ಕಿನ್ನಿಗೋಳಿ ಗ್ರಾಮ ಸಭೆ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 3 ನೇ ವಾರ್ಡ್‌ನಲ್ಲಿ ಗ್ರಾಮಸ್ಥರ ಅರಿವಿಗೆ ಬಾರದಂತೆ ಗ್ರಾ. ಪಂ. ಸದಸ್ಯರು ತಮ್ಮ ಮನೆಯ ದಾರಿಗೆ ಕಾಂಕ್ರಿಟ್ ರಸ್ತೆ ಮಾಡಿದ ಬಗ್ಗೆ ಕಿನ್ನಿಗೋಳಿ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತ ಪಡಿಸಿದರು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿಯ ಗ್ರಾಮ ಸಭೆ ಗುರುವಾರ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲ ಪಿ. ಹೆಗ್ಡೆ ಅಧ್ಯಕ್ಷತೆಯಲ್ಲಿ ಕಿನ್ನಿಗೋಳಿ ಚರ್ಚ್ ಸಭಾಭವನದಲ್ಲಿ ನಡೆಯಿತು.
ವಾರ್ಡ್ 3 ರಲ್ಲಿ ಬಹಳ ಹಿಂದಿನಿಂದ ಡಾಮಾರೀಕರಣಕ್ಕೆ ಬೇಡಿಕೆ ಇರುವ ಕುಂರ್ಬಿಲ್ ರಸ್ತೆ ಹಾಗೂ ಬಾಬಕೋಡಿ ಕೊಂಡಿ ಕೂಡು ರಸ್ತೆಗಳಿಗೆ ಪ್ರಾಶಸ್ತ್ಯ ನೀಡದೆ ಕೇವಲ ಬಡಾವಣೆಯ ಬೆರಳೆಣಿಕೆಯ ಗ್ರಾಮಸ್ಥರಿಗೆ ಹಾಗೂ ಪಂಚಾಯಿತಿ ಸದಸ್ಯೆಯ ಮನೆಯ ರಸ್ತೆಗೆ ಕಾಂಕ್ರೀಕರಣ ಮಾಡಿದ ಕಾರಣ ಎನು? ನವನಗರ ರಸ್ತೆಯ ಜಾಗಕ್ಕೆ ಸಂಬಂಧಪಟ್ಟ ಖಾಸಗಿ ಭೂಮಿ ಮಾಲೀಕರು ಇನ್ನೂ ಪಂಚಾಯಿತಿಗೆ ದಾನ ಪತ್ರ ಕೊಟಿರುವುದಿಲ್ಲ ಈ ವಾರ್ಡಿನ ಪಂಚಾಯಿತಿ ಸದಸ್ಯೆ ರಾಜೀನಾಮೆ ನೀಡಬೇಕೆಂದು ವಾರ್ಡ್‌ನ ಗ್ರಾಮಸ್ಥರು ಪಟ್ಟು ಹಿಡಿದರು.

ನೆನೆಗುದಿಗೆ ಬಿದ್ದ ಸ್ವಚ್ಥ ಗ್ರಾಮ ಯೋಜನೆ :
ಕಿನ್ನಿಗೋಳಿಯ ಬಾರ್, ಹೋಟೆಲ್ ಹಾಗೂ ವಾಣಿಜ್ಯ ಸಂಕೀರ್ಣಗಳ ತ್ಯಾಜ್ಯ, ಮಲೀನ ನೀರು ಕಿನ್ನಿಗೋಳಿ ಬಸ್ ನಿಲ್ದಾಣದ ಪಕ್ಕದಲ್ಲಿ ಹರಿದು ಹೋಗಿ ಬಿತ್ತುಲ್ ಪರಿಸರದಲ್ಲಿ ಶೇಖರಣೆಗೊಳ್ಳುತ್ತದೆ. ಈ ಪರಿಸ್ಥಿಯಿಂದಾಗಿ ಪರಿಸರದ ಮನೆಗಳ ಬಾವಿಗಳು ಕಲುಷಿತಗೊಂಡಿವೆ. ಹಲವಾರು ವರ್ಷಗಳಿಂದಿರುವ ಸಮಸ್ಯೆಗೆ ಇನ್ನಾದರೂ ಮುಕ್ತಿ ನೀಡಿ ಎಂದು ಗ್ರಾಮಸ್ಥ ರಾಫಾಯಲ್ ರೆಬೆಲ್ಲೊ ತಿಳಿಸಿದರು. ಈ ವಾರದೊಳಗೆ ಸಂಭಂದ ಪಟ್ಟವರಿಗೆ ನೋಟಿಸ್ ನೀಡಲಾಗುವುದು ಹಾಗೂ ಇಲ್ಲದೆ ಹೋದಲ್ಲಿ ಪರವಾನಿಗೆ ರದ್ದು ಪಡಿಸುವ ಕ್ರಮ ಕೈಗೊಳ್ಳಲಾಗುವುದು. ಪಂಚಾಯಿತಿ ಆಡಳಿತ ತಿಳಿಸಿತು.

ಕುಂಟುತ್ತಾ ಸಾಗುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ
ಕಿನ್ನಿಗೋಳಿ ಸಹಿತ 17 ಗ್ರಾಮಗಳಿಗೆ ಸುಮಾರು 17 ಕೋಟಿ ರೂ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಡಿಸೆಂಬರ್ ತಿಂಗಳಲ್ಲಿ ಕಾಮಗಾರಿ ಮುಗಿಸಲಾಗುವುದು ಎಂದು ಇಲಾಖಾಧಿಕಾರಿಗಳು ಪತ್ರಿಕೆಗಳಿಗೆ ಮಾಹಿತಿ ನೀಡಿದ್ದರೂ ಇವರೆಗೂ ಕಾರ್ಯಗತವಾಗಿಲ್ಲ ಯಾಕೇ ಎಂದು ಗಂಗಾಧರ ರಾವ್ ಕೇಳಿದ ಪ್ರಶ್ನೆಗೆ ಇಂಜೀನಿಯರ್ ವಿಶ್ವನಾಥ ಅವರ ಮಾನವೇ ಉತ್ತರವಗಿತ್ತು.

ಕಿನ್ನಿಗೋಳಿ ಗ್ರಾ. ಪಂ ಮಾರ್ಕೆಟ್‌ನಲ್ಲಿ ಎ. ಪಿ. ಎಂ. ಸಿ ಕಟ್ಟಡ ವಿದ್ದು ಎರಡು ವರ್ಷಗಳ ಹಿಂದೆ ಕೃಷಿಕರಿಗೆ ತರಕಾರಿ ಕೃಷಿ ಉತ್ಪನ್ನಗಳನ್ನು ಮಾರಾಟಕ್ಕೆ ಉಚಿತ ವ್ಯವಸ್ಥೆ ಮಾಡಲಾಗಿತ್ತು, ಕೆಲವು ತೊಂದರೆಗಳಿಂದಾಗಿ ನೊಂದು ಬೇಸತ್ತ ಸಾವಯವ ಕೃಷಿಕರು ಈಗ ರಸ್ತೆಬದಿಯಲ್ಲಿಯೇ ಮಾರಾಟ ಮಾಡುತ್ತಾರೆ ಕೃಷಿ ಉತ್ಪನ್ನ ಮಾರುಕಟ್ಟೆಗೆ ಮೀಸಲಿರಿಸಿದ ಸ್ಥಳದಲ್ಲಿ ಅನ್ಯ ಉದ್ದೇಶಕ್ಕೆ ಬಳಸಲು ಬಿಡದೆ ಸೂಕ್ತ ಕ್ರಮ ಜರುಗಿಸಿ ಎಂದು ಗ್ರಾಮಸ್ಥರು ವಿನಂತಿಸಿದರು.

ಪ್ರಧಾನ ಮಂತ್ರಿಗ್ರಾಮೀಣ ಸಡಕ್ ಯೋಜನೆಯಲ್ಲಿ ನಿರ್ಮಾಣಗೊಂಡ ಕಿನ್ನಿಗೋಳಿ ಬಸ್ ನಿಲ್ದಾಣದಿಂದ ಗೋಳಿಜೋರವರೆಗಿನ ಕಾಂಕ್ರೀಟ್ ರಸ್ತೆಗೆ ಚರಂಡಿ ನಿರ್ಮಾಣ ಇನ್ನೂ ಆಗಿಲ್ಲ ? ಯೋಜನೆಯಲ್ಲಿ ಎರಡು ಬದಿಯ ಚರಂಡಿ ನಿರ್ಮಾಣದ ಪ್ರಸ್ತಾಪವಿತ್ತು. ರಸ್ತೆ ಪೂರ್ಣಗೊಂಡು ವರ್ಷಕಳೆದರೂ ಚರಂಡಿ ನಿರ್ಮಾಣವಾಗಿಲ್ಲ ಮಳೆ ನೀರು ರಸ್ತೆಯಲ್ಲಿ ಹರಿದು ಹೋಗುವ ಪರಿಸ್ಥಿತಿ ಒದಗಿದೆ ಎಂದು ಗ್ರಾಮಸ್ಥ ಪ್ರಾನ್ಸಿಸ್ ಸೆರಾವೂ ಕೇಳಿದರು.

ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗಡಿಗಳನ್ನು ಕೆಲವು ವರ್ಷಗಳಿಂದ ಏಲಂ ಮಾಡುವುದಿಲ್ಲ. ಒಳ ಬಾಡಿಗೆಗಳಲ್ಲಿ ಬೇರೆ ಬೇರೆ ಜನರು ವ್ಯಾಪಾರ ಮಾಡುತ್ತಾರೆ. ಗುರುವಾರದ ಸಂತೆ ದಿನ ಮದರ್ ತೆರೆಜಾ ರಸ್ತೆಯ ಬದಿಯಲ್ಲಿ ತರಕಾರಿ ರಾಶಿ ಹಾಕಿ ವ್ಯಾಪಾರ ಮಾಡುವುದರಿಂದ ಸಾರ್ವಜನಿಕರಿಗೆ ವಾಹನ ಹಾಗೂ ನಡೆದಾಡಲು ತೊಂದರೆಯಾಗಿದೆ ಎಂದು ಗ್ರಮಸ್ಥರು ಹೇಳಿದಾಗ ಮುಂದಿನ ದಿನಗಳಲ್ಲಿ ಅಂಗಡಿಗಳನ್ನು ಪ್ರತಿ ವರ್ಷ ಏಲಂ ಮಾಡಲಾಗುವುದು ರಸ್ತೆ ಬದಿ ವ್ಯಾಪಾರದ ಬಗ್ಗೆ ಮುಂದಿನ ವಾರವೇ ಸರಿಪಡಿಸಲಾಗುವುದು ಎಂದು ಪಿಡಿಒ ಅರುಣ್ ಪ್ರದೀಪ್ ಡಿಸೋಜ ಹಾಗೂ ಗಾಮ ಪಂಚಾಯಿತಿ ಅಧ್ಯಕ್ಷೆ ತಿಳಿಸಿದರು.

ರಿಕ್ಷಾ ಪಾರ್ಕ್ ಸಮಸ್ಯೆ, ಮನೆ ತೆರಿಗೆಯಲ್ಲಿ ತಾರತಮ್ಯ, ಅಂಗರಗುಡ್ಡೆ ಪರಿಸರದ ಮನೆಗಳಿಗೆ ಹಕ್ಕು ಪತ್ರ, ಕುಡಿಯುವ ನೀರಿನ ಸಮಸ್ಯೆ,, ತಾಳಿಪಾಡಿಯಲ್ಲಿ ರುದ್ರ ಭೂಮಿಗೆ ಜಾಗ ಹಾಗೂ ಸರಕಾರದ ಯೋಜನೆಗಳ, ಸವಲತ್ತುಗಳ ಬಗ್ಗೆ ಗ್ರಾಮಸ್ಥರಿಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ ಯಾಕೇ ಇತ್ಯಾದಿ ವಿಷಯಗಳು ಗ್ರಾಮ ಸಭೆಯಲ್ಲಿ ಆರೋಗ್ಯಕರವಾಗಿ ಚರ್ಚೆಗೊಂಡವು.
ಕೃಷಿ ಇಲಾಖೆಯ ರೊಹಿದಾಸ್ ನೋಡಲ್ ಅದಿಕಾರಿಯಾಗಿ ಕಾರ್ಯನಿರ್ವಹಿದರು. ಗ್ರಾಮ ಪಂ. ಉಪಾಧ್ಯಕ್ಷ ಜೆರೋಮ್ ಜಾನ್ಸನ್ ಡಿಸೋಜ, ಕಾರ್ಯದರ್ಶಿ ಒಲಿವರ್ ಓಸ್ವಾಲ್ದ್ ಪಿಂಟೊ ಮೆಸ್ಕಾಂ ಇಲಾಖೆಯ ಇಲ್ಯಾಸ್ ಮತ್ತಿತರರು. ಉಪಸ್ಥಿತರಿದ್ದರು.

Kinnigoli 31011401 Kinnigoli 31011402

Comments

comments

Comments are closed.

Read previous post:
ಪಂಚಾಯತ್ ಅಭಿವೃದ್ಧಿ ತಂಡ ಗ್ರಾ. ಪಂ. ಭೇಟಿ

ಮೂಲ್ಕಿ: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್‌ಗಳಿಗೆ ನಿಯೋಜಿಸಲಾಗುವ ನೂತನ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರ ಅಧ್ಯಾಯನ ತಂಡವು ಪುತ್ತೂರಿನ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಮಹಮ್ಮದ್‌ರವರ...

Close