ಮೆನ್ನಬೆಟ್ಟು-ಶೌಚ ಶುದ್ಧೀಕರಣ ಘಟಕ

ಕಿನ್ನಿಗೋಳಿ: ದಕ್ಷಿಣ ಕನ್ನಡ ಜಿಲ್ಲೆ ಆರ್ಗಾನಿಕ್ ಜಿಲ್ಲೆ ಎಂದು ಘೋಷಣೆಯಾಗಿದ್ದು ಮಂಗಳೂರು ತಾಲೂಕಿನ ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯಲ್ಲಿ ಜಿ.ಎಮ್.ಎಸ್. ಟೆಕ್ನಾಲಜಿ ಮೈಸೂರು ಮತ್ತು ಭಗೀರಥ ಸಂಸ್ಥೆಯ ಮಾರ್ಗದರ್ಶನದಿಂದ ಜಪಾನ್ ತಂತ್ರಜ್ಞಾನದ ಶೌಚ ಶುದ್ಧೀಕರಣ ಘಟಕ ಆರಂಭಗೊಂಡಿದೆ.
ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಕರ್ನಾಟಕ ರಾಜ್ಯದಲ್ಲೇ ಪ್ರಥಮವಾಗಿ ಶೌಚ ಶುದ್ಧೀಕರಣ ಘಟಕ ಹೊಂದಿದ ಗ್ರಾಮೀಣ ಮಟ್ಟದ ಪಂಚಾಯಿತಿ ಆಗಿದೆ. ಇತರ ಪಂಚಾಯಿತಿ, ನಗರ ಪಂಚಾಯಿತಿ ಹಾಗೂ ಮಹಾನಗರಪಾಲಿಕೆಗಳಿಗೂ ಮಾದರಿಯಾಗಿದೆ.

ಈ ಘಟಕ ಕೆನಡಾ, ಆಸ್ಟ್ರೇಲಿಯಾ, ರಷ್ಯಾ ಮತ್ತು ಚೈನಾ ದೇಶಗಳಲ್ಲಿ ಹಾಗೂ ಗುಜರಾತ್, ಹರಿಯಾಣ, ರಾಜಸ್ಥಾನ ಮುಂತಾದ ಕಡೆಗಳಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಸುಮಾರು ಒಂದು ಲಕ್ಷ ರೂ. ವೆಚ್ಚದಲ್ಲಿ ಶೌಚ ಶುದ್ಧೀಕರಣ ಘಟಕ ಆರಂಭಿಸಲಾಗಿದ್ದು ಮೈಸೂರಿನ ಜಿ.ಎಮ್.ಎಸ್. ಟೆಕ್ನಾಲಜಿ ಇದರ ಉಸ್ತುವಾರಿ ತೆಗೆದುಕೊಂಡಿದೆ. ಮುಲ್ಕಿ ಹೊಬಳಿಯ ಅಪಾರ್ಟ್‌ಮೆಂಟ್ ಸಾರ್ವಜನಿಕ ಶೌಚಾಲಯಗಳು ಅಲ್ಲದೆ ಇನ್ನಿತರ ದ್ರವ ತ್ಯಾಜ್ಯಗಳ ವಿಲೇವಾರಿಗೆ ಇದರಿಂದ ತುಂಬಾ ಉಪಯೋಗವಾಗಲಿದೆ. ಈ ಘಟಕ ರಾಜ್ಯಕ್ಕೆ ಮಾದರಿಯಾಗಲಿದೆ.
ಜಪಾನಿನ ಎಂಜಿನಿಯರ್ ಟಾಕೊರ ಒಂದು ವಾರಗಳ ಕಾಲ ಇಲ್ಲಿಯೇ ಇದ್ದು ಘಟಕದ ಚಾಲನೆಗೆ ಶ್ರಮ ವಹಿಸಿದ್ದಾರೆ. ಇದಕ್ಕೆ ಬಳಸುವ ದ್ರಾವಣವನ್ನು ಇಲ್ಲಿಯೇ ತಯಾರಿಸಲಾಗುತ್ತದೆ. 100 ಲೀ ನೀರಿಗೆ 1.5 ಲೀ ಹಾಲು, 300 ಗ್ರಾ. ಉಪ್ಪು ಹಾಗೂ 150 ಗ್ರಾಂ ಜೆ.ಎಮ್. ಎಸ್. ಬಯೋ ಎನ್‌ಜೈಮ್ (ಬ್ಯಾಕ್ಟೀರಿಯಾ) ಪುಡಿಯನ್ನು ಸೇರಿಸಿ ಇಪ್ಪತ್ತಾಲ್ಕು ಗಂಟೆ ದಿನ ಇಟ್ಟರೆ ದ್ರಾವಣ ತಯಾರಾಗುತ್ತದೆ. ಹಾಲನ್ನು ಸೇರಿಸುದರಿಂದ ಬ್ಯಾಕ್ಟೀರಿಯಗಳು ಹೆಚ್ಚು ಉತ್ಪತ್ತಿಯಾಗಿ ಶುದ್ದೀಕರಣ ಕ್ರಿಯೆಗೆ ಬಹಳ ಸಹಕಾರಿಯಾಗುತ್ತದೆ.
ಘಟಕದಲ್ಲಿ ಸುಮಾರು 3,000 ಲೀಟರ್ ಸಾಮರ್ಥ್ಯದ ಮೂರು ಟ್ಯಾಂಕ್ ಇಡಲಾಗಿದ್ದು, ಸಕ್ಕಿಂಗ್ ಯಂತ್ರದ ಮೂಲಕ ತಂದ ಶೌಚ ತ್ಯಾಜ್ಯವನ್ನು ಮೊದಲನೆ ಟ್ಯಾಂಕ್‌ಗೆ ತುಂಬಿಸಲಾಗುತ್ತದೆ 24 ಗಂಟೆಯ ಬಳಿಕ ಅದಕ್ಕೆ ದ್ರಾವಣವನ್ನು ಹಾಕಲಾಗುತ್ತದೆ. ವೈಜ್ವಾನಿಕ ಕ್ರಿಯೆಯಿಂದ ನೀರಿನಲ್ಲಿರುವ ಬೇಡವಾದ ರಾಸಾಯನಿಕ ವಸ್ತುಗಳನ್ನು ಮತ್ತು ಜೈವಿಕ ಕಶ್ಮಲಗಳನ್ನು ತೆಗೆದು ಶುದ್ದಗೊಳಿಸುತ್ತದೆ. ಬಳಿಕ 2 ನೇ ಟ್ಯಾಂಕ್ ಅಲ್ಲಿಂದ 3ನೇ ಟ್ಯಾಂಕ್ ಗೆ ಬಂದು ಶುದ್ದ ನೀರು ಹೊರ ಬರುತ್ತದೆ. ಈ ಪ್ರಕ್ರಿಯೆಗೆ 10 ದಿನ ತೆಗೆದುಕೊಳ್ಳುತ್ತದೆ. ನೀರನ್ನು ಕೃಷಿಗೆ ಹಾಗೂ ಗಿಡ ಮರಗಳಿಗೆ ಬಳಸಬಹುದಾಗಿದೆ. ಟ್ಯಾಂಕ್‌ನ ತಳ ಬಾಗದಲ್ಲಿ ಶೇಖರಣೆಗೊಂಡ ಗಟ್ಟಿ ತ್ಯಾಜ್ಯವನ್ನು ಪೈಪ್‌ನ ಮೂಲಕ ಶೇಖರಿಸಿ ಆರ್ಗಾನಿಕ್ ಗೊಬ್ಬರವಾಗಿ ಬಳಸಿಕೊಳ್ಳಬಹುದು.

Kinnigoli 03021401 Kinnigoli 03021402 Kinnigoli 03021403 Kinnigoli 03021404 Kinnigoli 03021405

ಕಳೆದ ಆರು ವರ್ಷಗಳಿಂದ ಫೌಡರ್ ಪುಡಿ ಉಪಯೋಗಿಸುತ್ತಿದ್ದೆವು ಈಗ ಗುಣಮಟ್ಟದ ದ್ರಾವಣ ಮಿಶ್ರಣ ತಯಾರಾಗುತ್ತಿದೆ. ಕಡಿಮೆ ವೆಚ್ಚದ ಶುದ್ದೀಕರಣ ಘಟಕವಾಗಿದ್ದು ಈ ಟೆಕ್ನಾಲಜಿಯಿಂದ ಕೇವಲ ಮೂರೇ ತಿಂಗಳಲ್ಲಿ ಉತ್ತಮ ಆರ್ಗಾನಿಕ್ ಗೊಬ್ಬರ ತಯಾರಿಸಬಹುದು.
ಸುರೇಶ್
ವ್ಯವಸ್ಥಾಪಕ, ಜೆ.ಎಮ್.ಎಸ್. ಬಯೊಟೆಕ್ನಾಲಜಿ ಮೈಸೂರು
ಘಟಕದ ಉಸ್ತುವಾರಿ

ಮುಲ್ಕಿ ಹೊಬಳಿಯಲ್ಲಿ ಡ್ರೈನೇಜ್ ಸಮಸ್ಯೆ ಇದ್ದು ಸಕ್ಕಿಂಗ್ ಯಂತ್ರದ ಮೂಲಕ ಸಾಗಿಸುವ ದ್ರವತ್ಯಾಜ್ಯಕ್ಕೆ ಖಾಸಗಿಯವರು ಸುಮಾರು 2500 ರೂ ವಿಸಿದರೆ ಪಂಚಾಯಿತಿ ವತಿಯಿಂದ 1800ರೂ ಬಾಡಿಗೆಯನ್ನು ಪಡೆಯಲಿದ್ದೇವೆ. ಉತ್ತಮ ಫಲಿತಾಂಶ ಬಂದಲ್ಲಿ ಕಡಿಮೆ ವೆಚ್ಚದಲ್ಲಿಯೇ ದೊಡ್ಡ ಪ್ರಮಾಣದ ಘಟಕ ಮಾಡಲಿದ್ದೇವೆ.
ಜನಾರ್ದನ ಕಿಲೆಂಜೂರು
ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ

Comments

comments

Comments are closed.

Read previous post:
ಪುನಿತ್ ರಾಜ್ ಕುಮಾರ್ ಕಟೀಲು ದೇವಳ ಭೇಟಿ

ಕಟೀಲು : ಕನ್ನಡ ಚಲನಚಿತ್ರನಟ ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಭಾನುವಾರ ಕಟೀಲು ಶ್ರಿ ದುರ್ಗಾಪರಮೇಶ್ವರಿ ದೇವಳದಲ್ಲಿ ಭೇಟಿ ನೀಡಿದರು. ನಂತರ ಶ್ರೀ ದೇವಿಗೆ ವಿಶೇಷ...

Close