ರಸ್ತೆ ಕಾಮಗಾರಿಗೆ ಚಿರತೆ ಉಪಟಳ

ಕಿನ್ನಿಗೋಳಿ : ಕಳೆದೊಂದು ತಿಂಗಳಿನಿಂದ ನಾಪತ್ತೆಯಾದ ಚಿರತೆ ಮತ್ತು ಎರಡು ಮರಿಗಳು ಪುನರೂರು ಹಾಗೂ ಕೊಲ್ಲೂರು ಪದವು ಪರಿಸರದಲ್ಲಿ ಕಳೆದ ನಾಲ್ಕು ದಿನಗಳಿಂದ ಸ್ಥಳೀಯರಿಗೆ ಕಾಣ ಸಿಗುತ್ತದೆ.
ಕಳೆದ ಐದು ದಿನಗಳ ಹಿಂದೆ ಪುನರೂರು ದೆಂದೊಟ್ಟು ಬಳಿ ರಾತ್ರಿ ವೇಳೆ ಗದ್ದೆಯಲ್ಲಿ ನಡೆದು ಹೋಗುತ್ತಿದ್ದ ಸ್ಥಳೀಯರಾದ ವನಿತಾ ಹಾಗೂ ಅವರ ಮಗ ದೊಡ್ಡ ಗಾತ್ರದ ಚಿರತೆಯೊಂದನ್ನು ಕಂಡು ಸಮೀಪದ ಮನೆಯತ್ತ ಓಡಿ ರಕ್ಷಣೆ ಪಡೆದಿದ್ದರು.
ಕಳೆದ ಮೂರು ದಿನಗಳಿಂದ ಕೊಲ್ಲೂರು ಪದವು ಪರಿಸರದಲ್ಲಿ ರಾತ್ರಿ ಹತ್ತೂವರೆ ಗಂಟೆ ಸುಮಾರು ಚಿರತೆಯ ಕೂಗಿನ ಶಬ್ಬ ಕೇಳಿದ ಗ್ರಾಮಸ್ಥರು ನಿದ್ದೆ ಗೆಟ್ಟು ಚಿರತೆಯನ್ನು ಕಾಯುವ ಪರಿಸ್ಥಿತಿ ಬಂದಿದೆ. ಹಾನಗಲ್ ಮೂಲದ ಕೂಲಿ ಕಾರ್ಮಿಕರು ಕೊಲ್ಲೂರು ಬಳಿಯ ರಸ್ತೆ ದುರಸ್ಥಿ ಕಾಮಗಾರಿಗೆ ಬಂದಿದ್ದು ಬಯಲು ಮೈದಾನದಲ್ಲಿ ಡೇರೆ ಹಾಕಿ ಕೊಂಡಿದ್ದರು. ಡೇರೆಯ ಸಮೀಪವೇ ದಿನಾಲೂ ರಾತ್ರಿ ಹೊತ್ತು ಚಿರತೆ ಮತ್ತು ಎರಡು ಮರಿಗಳು ಬರುತ್ತಿದ್ದನ್ನು ಕಾರ್ಮಿಕರು ಕಂಡು ಭಯದಿಂದ ಬೆಳ್ಳಿಗೆವರೆಗೆ ಜಾಗರಣೆ ಕುಳಿತು ಕೊಂಡಿದ್ದರು ಇದೀಗ ಕೂಲಿ ಕಾರ್ಮಿಕರು ತಮ್ಮ ಮಕ್ಕಳೊಂದಿಗೆ ಜಾಗವನ್ನು ಖಾಲಿ ಮಾಡಿ ಬೇರೆ ಕಡೆ ವಲಸೆ ಹೋಗಿದ್ದಾರೆ. .

Kinnigoli 1021402 Kinnigoli 1021403

Comments

comments

Comments are closed.

Read previous post:
ನಂದಿನಿ ನದಿ ಮಾಲಿನ್ಯಗೊಳಿಸಬೇಡಿ

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪರಿಸರದ ಹೋಟೆಲ್ ಕಟ್ಟಡ ಹಾಗೂ ಕಲ್ಯಾಣ ಮಂಟಪಗಳಿಂದ ಮಲೀನ ನೀರು ನಂದಿನಿ ನದಿಗೆ ಬಿಡುವುದರಿಂದ ಕುಡಿಯುವ ನೀರು ಕಲುಷಿತ ಗೊಳ್ಳುವುದು...

Close