ವಿದ್ಯಾರ್ಥಿಗಳಿಗೆ ನಾಯಕತ್ವ ತರಬೇತಿ

ಮೂಲ್ಕಿ: ಗ್ರಾಮೀಣ ವಲಯದ ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಆರ್ಥಿಕ ದುಸ್ಥಿತಿಯ ಕುಟುಂಬಗಳಿಂದ ಬಂದ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಸಹಕರಿಸುವ ಕಾರ್ಯ ಸ್ತುತ್ಯರ್ಹ ಎಂದು ಜೇಸಿ ವಲಯಧಿಕಾರಿ ರಾಘನಾಥ ನಾಯಕ್ ಹೇಳಿದರು.
ಜೇಸಿ ಐ ಮೂಲ್ಕಿ ಶಾಂಭವಿಯ ಸಂಯೋಜನೆಯಲ್ಲಿ ಕಿಲ್ಪಾಡಿ ಪ್ರಾಥಮಿಕ ಶಾಲೆಯವಿದ್ಯಾರ್ಥಿಗಳಿಗೆ ನಡೆದ ನಾಯಕತ್ವ ತರಬೇತಿ ಹಾಗೂ ವಿವಿಧ ಕಾರ್ಯಕ್ರಮಗಳನ್ನು ದೀಪ ಬೆಳಗಿಸಿ ಚಾಲನೆಯನ್ನು ನೀಡಿ ಮಾತನಾಡಿದರು.
ಯುವ ಪೀಳಿಗೆಗೆ ನಾಯಕತ್ವ ತರಬೇತಿ ನೀಡುವಲ್ಲಿ ಮುಂಚೂಣಿಯಲ್ಲಿರುವ ಮೂಲ್ಕಿ ಜೇಸಿ ಸದಸ್ಯರು ಪ್ರಾಥಮಿಕ ಹಂತದ ವಿದ್ಯಾರ್ಥಿಗಳ ಬಗ್ಗೆ ಆಸಕ್ತಿ ವಹಿಸಿ ಅವರಿಗೆ ತರಬೇತಿ ನೀಡಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ಈ ಸಂಧರ್ಭಶಾಲೆಗೆ ಕುಡಿಯುವ ನೀರಿನ ಫಿಲ್ಟಾರ್ ನೀಡಲಾಯಿತು ಜೇಸಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಅಧ್ಯಕ್ಷತೆ ವಹಿಸಿದ್ದರು, ಜೇಸಿ ರೋಹಿತ್ ಶೆಟ್ಟಿ, ಕಾರ್ಯಕ್ರಮ ನಿರ್ದೇಶಕ ಜೇಸಿ ರಾಮ್‌ದಾಸ್ ಕಾಮತ್, ವಿಜಯ ಕುಮಾರ್, ರವೀಂದ್ರ ಶೆಟ್ಟಿ, ಪ್ರದೀಪ್, ಸರ್ವೋತ್ತಮ ಅಂಚನ್, ಜಯಕುಮಾರ್, ಮಲ್ಲಿಕಾರ್ಜುನ್, ಪ್ರಕಾಶ್ ಶೆಟ್ಟಿ, ನಿಲಕಂಠರಾವ್, ದೀಪಾ ಶೆಟ್ಟಿ, ಅಕ್ಷಯ್‌ರಾಜ್ ಉಪಸ್ಥಿತರಿದ್ದರು ಶಾಲಾ ಮುಖ್ಯಾಪಾದ್ಯಾಯಿನಿ ಸುಮಿತ್ರ ವಂದಿಸಿದರು.

Mulki 30011407

Bhagyawan Sanil

Comments

comments

Comments are closed.

Read previous post:
ಕೋಟೆಕೇರಿ ಶ್ರೀ ವೀರಮಾರುತಿ -ಶಿಲಾನ್ಯಾಸ

ಮೂಲ್ಕಿ: ಕೋಟೆಕೇರಿ ಶ್ರೀ ವೀರಮಾರುತಿ ದೇವಸ್ಥಾನದ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಶಿಲಾನ್ಯಾಸ ಕಾರ್ಯಕ್ರಮವು ಪ್ರಧಾನ ಅರ್ಚಕರಾದ ವೇದಮೂರ್ತಿ ಎಂ.ಅನಿಲ್ ಭಟ್‌ರವರ ಪೌರೋಹಿತ್ಯದಲ್ಲಿ ಜರುಗಿತು. ಈ ಸಂದರ್ಭ ಜೀರ್ಣೋದ್ಧಾರ...

Close