ಕಿನ್ನಿಗೋಳಿ : ಈದ್ ಮಿಲಾದ್ ಸೌಹಾರ್ಧ ಸಮಾವೇಶ

ಕಿನ್ನಿಗೋಳಿ: ಧರ್ಮದ ತಿರುಳನ್ನು ಅರಿತು ಸಮಾಜದಲ್ಲಿ ಸೌರ್ಹಾರ್ದಯುತ ಜೀವನ ನಡೆಸಬೇಕು ಎಂದು ಕೆ.ಜೆ.ಎಂ. ಶಾಂತಿನಗರ ತಾಳಿಪಾಡಿಯ ಖತೀಬ ಪಿ.ಜೆ ಅಹ್ಮದ್ ಮದನಿ ಹೇಳಿದರು.
ಕಿನ್ನಿಗೋಳಿ ಸಾರ್ವಜನಿಕ ಗಣೇಶೋತ್ಸವ ಮಂಟಪದಲ್ಲಿ ಕಿನ್ನಿಗೋಳಿ ಈದ್ ಮಿಲಾದ್ ಸೌಹಾರ್ದ ಸಮಿತಿ ಇದರ ಆಶ್ರಯದಲ್ಲಿ ಶನಿವಾರ ನಡೆದ ಈದ್ ಮಿಲಾದ್ ಸೌಹಾರ್ದ ಸಮಾವೇಶದಲ್ಲಿ ಮಾತಾನಾಡಿದರು.
ಕಿನ್ನಿಗೋಳಿ ಚರ್ಚ್ ಧರ್ಮಗುರು ಫಾ| ಅಲ್ಫ್ರೆಡ್ ಜೆ. ಪಿಂಟೋ ಹಾಗೂ ಕಟೀಲು ದೇವಳ ಅರ್ಚಕ ಲಕ್ಷ್ಮೀ ನಾರಾಯಣ ಆಸ್ರಣ್ಣ ಶುಭಹಾರೈಸಿದರು.
ಪುನರೂರು ಮಸೀದಿ ಅದ್ಯಕ್ಷ ಟಿ. ಮಯ್ಯದ್ದಿ , ಕಿನ್ನಿಗೋಳಿ ಎಂ.ಜೆ.ಎಂ. ಅಧ್ಯಕ್ಷ ಹಾಜಿ ಕೆ.ಎ.ರಜಾಕ್, ಶಾಂತಿನಗರ ಕೆ.ಜೆ.ಎಂ. ಅಧ್ಯಕ್ಷ ಟಿ. ಎಚ್. ಮಯ್ಯದ್ದಿ , ಪಕ್ಷಿಕೆರೆ ಬಿ.ಜೆ.ಎಂ. ಅಧ್ಯಕ್ಷ ಕೆ.ಯು. ಮಹಮ್ಮದ್, ಕಿನ್ನಿಗೋಳಿ ಜುಮ್ಮಾ ಮಸೀದಿ ಖತೀಬ ಅಬ್ದುಲ್ ಲತೀಫ್ ಸಖಾಫಿ, ಶಾಂತಿನಗರ ತಾಳಿಪಾಡಿ ಖತೀಬ ಎಸ್. ಎ. ಹಸನ್ ಸಖಾಫಿ, ಬಿ.ಜೆ.ಎಂ. ಪಕ್ಷಿಕೆರೆ ಖತೀಬ ಆದಂ ಅಮಾನಿ ಮತ್ತಿತರರು ಉಪಸ್ಥಿತರಿದ್ದರು.
ಈದ್ ಮಿಲಾದ್ ಸೌಹಾರ್ದ ಸಮಿತಿ ಅಧ್ಯಕ್ಷ ಕೆ. ಎ. ಖಾದರ್ ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ಟಿ. ಕೆ. ಅಬ್ದುಲ್ ಕಾದರ್ ಸ್ವಾಗತಿಸಿದರು. ಕೆ. ಎ. ಅಬ್ದುಲ್ಲಾ ಕಾರ್ಯಕ್ರಮ ನಿರೂಪಿಸಿದರು.

Kinnigoli 02021404

Comments

comments

Comments are closed.

Read previous post:
ಪಡ್ರೆ: ಪುನಃಪ್ರತಿಷ್ಠಾಪನೆ

ಸುರತ್ಕಲ್: ಶ್ರೀನಿವಾಸನಗರ ಪಡ್ರೆ ಶ್ರೀ ಧೂಮಾವತಿ ದೈವಸ್ಥಾನವು ನವೀಕರಣಗೊಂಡಿದ್ದು, ಶ್ರೀ ಧೂಮಾವತಿ-ಬಂಟ ಮತ್ತು ಪರಿವಾರ ದೈವಗಳ ಪುನಃಪ್ರತಿಷ್ಠಾಪನಪೂರ್ವಕ ಬ್ರಹ್ಮಕಲಶಾಭಿಷೇಕದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮವನ್ನು ಕಟೀಲು ದೇವಳ...

Close