಲಿ ಮೂಲ್ಕಿ ಪಟ್ಟಣ ಪಂಚಾಯತಿನಲ್ಲಿ ಮಹಿಳೆಯರಿಗೆ ಅಗ್ರ ಸ್ಥಾನ ದೊರೆತಿದ್ದು ಇತಿಹಾಸದಲ್ಲೇ ಪ್ರಥಮ ಬಾರಿಗೆ ಮೂಲ್ಕಿ ನಗರ ಪಂಚಾಯತಿಗೆ ಮುಸ್ಲಿಂ ಮಹಿಳೆಯೊಬ್ಬರು ಆಯ್ಕೆಯಾಗಿದ್ದು ಮಹಿಳೆಯಲ್ಲಿ...

Close