ಧಾರ್ಮಿಕ ಪ್ರಜ್ಞೆ ,ನಂಬಿಕೆ ಬಹು ಮುಖ್ಯ.

ಕಟೀಲು : ಧಾರ್ಮಿಕ ಪ್ರಜ್ಞೆ ,ನಂಬಿಕೆ ಬಹು ಮುಖ್ಯ. ಮರಗಿಡಗಳು ಹಾಗೂ ತಂದೆ ತಾಯಿಯರಲ್ಲಿ ದೇವರನ್ನು ಕಂಡುಕೊಳ್ಳಬೇಕು. ಎಂದು ಧಾರ್ಮಿಕ ಹಿತ ಚಿಂತಕ ಕೊಲಕಾಡಿ ವಾದಿರಾಜ ಉಪಾಧ್ಯಾಯ ಹೇಳಿದರು.
ನವರಾತ್ರಿ ಮೆರವಣಿಗೆ ಸೇವಾ ಸಮಿತಿ ಕೊಡೆತ್ತೂರು-ಕಟೀಲು ಮತ್ತು ನಂದಿನಿ ಯುವಕ ಮಂಡಲ ಕೊಡೆತ್ತೂರು ಹಾಗೂ ಊರ ಹತ್ತು ಸಮಸ್ತರ ಆಶ್ರಯದಲ್ಲಿ ಭಾನುವಾರ ಮಲ್ಲಿಗೆ ಅಂಗಡಿ ಬಳಿಯ ನಂದಿನಿ ಕಟ್ಟೆಯಲ್ಲಿ ಕೊಡೆತ್ತೂರು ನವರಾತ್ರಿ ಮೆರವಣಿಗೆ ಸೇವಾ ಸಮಿತಿ ಇದರ 2014ರ ಸಾಲಿನ ಸುವರ್ಣ ಮಹೋತ್ಸವ ಸಂಭ್ರಮದ ಅಂಗವಾಗಿ ಅಶ್ವತ್ಥ ವೃಕ್ಷದ ವಿವಾಹ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಶಿಬರೂರು ಮೂಡು ಮಠ ವಾಸುದೇವ ಆಚಾರ್ಯ ಆಶೀರ್ವಚನಗೈದರು. ಮಂಗಳೂರು ಸಂಸದ ನಳಿನ್ ಕುಮಾರ್ ಅಧ್ಯಕ್ಷತೆ ವಹಿಸಿದರು. ಈ ಸಂಧರ್ಭ ಯಕ್ಷಗಾನ ಕಲಾವಿದ ಸೀತಾರಾಮ್ ಕುಮಾರ್ ಕಟೀಲು ಅವರನ್ನು ಸನ್ಮಾನಿಸಲಾಯಿತು.
ಡಾ| ಶಶಿಕುಮಾರ್ ಕಟೀಲು, ಕಿನ್ನಿಗೋಳಿ ಯುಗಪುರುಷ ಸಂಪಾದಕ ಕೆ. ಭುವನಾಭಿರಾಮ ಉಡುಪ, ಕೊಡೆತ್ತೂರು ಭಂಡಾರಮನೆ ಜಯರಾಮ ಮುಕ್ಕಾಲ್ದಿ, ಜಿ. ಪಂ. ಸದಸ್ಯ ಈಶ್ವರ್ ಕಟೀಲ್, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ದನ ಕಿಲೆಂಜೂರು, ಮುಂಬಯಿ ನವರಾತ್ರಿ ಮೆರೆವಣಿಗೆ ಸೇವಾ ಸಮಿತಿ ಗೌರಾವಾಧ್ಯಕ್ಷ ನಿರಂಜನ ಶೆಟ್ಟಿ, ಕೊಡೆತ್ತೂರು ನವರಾತ್ರಿ ಮೆರವಣಿಗೆ ಸೇವಾ ಸಮಿತಿ ಅಧ್ಯಕ್ಷ ಗಣೇಶ ಶೆಟ್ಟಿ, ನಂದಿನಿ ಯುವಕ ಮಂಡಲ ಅಧ್ಯಕ್ಷ ಅನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದರು. ಅಭಿಲಾಷ್ ಶೆಟ್ಟಿ ವಂದಿಸಿದರು. ಗುರುರಾಜ್ ಕಾರ್ಯಕ್ರಮ ನಿರೂಪಿಸಿದರು.

Kinnigoli 03021431 Kinnigoli 03021432 Kinnigoli 03021433 Kinnigoli 03021434 Kinnigoli 03021435 Kinnigoli 03021436

Comments

comments

Comments are closed.

Read previous post:
Kinnigoli 03021421
ಮಲ್ಲಿಗೆ ಅಂಗಡಿ ಅಶ್ವತ್ಥ ವೃಕ್ಷದ ವಿವಾಹ ಮಹೋತ್ಸವ

ಕಿನ್ನಿಗೋಳಿ : ನವರಾತ್ರಿ ಮೆರವಣಿಗೆ ಸೇವಾ ಸಮಿತಿ ಕೊಡೆತ್ತೂರು-ಕಟೀಲು ಮತ್ತು ನಂದಿನಿ ಯುವಕ ಮಂಡಲ ಕೊಡೆತ್ತೂರು ಹಾಗೂ ಊರ ಹತ್ತು ಸಮಸ್ತರ ಆಶ್ರಯದಲ್ಲಿ ಮಲ್ಲಿಗೆ ಅಂಗಡಿಯ ನಂದಿನಿ ಕಟ್ಟೆಯಲ್ಲಿ...

Close