ಶ್ರೀ ನಾಗಬ್ರಹ್ಮ ಭಜನಾ ಮಂದಿರ ಉದ್ಘಾಟನೆ

ಕಿನ್ನಿಗೋಳಿ: ಯಾವುದೇ ಕಾರ್ಯ ಮಾಡುವಾಗ ಸಾಮಾಜಿಕ ಚಿಂತನೆ ಅಗತ್ಯ. ಸೌಹಾರ್ಧಯುತ ಜೀವನ ನಡೆಸಿದಾಗ ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲಸಲು ಸಾಧ್ಯ ಯುವಜನ ಕ್ರೀಡೆ ಹಾಗೂ ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು
ಭಾನುವಾರ ಕೆಮ್ರಾಲ್ ಹೊಸಕಾಡು ಶ್ರೀ ನಾಗಬ್ರಹ್ಮ ಭಜನಾ ಮಂಡಳಿಯ ನೂತನ ಭಜನಾ ಮಂದಿರ ಉದ್ಘಾಟನೆ ಮತ್ತು ಪ್ರತಿಷ್ಠಾ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳ ಆಡಳಿತ ಮೊಕ್ತೇಸರ ಸೀತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸುರಗಿರಿ ದೇವಳದ ಪ್ರಧಾನ ಅರ್ಚಕ ವಿಶ್ವೇಶ ಭಟ್ ಶುಭಾಶಂಸನೆಗೈದರು.
ಜಿ. ಪಂ. ಸದಸ್ಯ ಈಶ್ವರ್ ಕಟೀಲ್, ಮಾಜಿ ಜಿ. ಪಂ. ಸದಸ್ಯೆ ಶೈಲಾ ಸಿPರಾ, ಕೆ. ಪಿ. ಎಸ್. ಸಿ ರಾಜ್ಯ ಕಾರ್ಯದರ್ಶಿ ಗುರುರಾಜ ಎಸ್. ಪೂಜಾರಿ, ಉದ್ಯಮಿ ಅಶೋಕ್ ಶೆಣೈ, ಕೆಮ್ರಾಲ್ ಗ್ರಾ. ಪಂ. ಅಧ್ಯಕ್ಷೆ ರೇವತಿ ಶೆಟ್ಟಿಗಾರ್, ಗ್ರಾ. ಪಂ. ಸದಸ್ಯರಾದ ಜಯರಾಮ ಆಚಾರ್ಯ, ಮಯ್ಯದ್ದಿ , ಮಂದಿರ ನಿರ್ಮಾಣ ಸಮಿತಿಯ ಗೌರಾವಾಧ್ಯಕ್ಷ ಕೊರಗಪ್ಪ ಪೂಜಾರಿ, ಶ್ರೀನಿವಾಸ ಶೆಟ್ಟಿ , ಎಂ. ಕೆ. ಜಯ, ಮತ್ತಿತರರಿದ್ದರು.
ಸಮಿತಿ ಕಾರ್ಯಧ್ಯಕ್ಷ ಧನಂಜಯ ಪಿ. ಶೆಟ್ಟಿಗಾರ್ ಪ್ರಸ್ತಾವನೆಗೈದರು. ಮಂದಿರದ ಅಧ್ಯಕ್ಷ ಹರೀಶ್ ಕುಮಾರ್ ಸುವರ್ಣ ಸ್ವಾಗತಿಸಿದರು. ಉಪನ್ಯಾಸಕ ಜಯಾನಂದ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಹರೀಶ್ ಜೆ. ಸಾಲ್ಯಾನ್ ವಂದಿಸಿದರು.

Kinnigoli 02021401 Kinnigoli 02021402 Kinnigoli 02021403

Comments

comments

Comments are closed.

Read previous post:
ಕಿನ್ನಿಗೋಳಿ : ಈದ್ ಮಿಲಾದ್ ಸೌಹಾರ್ಧ ಸಮಾವೇಶ

ಕಿನ್ನಿಗೋಳಿ: ಧರ್ಮದ ತಿರುಳನ್ನು ಅರಿತು ಸಮಾಜದಲ್ಲಿ ಸೌರ್ಹಾರ್ದಯುತ ಜೀವನ ನಡೆಸಬೇಕು ಎಂದು ಕೆ.ಜೆ.ಎಂ. ಶಾಂತಿನಗರ ತಾಳಿಪಾಡಿಯ ಖತೀಬ ಪಿ.ಜೆ ಅಹ್ಮದ್ ಮದನಿ ಹೇಳಿದರು. ಕಿನ್ನಿಗೋಳಿ ಸಾರ್ವಜನಿಕ ಗಣೇಶೋತ್ಸವ ಮಂಟಪದಲ್ಲಿ...

Close