ಈಜಲು ಬಂದ ಬಾಲಕನ ಸಾವು

ಕಿನ್ನಿಗೋಳಿ : ಕೆಂಚನಕೆರೆಯ ಕೆರೆಯಲ್ಲಿ ಈಜಲು ಬಂದ ಬಾಲಕ ಅಕ್ಷಯ ( 15 ) ಮುಳುಗಿ ಮೃತ ಪಟ್ಟ ಘಟನೆ ಭಾನುವಾರ ಸಂಭವಿಸಿದ್ದು , ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕಲ್ಲಹಳ್ಳಿಯ ಇಂದ್ರೇಶ ಹಾಗೂ ವಿನೋದ ದಂಪತಿಗಳ ಹಿರಿಯ ಮಗನಾದ ಅಕ್ಷಯ ೬ ನೇ ತರಗತಿಯಿಂದ ಮೂಲ್ಕಿ ಸದಾಶಿವ ನಗರದ ಹಾಸ್ಟಲ್‌ನಲ್ಲಿ ಇದ್ದು ಪ್ರಸ್ತುತ ಕಾರ್ನಾಡ್ ಸಿ. ಎಸ್. ಐ ಶಾಲೆಯಲ್ಲಿ ೯ ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದನು.

ಮೂಲ್ಕಿ ಸದಾಶಿವ ನಗರದ ಹಾಸ್ಟೆಲ್‌ನಲ್ಲಿ ಕಲಿಯುತ್ತಿದ್ದ ಬಾಲಕರಾದ ಅರುಣ್, ಗಣೇಶ್, ಕಿರಣ್, ಹನುಮಂತ , ಅಕ್ಷಯ ಸೇರಿ ಭಾನುವಾರ ಮಧ್ಯಾಹ್ನ ಊಟ ಮುಗಿಸಿ ಕಾರ್ನಾಡಿಗೆ ಹೋಗಿ ಬರುವುದಾಗಿ ಹಾಸ್ಟೆಲ್‌ನ ಅಡುಗೆಯವರಲ್ಲಿ ತಿಳಿಸಿ ಬಂದವರು ನೇರವಾಗಿ ಕೆಂಚನಕೆರೆಯ ಕೆರೆಗೆ ಈಜಲು ಬಂದಿದ್ದಾರೆ. ಅಲ್ಲಿ ಅಕ್ಷಯ ಸರಿಯಾಗಿ ಈಜಲು ಬರುತ್ತಿರಲಿಲ್ಲ ಆದರೂ ಕೆರೆಗೆ ಈಜಲು ಇಳಿಯುತ್ತಲೇ ಮುಳುಗಿದ್ದಾನೆ ಅವನ ಜೊತೆಗಾರರು ಬೊಬ್ಬೆ ಹೊಡೆದಾಗ ಅಕ್ಕಪಕ್ಕದವರು ಹಾಗೂ ರಸ್ತೆಯಲ್ಲಿ ಹೋಗುತ್ತಿದ್ದವರು ಕೆರೆಯಲ್ಲಿ ಮುಳುಗಿದವನನ್ನು ಮೇಲೆಕ್ಕೆ ಎತ್ತಿ ಆಸ್ಪತ್ರೆಗೆ ಸಾಗಿಸುವ ಸಂದರ್ಭ ಮೃತಪಟ್ಟಿರುತ್ತಾನೆ ಎಂದು ಅವನ ಸಹಪಾಠಿಗಳು ತಿಳಿಸಿದ್ದಾರೆ.

ಈ ಹಿಂದೆಯೂ ಸದಾಶಿವ ನಗರ ಪರಿಸರದ ಮಕ್ಕಳು, ಶಾಲಾ ವಿದ್ಯಾರ್ಥಿಗಳು ಈಜಲೂ ಕೆಂಚನಕೆರೆಗೆ ಬರುತ್ತಿದ್ದರು ಈ ಸಂದರ್ಭ ನಾಗರಿಕರು ಮಕ್ಕಳಿಗೆ ಜಾಗರೂಕತೆಯ ಬಗ್ಗೆ ಎಚ್ಚರಿಕೆ ನೀಡಿದ್ದರು.

Kinnigoli 03021438 Kinnigoli 03021439

Comments

comments

Comments are closed.

Read previous post:
Kinnigoli 03021432
ಧಾರ್ಮಿಕ ಪ್ರಜ್ಞೆ ,ನಂಬಿಕೆ ಬಹು ಮುಖ್ಯ.

ಕಟೀಲು : ಧಾರ್ಮಿಕ ಪ್ರಜ್ಞೆ ,ನಂಬಿಕೆ ಬಹು ಮುಖ್ಯ. ಮರಗಿಡಗಳು ಹಾಗೂ ತಂದೆ ತಾಯಿಯರಲ್ಲಿ ದೇವರನ್ನು ಕಂಡುಕೊಳ್ಳಬೇಕು. ಎಂದು ಧಾರ್ಮಿಕ ಹಿತ ಚಿಂತಕ ಕೊಲಕಾಡಿ ವಾದಿರಾಜ ಉಪಾಧ್ಯಾಯ ಹೇಳಿದರು....

Close