ಬಪ್ಪನಾಡು ಭಜನಾ ಸಂಕೀರ್ತನೆ

ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪಾರಮೇಶ್ವರೀ ಸೇವಾ ಯುವಕ ವೃಂದದ ಭಜನ ಮಂಗಲೋತ್ಸವದ ಪ್ರಯುಕ್ತ ಬಪ್ಪನಾಡು ದೇವಳದಲ್ಲಿ ನಡೆಯುತ್ತಿರುವ ಏಕಾದಶಿ (11 ದಿನಗಳ) ಅಖಂಡ ಅಹೋರಾತ್ರಿ ಭಜನಾ ಸಂಕೀರ್ತನೆಯ ಅಂಗವಾಗಿ ಮುಲ್ಕಿ ವೆಂಕಟರಮಣ ದೇವಸ್ಥಾನದ ಮಾಜಿ ಟ್ರಸ್ಟಿಗಳಾದ ರಾಧಾಕೃಷ್ಣ ಶೆಣೈಯವರ ಪುತ್ರ ವಿವೇಕ್ ಶೆಣೈ ಇವರ ಸಹಕಾರದೊಂದಿಗೆ ಯುವಕ ವೃಂದ ಸದಸ್ಯರು ಭಜನಾಜ್ಯೋತಿಗೆ ಮಾಡಿದ ವಿವಿಧ ಹೂವಿನ ಅಲಂಕಾರಗಳು ಎಲ್ಲ ಭಕ್ತ ಜನರ ಮನಸೂರೆಗೊಂಡಿದೆ. 23ರಂದು ಪ್ರಾರಂಭಗೊಂಡ ಈ ಭಜನಾ ಸಂಕೀರ್ತನೆಯು ಮಂಗಳೂರು, ಉಡುಪಿ, ಮುಂಬೈ ಊರಿನ ಭಜನಾ ಮಂಡಳಿಗಳು ಪಾಲ್ಗೊಂಡಿದ್ದು ಅಪಾರ ಜನಮನ್ನಣೆಗೆ ಪಾತ್ರವಾಗಿದೆ. ಫೆಬ್ರವರಿ 2ರಂದು ನಗರ ಭಜನೆಯೊಂದಿಗೆ ಈ ಭಜನಾ ಮಂಗಲೋತ್ಸವವು ಫೆಬ್ರವರಿ 3ರ ಬೆಳಿಗ್ಗೆ ಮುಡುವಲು ಉತ್ಸವದಂದು ಕೊನೆಗೊಳ್ಳಲ್ಲಿದೆ.

Mulki 30011401 Mulki 30011402 Mulki 30011403

Comments

comments

Comments are closed.

Read previous post:
ಮೂಲ್ಕಿ ಪಟ್ಟಣ ಪಂಚಾಯತ್ ಚುನಾವಣೆ : ಬಿಜೆಪಿ ಜಯಭೇರಿ

ಮೂಲ್ಕಿ: ಮೂಲ್ಕಿ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ 11 ಸ್ಥಾನಗಳಿಸಿ ಜಯಭೇರಿ ಹೊಡೆದಿದೆ ಹಿಂದಿನ ಆಡಳಿತಾರೂಢ ಕಾಂಗ್ರೆಸ್ 6 ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡಿದ್ದು ಜೆಡಿಎಸ್,ಎಸ್‌ಡಿಪಿಐ ಹಾಗೂ ಪಕ್ಷೇತರರು ಖಾತೆ...

Close