ಮೂಲ್ಕಿ- ಮೊದಲ ಬಾರಿ ಮುಸ್ಲಿಂ ಮಹಿಳೆ ಆಯ್ಕೆ

ಮೂಲ್ಕಿ:  ಸರಕಾರದ ಮೀಸಲಾತಿಯಲ್ಲಿ ಮೂಲ್ಕಿ ಪಟ್ಟಣ ಪಂಚಾಯತಿನಲ್ಲಿ ಮಹಿಳೆಯರಿಗೆ ಅಗ್ರ ಸ್ಥಾನ ದೊರೆತಿದ್ದು ಇತಿಹಾಸದಲ್ಲೇ ಪ್ರಥಮ ಬಾರಿಗೆ ಮೂಲ್ಕಿ ನಗರ ಪಂಚಾಯತಿಗೆ ಮುಸ್ಲಿಂ ಮಹಿಳೆಯೊಬ್ಬರು ಆಯ್ಕೆಯಾಗಿದ್ದು ಮಹಿಳೆಯಲ್ಲಿ ಸಂತಸ ಮೂಡಿದೆ. ಕಳೆದ ಚುನಾವಣೆಯಲ್ಲಿ ವಾರ್ಡು 5ರಲ್ಲಿ ಚುನಾಯಿತರಾಗಿದ್ದ ಪುತ್ತುಬಾವ ಅನಿರೀಕ್ಷಿತ ಮೀಸಲಾತಿಯ ಕಾರಣಗಳಿಂದ ವಾರ್ಡನ್ನು ತೆರವುಗೊಳಿಸಬೇಕಾಗಿ ಬಂತು. ಆಗ ಕಾಂಗ್ರೆಸ್ಸಿನ ಸೂಕ್ತ ಅಭ್ಯರ್ಥಿಯಾಗಿ ಆಯ್ಕೆಯಾದ ಜಬೀನಾ ಇಬ್ರಾಹಿಂ ಸುಮ್ಮನೆ ಕುಳಿತುಕೊಳ್ಳದೆ ಕಳೆದ ಬಾರಿ ಗೆಲುವು ಸಾದಿಸಿ ವಾರ್ಡಿನ ಏಳಿಗೆಗಾಗಿ ಶ್ರಮಿಸಿದ ಪುತ್ತು ಬಾವ ಜತೆ ಸೇರಿಕೊಂಡು ಬಿಜೆಪಿ, ಜೆಡಿಎಸ್ಸು, ಎಸ್ಡಿಪಿಐ ಪಕ್ಷಗಳ ಅಪಪ್ರಚಾರದ ನಡುವೆಯೇ ಭರ್ಜರಿಯಾಗಿಯೇ ಜಯಗಳಿಸಿದ್ದು ವಿಶೇಷ. ಇಲ್ಲಿ ಜಬೀನಾ 200 ಮತಗಳನ್ನು ಗಳಿಸಿದರೆ ಬಿಜೆಪಿಯ ಸಾರಿಕಾ 124 ಜೆಡಿಎಸ್ಸಿನ ಜಮಿಲ 58 ಮತ್ತುಎಸ್‌ಡಿಪಿಐನ ಶಮಿರಾ 92 ಮತಗಳನ್ನು ಪಡೆದಿದ್ದಾರೆ. ಈ ಮಹಿಳೆಯರ ಗೆಲುವಿನಿಂದ ಪ್ರಪ್ರಥಮ ಬಾರಿಗೆ ಮೂಲ್ಕಿ ಪಟ್ಟಣ ಪಂಚಾಯತಿಗೆ ಮುಸ್ಲಿಂ ಮಹಿಳೆಯೊಬ್ಬರು ಆಯ್ಕೆಯಾಗಿ ಮಹಿಳೆಯರ ಶೋಷಣೆ ವಿರುದ್ದ ಧ್ವನಿ ಎತ್ತುವಂತಾಗಿದೆ.ಗೆಲುವಿನ ಸಂಭ್ರಮದಲ್ಲಿ ಮಾದ್ಯಮದೊಂದಿಗೆ ಸಂತಸ ಹಂಚಿಕೊಂಡ ಮಹಿಳೆ ಜಬೀನಾ ವಾರ್ಡಿನ ಏಳಿಗೆಗಾಗಿ ಪುತ್ತುಬಾವ ಹಾಕಿಕೊಟ್ಟ ಮಾರ್ಗದರ್ಶನದಂತೆ ನಡೆಯುತ್ತೇನೆ. ನನಗೆ ಮತ ನೀಡಿದ ಮತದಾರರಿಗೆ ನಾನು ಎಂದೆದಿಗೂ ಕೃತಜ್ಞಳು ಎಂದು ಗದ್ಗದಿತರಾಗಿಯೇ ಹೇಳಿದರು.
ನಿನ್ನೆ ನಡೆದ ಮೂಲ್ಕಿ ನಗರ ಪಂಚಾಯತಿ ಚುನಾವಣೆಯ 17 ಕ್ಷೇತ್ರಗಳಲ್ಲಿ 11 ಬಿಜೆಪಿ ಹಾಗೂ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ಸ್ ಜಯಗಳಿಸಿದ್ದು ಅಧ್ಯಕ್ಷ ಹುದ್ದೆ ಹಿಂದುಳಿದ ವರ್ಗ ಮೀಸಲಾತಿ ಮಹಿಳೆಯಾದರಿಂದ ಮೀನಾಕ್ಷಿ ಬಂಗೇರ ಆಯ್ಕೆಯಾಗುವ ಸಂಭವವಿದೆ. ಉಳಿದಂತೆ ಉಪಾಧ್ಯಕ್ಷ ಹುದ್ದೆ ಸರಕಾರದ ನೂತನ ಮೀಸಲಾತಿ ನಿಯಮ ಅನ್ವಯಿಸುತ್ತಿದೆ ಎನ್ನಲಾಗಿದೆ.
ಸೋತ ಅಭ್ಯರ್ಥಿಗಳಿಂದ ಚಿಂತನೆ
ನಿನ್ನೆ ನಡೆದ ಮತ ಎಣಿಕೆಯಲ್ಲಿ ಸೋತ ಕೆಲ ಅಭ್ಯರ್ಥಿಗಳು ಚಿಂತನೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಕಂಡು ಬಂದಿದೆ. ಚುನಾವಣೆಯಲ್ಲಿ ಆಘಾತಕಾರಿ ಸೋಲು ಅನುಭವಿಸಿದ ಕಾಂಗ್ರೆಸ್ಸಿನ ನಾಯಕರಾದ ಶಶಿಕಾಂತ ಶೆಟ್ಟಿ, ಯೋಗೀಶ ಕೋಟ್ಯಾನ್, ಅಬ್ದುಲ್ ರಜಾಕ್, ಜೀವನ್ ಪೂಜಾರಿ ಮತ್ತು ಪಕ್ಷೇತರ ಕಮಲಾಕ್ಷ ಬಡಗುಹಿತ್ಲು ಒಂದೆಡೆ ಸೇರಿ ಸೋಲಿಗೆ ಕಾರಣ ಕಂಡು ಹುಡುಕುತ್ತಿದ್ದುದು ಕಂಡು ಬಂತು.ಕಾಂಗ್ರೆಸ್ಸಿನ ಹಿರಿಯ ನಾಯಕರಾರು ಚುನಾವಣೆಗೆ ಪ್ರಚಾರಕ್ಕೆ ಬಾರದೆ ಸೋತೆವು ಎಂಬ ಮಾತೂ ಕೇಳಿ ಬಂದಿದೆ.ಮತಎಣಿಕೆಯ ಹಿಂದಿನ ದಿನ ಬಿಜೆಪಿಯವರೊಂದಿಗೆ ಲಕ್ಷ ಲಕ್ಷ ಬೆಟ್ಟಿಂಗ್ ಕೇಳುತ್ತಿದ್ದ ಕಾಂಗ್ರೆಸ್ಸ್ ಮುಖಂಡರು ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಕಾಣೆಯಾಗಿದ್ದರು. ಆದರೆ ಬಿಜೆಪಿಯವರು ತಾವು ಗೆಲ್ಲುತ್ತೇವೆಂದು ಯಾವುದೇ ಭ್ರಮೆಯಲ್ಲಿಲ್ಲದ ಕಾರಣ ಯಾರೂ ಬೆಟ್ಟಿಂಗ್ ಕಟ್ಟಿಲ್ಲ ಎಂದು ತಿಳಿದು ಬಂದಿದೆ.

Mulki 30011405

Puneethakrishna Sk

Comments

comments

Comments are closed.

Read previous post:
ನಿಟ್ಟೆ ಕ್ರೀಡೋತ್ಸವ

ಕಿನ್ನಿಗೋಳಿ : ನಿಟ್ಟೆ ವಿಶ್ವವಿದ್ಯಾನಿಲಯ ನಡೆಸಿದ 2014ನೇ ಸಾಲಿನ 2ನೇ ವರ್ಷದ ನಿಟ್ಟೆ ಕ್ರೀಡೋತ್ಸವವನ್ನು ಆಯೋಜಿಸಿದ್ದು ಮುಲ್ಕಿ ರಾಮಕೃಷ್ಣ ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆ, ತೋಕೂರು ವಾಲಿಬಾಲ್...

Close