ರಸ್ತೆಗೆ ತೇಪೆ ಕಾರ್ಯ ಗ್ರಾಮಸ್ಥರಿಂದ ವಿರೋಧ

ಕಿನ್ನಿಗೋಳಿ : ಮುಲ್ಕಿ ಹೋಬಳಿಯ ಬಪ್ಪನಾಡು – ಕುಕ್ಕಟ್ಟೆ – ಏಳಿಂಜೆ ರಸ್ತೆ ನಾದುರಸ್ಥಿಯಲ್ಲಿದ್ದು ಶುಕ್ರವಾರ ಕೊಲ್ಲೂರು ಸಮೀಪದಲ್ಲಿ ಮಾತ್ರ ಡಾಮರೀಕರಣದ ತೇಪೆ ಹಚ್ಚುವ ಕಾರ್ಯ ಯಾಕೆ ಮಾಡುತ್ತಿದ್ದಾರೆಂದು ಸ್ಥಳೀಯ ಗ್ರಾಮಸ್ಥರು ಗಮನಿಸಿ ಶನಿವಾರ ಕೊಲ್ಲೂರು ಪದವಿನ ಬಳಿ ಕಾಮಗಾರಿ ತಡೆಹಿಡಿದು ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಈ ಪರಿಸರದ ಹಳ್ಳಿ ಜನತೆಗೆ ಮುಲ್ಕಿ ಕಿನ್ನಿಗೋಳಿ ಬಳ್ಕುಂಜೆ ಹಾಗೂ ಬೆಳ್ಮಣ್ ಮೊದಲಾದೆಡೆಗೆ ಸಂಪರ್ಕ ಕಲ್ಪಿಸುವ ಬಹುಗ್ರಾಮ ಸಂಪರ್ಕ ರಸ್ತೆಯಾಗಿದೆ. 1982 ರಲ್ಲಿ ಸಂಪೂರ್ಣ ಡಾಮಾರೀಕರಣಗೊಂಡಿದ್ದ ರಸ್ತೆ ಇದೀಗ ತೀರಾ ಹದಗೆಟ್ಟು ಹೋಗಿದ್ದು ಕಳೆದ ಐದು ವರ್ಷಗಳಿಂದ ಶೋಚನೀಯ ಸ್ಥಿತಿಯಲ್ಲೇ ಇದೆ. ತೇಪೆ ಹಚ್ಚಿ ಜನರನ್ನು ಸಮಾಧಾನ ಪಡಿಸುವ ನಾಟಕ ಸಲ್ಲದು ರಸ್ತೆಯನ್ನು ಎರಡು ವಾಹನಗಳು ಹಾದು ಹೋಗುವ ಹಾಗೆ ಅಗಲಗೊಳಿಸಿ ಪೂರ್ತಿ ಡಾಮರು ಹಾಕಬೇಕು ಕೇವಲ ತೇಪೆ ಕಾರ್ಯ ಮಾಡುವುದು ಬೇಡ ಎಂದು ಗ್ರಾಮಸ್ಥರು ಸಂಬಂಧ ಪಟ್ಟ ಇಲಾಖೆಗಳನ್ನು ಹಾಗೂ ಜನಪ್ರತಿನಿಧಿಗಳನ್ನು ವಿನಂತಿಸಿ ಮನವಿಯನ್ನು ಮೂಲ್ಕಿ ಉಪತಹಶೀಲ್ದಾರಿಗೆ ನೀಡಿದರು.
ಸ್ಥಳಕ್ಕಾಗಮಿಸಿದ ಬಳ್ಕುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಪುತ್ರನ್ ಮಾತನಾಡಿ ರಸ್ತೆ ಕಾಮಗಾರಿ ಬಗ್ಗೆ ಪಂಚಾಯಿತಿಗೆ ಯಾವುದೇ ಮಾಹಿತಿ ಬಂದಿರುವುದಿಲ್ಲ. ಕಿಲ್ಪಾಡಿ, ಬಳ್ಕುಂಜೆ, ಕಿನ್ನಿಗೋಳಿ, ಐಕಳ ಗ್ರಾಮಕ್ಕೆ ಸಂಬಂಧ ಪಟ್ಟ ಜನರ ಸಮಸ್ಯೆಗೆ ಇಲಾಖಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತ್ವರಿತವಾಗಿ ಸ್ಪಂದಿಸುತ್ತಾರೆ ಎಂಬ ಆಶಯವಿದೆ ಎಂದು ಹೇಳಿದರು.
ಮೂರು ಬಸ್‌ಗಳು ಈ ಮಾರ್ಗದಲ್ಲಿ ಸಂಚರಿಸುತ್ತಿದ್ದು ರಸ್ತೆ ದುರಸ್ತಿಯಾಗದಿದ್ದಲ್ಲಿ ಮುಂದಿನ ಮಳೆಗಾಲದಲ್ಲಿ ನಮಗೆ ಬಸ್ ಓಡಿಸಲು ಅಸಾಧ್ಯ ಎಂದು ಬಸ್ ಮಾಲಕರು ತಿಳಿಸಿದ್ದಾರೆ.
ಲೋಕಸಭೆ ಚುನಾವಣೆ ಬಹಿಷ್ಕಾರ ???
ರಸ್ತೆ ಪೂರ್ಣ ಡಾಮಾರೀಕರಣಗೊಳ್ಳದ್ದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಿ ಲೋಕಸಭಾ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಗ್ರಾಮಸ್ಥರಾದ ಬಿಪಿನ್ ಪ್ರಸಾದ್, ದೇವದಾಸ ಮಲ್ಯ, ಆನಂದ, ರಿಕ್ಷಾ, ಕಾರು ಹಾಗೂ ಬಸ್ ಚಾಲಕ ಮಾಲಕರ ಸಂಘದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Kinnigoli 1021404

Comments

comments

Comments are closed.

Read previous post:
ರಸ್ತೆ ಕಾಮಗಾರಿಗೆ ಚಿರತೆ ಉಪಟಳ

ಕಿನ್ನಿಗೋಳಿ : ಕಳೆದೊಂದು ತಿಂಗಳಿನಿಂದ ನಾಪತ್ತೆಯಾದ ಚಿರತೆ ಮತ್ತು ಎರಡು ಮರಿಗಳು ಪುನರೂರು ಹಾಗೂ ಕೊಲ್ಲೂರು ಪದವು ಪರಿಸರದಲ್ಲಿ ಕಳೆದ ನಾಲ್ಕು ದಿನಗಳಿಂದ ಸ್ಥಳೀಯರಿಗೆ ಕಾಣ ಸಿಗುತ್ತದೆ. ಕಳೆದ...

Close